ಲೋಕದರ್ಶನ ವರದಿ
ರಾಯಬಾಗ 09: ಈದ್-ಮಿಲಾದ್, ಟಿಪ್ಪು ಜಯಂತಿ ರದ್ದು ಹಾಗೂ ಅಯೋಧ್ಯೆಯ ರಾಮ ಮಂದಿರ ಮತ್ತು ಬಾಬರಿ ಮಸೀದಿ ತೀರ್ಪು ಪ್ರಕಟವಾಗಲಿರುವ ಹಿನ್ನಲೆಯಲ್ಲಿ ಪಟ್ಟಣದ ಪೊಲೀಸ ಸ್ಟೇಶನ್ ಆವರಣದಲ್ಲಿ ಡಿವೈಎಸ್ಪಿ ಎಸ್.ವಿ.ಗಿರೀಶ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲ ಸಮುದಾಯದ ಮುಖಂಡರ ಶಾಂತಿ ಪಾಲನಾ ಸಭೆ ಶುಕ್ರವಾರ ಸಂಜೆ ನಡೆಯಿತು.
ಸಭೆಯಲ್ಲಿ ಡಿವೈಎಸ್ಪಿ ಗಿರೀಶ ಮಾತನಾಡಿ, ಬಹುಸಂಸ್ಕೃತಿಯ ಭಾರತ ದೇಶದಲ್ಲಿ ನಾವೆಲ್ಲರೂ ಭಾರತಾಂಬೆಯ ಮಕ್ಕಳಿದ್ದು, ನ್ಯಾಯಲಯದ ತೀರ್ಪು ಯಾರ ಪರವಾಗಿಯೇ ಬಂದರೂ ಮುಕ್ತ ಸಮಾನ ಮನಸ್ಸಿನಿಂದ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಬೇಕು. ತೀರ್ಪಿನ ಪರ ಮತ್ತು ವಿರೋಧವಾಗಿ ವಿಜಯೋತ್ಸವವಾಗಲಿ, ಪ್ರತಿಭಟನೆಯಾಗಲಿ ಮಾಡದೇ ಶಾಂತ ರೀತಿಯಿಂದ ವತರ್ಿಸಬೇಕೆಂದರು.
ಅದೇ ರೀತಿ ನ.10 ರಂದು ಈದ ಮಿಲಾದ ಹಬ್ಬ ಮತ್ತು ಸರಕಾರ ರದ್ದುಗೊಳಿಸಿರುವ ಟಿಪ್ಪು ಜಯಂತಿ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಮುದಾಯದ ಮುಖಂಡರು ಯುವಕರಿಗೆ ತಿಳಿ ಹೇಳಬೇಕೆಂದರು. ಟಿಪ್ಪು ಜಯಂತಿಯಂದು ಧ್ವಜ ಹಿಡಿಯುವದಾಗಲಿ, ಬೈಕ್ ರ್ಯಾಲಿ ಮಾಡುವದಾಗಲಿ ಮಾಡುವದನ್ನು ನಿಷೇಧಿಸಲಾಗಿದೆ. ಟಿಪ್ಪು ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಿಸುವಂತಿಲ್ಲ ಎಂದರು.
ತಹಶೀಲ್ದಾರ ಡಿ.ಎಚ್.ಕೋಮಾರ ಮಾತನಾಡಿ, ಅಯೋಧ್ಯ ರಾಮ ಮಂದಿರ ವಿವಾದಿತ ತೀರ್ಪು ಬಂದ ನಂತರ ಯಾರೂ ವಿಜಯೋತ್ಸವ ಆಚರಿಸಬಾರದು. ವಾಟ್ಸಪ್, ಫೇಸಬುಕ್ ಮತ್ತು ಟ್ವಿಟರಗಳಲ್ಲಿ ತೀರ್ಪಿಗೆ ಸಂಬಂಧಿಸಿದಂತೆ ಸಂದೇಶಗಳನ್ನು ರವಾನಿಸಬಾರದು.
ಯುವಕರು ಯಾವದೇ ಅಹಿಕರ ಘಟನೆಗಳನ್ನು ಮಾಡುವದಾಗಲಿ ಅಥವಾ ಪ್ರಚೋದನೆ ನೀಡುವದಾಗಲಿ ಮಾಡಿದರೆ ಅಂಥವರ ಮೇಲೆ ಕಾನೂನು ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ರಾಯಬಾಗ ಪಿಎಸ್ಐ ಈರಪ್ಪ ರತ್ತಿ, ಕುಡಚಿ ಪಿಎಸ್ಐ ಯಮನಪ್ಪ ಮಾಂಗ, ಮುಖಂಡರಾದ ಸದಾನಂದ ಹಳಿಂಗಳಿ, ಅಬ್ಬಾಸ್ ಮುಲ್ಲಾ, ನಾಮದೇವ ಕಾಂಬಳೆ, ಆದಂ ಪಠಾಣ, ಜಂಗ್ಲು ಅಸೋದೆ, ಮುತ್ತಪ್ಪ ಭಜಂತ್ರಿ, ಬಾಬುಜಾನ ಕಾಲೆಮುಂಡಾಸ, ಬುರಾಣಿ ಶೆಖ, ನಾನಾ ನಸರದಿ, ಅಝರ ಮುಲ್ಲಾ, ಇಮ್ತಿಯಾಜ ಮುಲ್ಲಾ, ಶಿವಾನಂದ ಬಂತೆ ಸೇರಿದಂತೆ ವಿವಿಧ ಸಂಘಟನೆ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.