ಕೊಪ್ಪಳ: ನ. 10ರಂದು ಆಚರಿಸಲಿರುವ ಈದ್-ಮಿಲಾದ್ ಹಬ್ಬ ಹಾಗೂ ಟಿಪ್ಪು ಜಯಂತಿ ಆಚರಣೆ ಹಾಗೂ ಅಯೋಧ್ಯೆ ವಿಷಯವಾಗಿ ಸರ್ಮೋಚ್ಛ ನ್ಯಾಯಾಲಯವು ನೀಡಲಿರುವ ತೀರ್ಪು ಹಿನ್ನೆಲೆಯಲ್ಲಿ ನ. 07 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರ ಅಧ್ಯಕ್ಷತೆಯಲ್ಲಿ ಪೊಲೀಸ್ ಕಾರ್ಯಾಲಯದಲ್ಲಿ ಕೊಪ್ಪಳ ನಗರದ ಹಿಂದೂ ಹಾಗೂ ಮುಸ್ಲಿಂ ಮುಖಂಡರುಗಳ ಜೊತೆ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಲು ಸೌಹಾರ್ದ ಸಭೆ ನಡೆಸಲಾಯಿತು.
ಈದ್-ಮೀಲಾದ್ ಹಬ್ಬ ಹಾಗೂ ಟಿಪ್ಪು ಜಯಂತಿ ಆಚರಣೆ ಸಮಯದಲ್ಲಿ ಶಾಂತತೆ ಕಾಪಾಡಲು ಹಾಗೂ ಅಯೋಧ್ಯೆ ವಿಷಯವಾಗಿ ಸರ್ವೋಚ್ಛ ನ್ಯಾಯಾಲಯವು ನೀಡಲಿರುವ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಯಾವುದೇ ವಿಜಯೋತ್ಸವ ಆಚರಣೆ ಅಥವಾ ಕರಾಳ ದಿನಾಚರಣೆ ಮಾಡಬಾರದು. ಈದ್-ಮೀಲಾದ್ ಹಬ್ಬದ ಅಂಗವಾಗಿ ಆಯೋಜಿಸಲಾಗುವ ಮೆರವಣಿಗೆಯಲ್ಲಿ ಶಾಂತತೆ ಕಾಪಾಡಲು, ಮೆರವಣಿಗೆ ಸಮಯದಲ್ಲಿ ನೀರು ಹಾಗೂ ಫಲಾಹಾರ ವ್ಯವಸ್ಥೆ ಕುರಿತು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಕುಡಿಯುವ ನೀರು ಹಾಗೂ ಫಲಾಹಾರ ಮತ್ತು ಆಹಾರವನ್ನು ಆಹಾರ ಪರಿವೀಕ್ಷಕರಿಂದ ತಪಾಸಣೆ ಮಾಡಿದ ನಂತರ ಸೇವನೆ ಮಾಡಲು ಮುಖಂಡರು ಕ್ರಮ ವಹಿಸಬೇಕು. ಮೆರವಣಿಗೆ ತಗೆಯಲು, ದ್ವನಿ ವರ್ದಕ ಬಳಸಲು, ಪ್ಲೆಕ್ಸ್ಗಳನ್ನು ಅಳವಡಿಸಲು ಸಂದಂಧಿಸಿದ ಅಧಿಕಾರಿಗಳಿಂದ ಪರವಾನಗಿ ಪಡೆಯುವಂತೆ ಸೂಚಿಸಲಾಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಯಾವುದೇ ಕೋಮಿನ ಭಾವನೆಗಳಿಗೆ ಧಕ್ಕೆ ತರುವಂತ ಘೋಷಣೆ ಕೂಗದಂತೆ ನೋಡಿಕೊಳ್ಳಬೇಕು.
ಅಯೋಧ್ಯೆ ವಿಷಯವಾಗಿ ಸವರ್ೋಚ್ಛ ನ್ಯಾಯಾಲಯವು ನೀಡಲಿರುವ ತೀಪರ್ಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧವಾಗಿ ಯಾವುದೇ ತರಹದ ಪೋಸ್ಟ್ಗಳನ್ನು, ಧಾಮರ್ಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ಮಾಹಿತಿಯನ್ನು ಪೋಸ್ಟ್ ಮಾಡಬಾರದು. ಒಂದು ವೇಳೆ ಇಂತಹ ಘಟನೆಗಳು ಜರುಗಿದಲ್ಲಿ ನಿದರ್ಾಕ್ಷಿಣ್ಯವಾಗಿ ಶಾಂತತೆ ಕದಡುವ ವ್ಯಕ್ತಿಗಳ ಅಥವಾ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಯಿತು.
ಈದ್ ಮಿಲಾದ್ ಹಬ್ಬದ ನಂತರ ಅಳವಡಿಸಲಾದ ಫ್ಲೆಕ್ಸ್ಗಳನ್ನು ಕೂಡಲೇ ತೆರವು ಮಾಡಬೇಕು. ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಸಮಾಜದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ಕೈ ಜೋಡಿಸಲು ಉಭಯ ಕೋಮಿನ ಮುಖಂಡರಲ್ಲಿ ಮನವಿ ಮಾಡಲಾಯಿತು.
ಡಿ.ವೈ.ಎಸ್.ಪಿ. ವೆಂಕಟಪ್ಪ ನಾಯಕ್ ಅವರು ಸಭೆಗೆ ಆಗಮಿಸಿದ ಎಲ್ಲ ಮುಂಖಡರುಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ಇನ್ಸ್ಪೆಕ್ಟರ್ ನಗರ ಠಾಣೆ, ಪೊಲೀಸ್ ಇನ್ಸ್ಪೆಕ್ಟರ್ ಗುಪ್ತದಳ ಘಟಕ, ಅಪ್ಪಣ್ಣ ಪದಕಿ, ಸುರೇಶ ದರಕದಕಟ್ಟಿ, ಯಮನೂರಪ್ಪ, ಇಬ್ರಾಹಿಂಸಾಬ್ ಅಡ್ಡೆವಾಲೆ, ಗೌಸಮೊಹೀಮುದ್ದೀನ್, ಮಲ್ಲಪ್ಪ ಕವಲೂರು, ಸೈಯದ್ ನಾಸಿರುದ್ಧಿನ್, ಶವಕುಮಾರ್ ಕವಲೂರು, ಸಮೀರ್ ಅಳವಂಡಿ, ಶ್ರವಣಕುಮಾರ ಈರಣ್ಣ ಮಾನ್ವಿ ಪಾಶಾ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.