ಬಳ್ಳಾರಿ 14: ರಂದು ಮೋಕಾ ಹೋಬಳಿಯಲ್ಲಿ ಶ್ರೀ ಮಲ್ಲೇಶ್ವರ ಮಹಾರಥೋತ್ಸವ ಧಾರ್ಮಿಕ, ಪೂಜಾ ವಿಧಿ ವಿಧಾನಗಳ ಕಾರ್ಯಕ್ರಮ ನಿಮ್ಮಿತವಾಗಿ ಮೋಕಾ ಠಾಣಾ ಆವರಣದಲ್ಲಿ ದಿ 14 ರಂದು ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಇದೇ ವೇಳೆಯಲ್ಲಿ ಮಾತನಾಡಿದ ಪಿಎಸ್‌ಐ ಕಾಳಿಂಗ ರವರು ನಾವು ಬೇರೆ ಬೇರೆ ಊರುಗಳಿಂದ ಬರುವಂತ ವಾಹನಗಳಿಗೆ ಪಾರ್ಕಿಂಗ್ ವ್ಯೆವಸ್ಥೆ ಕಲ್ಪಿಸಿದ್ದೇವೆ. ಜಾತ್ರೆ ನಡೆಯುವ ಮುಂಚಿತವಾಗಿ ಸಾಯಂಕಾಲ 3ಗಂಟೆಯ ಮೇಲೆ ಬರುವಂತಹ ವಾಹನಗಳಿಗೆ ಎಂಟ್ರಿ ಇರುವುದಿಲ್ಲ. ಹಾಗೂ ಅಂಗಡಿ ಮುಂಗಟ್ಟುಗಳು ರಸ್ತೆಯ ಬದಿ ಇಕ್ಕಟ್ಟಿಗೆ ಹಾಕಬಾರದು, ಮತ್ತು ಬೇರೆ ಊರಿನಿಂದ ಬರುವ ಭಕ್ತ್ತಾದಿಗಳು ಶಾಂತಿ ಭದ್ರ ವ್ಯವಸ್ಥೆ ಕಾಪಾಡಬೇಕು. ಈ ಜಾತ್ರೆಯು ಸುಗಮವಾಗಿ ಸುವ್ಯವಸ್ಥಿತವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಂತಿಯುತವಾಗಿ ಜಾತ್ರೆ ನಡೆಯುವುದೇ ಪ್ರಮುಖ ಹಾಗೂ ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಈ ಊರಿನ ಮುಖಂಡರು ಹಾಗೂ ಗ್ರಾಮಸ್ಥರು ಸಹಕರಿಸಬೇಕು, ಈ ಜನಸಂದಣಿಯಲ್ಲಿ ಯುವಕರು ಚೇಷ್ಟೇ ಮತ್ತು ಬೈಕ್ ರಾಲಿ ಮಾಡುವುದು, ಇನ್ನು ಮುಂತಾದ ಈ ಜಾತ್ರಾ ಗದ್ದಲದಲ್ಲಿ ಏನಾದರೂ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಅವರ ಮೇಲೆ ಶೀಘ್ರದಲ್ಲಿ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಈ ಸಭೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಕಾನೂನಿನ ಬಗ್ಗೆ ಪೂರ್ವಭಾವಿಯಾಗಿ ಮಾಹಿತಿ ನೀಡಿದರು.
ತರುವಾಯ ಮಾತನಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳಾದ ಬಸವರಾಜ್ ಅವರು 2 ದಿನಗಳ ಕಲಾ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ, ಯಾವುದಾದರೂ ಅನಾಹುತ ಸಂಭವಿಸದಲ್ಲಿ 108ಕ್ಕೆ ಕರೆ ಮಾಡಬೇಕೆಂದು ತಿಳಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಮಾತನಾಡಿದ ಪಿ,ಎಂ ಮಲ್ಲಯ್ಯ ಅವರು ಜಾತ್ರೆ ಸಂದರ್ಭದಲ್ಲಿ ಎತ್ತರದ ಬ್ಯಾನರ್ ಹಾಕುವುದರಿಂದ ಯಾವುದಾದರೂ ದುರ್ಘಟನೆ ನಡೆಯಭಾರದೆಂದು ಮುಖ್ಯ ಸಪ್ಲೈಯನ್ನು ತೆಗೀತೀವಿ ಗ್ರಾಮಸ್ಥರು ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೋಕಾ ಠಾಣಾ ವ್ಯಾಪ್ತಿಯ ವೃತ ನೀರೀಕ್ಷಕರು(ಸಿಪಿಐ ) ರುದ್ರ್ಪ ರವರು, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ,ವೆಂಕಮ್ಮ ಡಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಬ್ಬಂದಿಯವರು ದೇವಸ್ಥಾನ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಕೆ. ಇ. ಬಿ. ಇಲಾಖೆ ಅಧಿಕಾರಿಗಳು, ಗ್ರಾಮದ ಎಲ್ಲಾ ಸಮಾಜ ಸಮುದಾಯದ ಹಿರಿಯರು, ಮುಖಂಡರು, ಎಲ್ಲಾ ಮೇಟಿಯವರು, ಕ.ರ.ವೇ. ಪದಾಧಿಕಾರಿಗಳು, ಗ್ರಾಮದ ಯುವಕರು, ಸೇರಿದಂತೆ ಉಪಸ್ಥಿತರಿದ್ದರು.