ಯರಗಟ್ಟಿ 07: ಸರ್ಕಾರ ಹಾಗೂ ಸ್ಥಳೀಯ ಆಡಳಿತ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಅಭಿವೃದ್ಧಿ ಕೆಲಸ ಮಾಡಲು ನಿಗದಿತ ಸಮಯದಲ್ಲಿ ಜನರು ತೆರಿಗೆ ಪಾವತಿಸಬೇಕು ಎಂದು ಗ್ರಾ. ಪಂ. ಪಿಡಿಓ ಎ. ಬಿ. ಬಂಗಾರಿ ಹೇಳಿದರು.
ಯರಗಟ್ಟಿ ಸಮೀಪದ ಸತ್ತಿಗೇರಿ ಗ್ರಾಪಂ ವ್ಯಾಪ್ತಿಯ ಸತ್ತಿಗೇರಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ, ಗ್ರಾಪಂಯಿಂದ ಆಯೋಜಿಸಿದ್ದ ವಿಶೇಷ ತೆರಿಗೆ ಅಭಿಯಾನಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಜನರಿಗೆ ಅಗತ್ಯ ಸೌಲಭ್ಯಗಳಾದ ಕುಡಿವ ನೀರು, ಸಿಸಿ ರಸ್ತೆ ಚರಂಡಿ ನಿರ್ಮಾಣ, ಬೀದೀದೀಪ, ಉತ್ತಮ ರಸ್ತೆ ನಿರ್ಮಾಣ ಸ್ಥಳೀಯ ಆಡಳಿತದ ಕೆಲಸ. ಈ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ತೆರಿಗೆ ವಸೂಲಿ ಅಭಿಯಾನ ರಾಜ್ಯಾದ್ಯಂತ ಕೈಗೊಳ್ಳಲಾಗುತ್ತಿದೆ ಎಂದರು.
ಪಂಚಾಯತ್ ರಾಜ್ ಇಲಾಖೆ ಇಓ ಆನಂದ ಬಡಕುಂದ್ರಿ ಮಾತನಾಡಿ, ಸರ್ಕಾರದ ಸೂಚನೆಯಂತೆ ಡಿ.5ರಿಂದ ವಿಶೇಷ ತೆರಿಗೆ ಅಭಿಯಾನ ನಡೆಸಲಾಗುತ್ತಿದೆ. ಜನರ ಮನೆಬಾಗಿಲಿಗೆ ಹೋಗಿ ಅರಿವು ಮೂಡಿಸಲಾಗುವುದು ಎಂದರು.
ಗ್ರಾ. ಪಂ. ಕಾರ್ಯದರ್ಶಿ ಸುರೇಶ ತೋಟದ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸಿದ್ದಪ್ಪ ಬೆಕ್ಕನ್ನವರ, ಕರ ವಸೂಲಿಗಾರ ರಮೇಶ ಕೋಟ್ರಶೆಟ್ಟಿ, ವೀರಯ್ಯ ಹಿರೇಮಠ, ಚಂದ್ರಗೌಡ ಪಾಟೀಲ, ಕ್ಲಕ್ ಕೃಷ್ಣಾ ಕುಲಮೂರ ಸೇರಿದಂತೆ ಗ್ರಾ. ಪಂ. ಸಿಬ್ಬಂದಿ ವರ್ಗದವರು ಇದ್ದರು.
ಬೆಳಗಾವಿ ಜಿಲ್ಲೆಯಲ್ಲಿ ವಿಶೇಷ ತೆರಿಗೆ ಅಭಿಯಾನದ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ವಸೂಲಾತಿ ಮಾಡುವ ಸಲುವಾಗಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಸಿಇಒ ಕೊಟ್ಟಿರುವ ಟಾಸ್ಕು ನಿಜಕ್ಕೂ ರೋಮಾಂಚನಕಾರಿ ಆಗಿತ್ತು ಅಂದ್ರೆ ತಪ್ಪಾಗಲಾರದು, ಏಕೆಂದರೆ ಐದು ಸುತ್ತಿನ ವಸೂಲಾತಿಯ ಸಮಯದ ಸಂದರ್ಭವನ್ನು ನೋಡಿದಾಗ ಇದರಲ್ಲಿ ಪ್ರತಿ ಸುತ್ತಿನಲ್ಲಿ ಸತ್ತಿಗೇರಿ ಗ್ರಾಮ ಪಂಚಾಯಿತಿ ಒಟ್ಟು 734838/- ವಸೂಲಿ ಮಾಡಿ ಯರಗಟ್ಟಿ-ಸವದತ್ತಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿ ಆದರಿಂದ ಜಿಲ್ಲಾ ಪಂಚಾಯತ ಸಿಇಓ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆನಂದ ಬಡಕುಂದ್ರಿ ತಾ. ಪಂ. ಇಓ ಯರಗಟ್ಟಿ-ಸವದತ್ತಿ