ಸಾಮಾಜಿಕ ನ್ಯಾಯಕ್ಕಾಗಿ ಸೇವೆ: ಗೋಣೆಪ್ಪ ಹರಿಜನಗೆ ಹೊಸ ಜವಾಬ್ದಾರಿ

ಸಾಮಾಜಿಕ ನ್ಯಾಯಕ್ಕಾಗಿ ಸೇವೆ: ಗೋಣೆಪ್ಪ ಹರಿಜನಗೆ ಹೊಸ ಜವಾಬ್ದಾರಿ   Service for social justice: A new responsibility for Goneppa Harijan

ಲಕ್ಷ್ಮೇಶ್ವರ " 28 : ತಾಲೂಕಿನ ಬಟ್ಟೂರು ಗ್ರಾಮದ ಗೋಣೆಪ್ಪ ದು. ಹರಿಜನ ತಮ್ಮನ್ನು ಲಕ್ಷೇಶ್ವರ ತಾಲೂಕಾ ಖಜಾಂಚಿ ಹುದ್ದೆಗೆ ನೇಮಕ ಮಾಡಿ ಆದೇಶ ಪತ್ರನೀಡಲಾಗಿದೆ.ಬಾಬಾಸಾಹೇಬ ಡಾ. ಬಿ.ಆರ್‌.ಅಂಬೇಡ್ಕರ ಹಾಗೂ ಪ್ರೊ. ಬಿ. ಕೃಷ್ಣಪ್ಪ ನವರ ತತ್ತ್ವ ಮತ್ತು ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು ಸಮಿತಿಯ ನಿಯಮಾವಳಿಗೆ ಬದ್ಧವಾಗಿ, ಶೋಷಿತ ಸಮುದಾಯಗಳ ಏಳಿಗೆಗಾಗಿ, ಭಾರತ ಸಂವಿಧಾನದ ಆಶಯಗಳ ಅನುಷ್ಠಾನಕ್ಕಾಗಿ, ಅನ್ಯಾಯದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ, ನ್ಯಾಯ, ನಿಷ್ಠೆ, ಪ್ರಾಮಾಣಿಕತೆಯಿಂದ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಸಂಘಟನೆಯನ್ನು ಬಲವರ್ಧನೆಗೊಳಿಸುವ ಜವಾಬ್ದಾರಿ ತಮ್ಮದಾಗಿರುತ್ತದೆ. ಹಾಗೂ ಈ ಆದೇಶವು ಮುಂದಿನ ಆದೇಶದ ವರೆಗೆ ಜಾರಿಯಲ್ಲಿರುತ್ತದೆ ಎಂದು ದಿನಾಂಕ : 28-06-2026 ರಂದು ತಮಗೆ ಆದೇಶ ಪತ್ರವನ್ನು ನೀಡಲಾಗಿದೆ.ಈ ಸಮಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಇದ್ದರು