ಸಂಪತ್ತಕಿಂತ ಶಾಂತಿ, ನೆಮ್ಮದಿಯ ಬದುಕು ಮುಖ್ಯ-ಸ್ವಾಮೀಜಿ
Peace and a peaceful life are more important than wealth - Swamiji
ಸಂಪತ್ತಕಿಂತ ಶಾಂತಿ, ನೆಮ್ಮದಿಯ ಬದುಕು ಮುಖ್ಯ-ಸ್ವಾಮೀಜಿ
ಶಿಗ್ಗಾವಿ 10: ನಾವು ಮಾಡುವ ಪರೋಪಕಾರದ ಗುಣಗಳು ಭಕ್ತಿ ಮಾರ್ಗ ತೋರುವಂತೆ ಮಾಡುತ್ತವೆ, ಹೀಗಾಗಿ ಮನುಷ್ಯ ಪ್ರಾಮಾಣಿಕವಾಗಿ ದುಡಿದು ಗಳಿಸಿದ ಸಂಪತ್ತಿನಲ್ಲಿ ಅಲ್ಪಸ್ವಲ್ಪ ದಾನ, ಧರ್ಮದ ಕಾಯಕ ಮಾಡಬೇಕು, ಮಕ್ಕಳಿಗೆ ಶಿಕ್ಷಣದ ಜೊತೆಗೆ ನೆಲದ ಮೂಲ ಸಂಸ್ಕಾರಗಳನ್ನು ತುಂಬಬೇಕು ಎಂದು ಕೂಡಲದ ಗುರುಮಹೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಗಂಜೀಗಟ್ಟಿ ಚರಮೂರ್ತೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ನಾಗಮೂರ್ತಿ ಪ್ರತಿಷ್ಠಾಪನೆ, ವಿವಿಧ ಹೋಮ-ಹವನ ಮತ್ತು ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಹಣ, ಆಸ್ತಿ ಹಾಗೂ ಅಧಿಕಾರಗಿಂತ ಶಾಂತಿ, ನೆಮ್ಮದಿಯ ಬದುಕು ಮುಖ್ಯವಾಗಿದೆ. ಹೀಗಾಗಿ ಭಕ್ತಿ ಮಾರ್ಗದಲ್ಲಿ ನಡೆದಾಗ ಬದುಕು ಯಶಸ್ವಿ ಕಾಣಲು ಸಾಧ್ಯವಿದೆ. ಶ್ರಾವಣ ಮಾಸದಲ್ಲಿ ಪರಿಶುದ್ದವಾದ ಮನಸ್ಸಿನಿಂದ ಪ್ರಾರ್ಥಿಸುವುದು, ಧಾರ್ಮಿಕ ವಿಧಿವಿಧಾನಗಳಲ್ಲಿ ನಿರತರಾಗುವುದನ್ನು ಕಾಣುತ್ತೇವೆ, ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರು ಸಹ ತಿನ್ನುವುದು ಅನ್ನವನ್ನು ಹಣವಲ್ಲ. ಹೀಗಾಗಿ ಅನ್ನವನ್ನು ಹಾಳು ಮಾಡಬೇಡಿರಿ ಎಂದರು.
ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ನೇತೃತ್ವವಹಿಸಿ ಮಾತನಾಡಿ, ಸಂಸ್ಕಾರಯುತ ಬದುಕು ಮನುಷ್ಯನ ಮೌಲ್ಯಗಳನ್ನ ಹೆಚ್ಚು ಮಾಡುತ್ತದೆ, ಹೀಗಾಗಿ ಶ್ರಾವಣ ಮಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸುವ ಮೂಲಕ ಪಾವನರಾಗಬೇಕು. ಪ್ರತಿಯೊಬ್ಬರು ಸಂಸ್ಕಾರ ಪಡೆಯಬೇಕು. ಅದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಹಿರಿಯೂರ ಗುಬ್ಬಿಮಠದ ಗುರುನಂಜುಡೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮುಖಂಡರಾದ ಬಸಲಿಂಗಪ್ಪ ನರಗುಂದ, ಮುತ್ತುರಾಜ ಕ್ಷೌರದ, ಬಸವರಾಜ ಹಡಪದ, ಶಿವರಾಜ ಕ್ಷೌರದ, ಮಹಾಲಿಂಗಪ್ಪ ಹಡಪದ, ಕುಸಮಾ, ಕ್ಷೌರದ, ಸುವರ್ಣ ಹಡಪದ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 