ಮೋದಿ - ಶಾ ಹೆಣೆದ ಸೂತ್ರಕ್ಕೆ ಪವಾರ್ ಮಾರುಹೋದರೆ..!!

ನವದೆಹಲಿ, ನ 23  ಮಹಾರಾಷ್ಟ್ರ ರಾಜಕೀಯಲದಲ್ಲಿ  ಹೊಸ ಮತ್ತು ಅನಿರೀಕ್ಷಿತ  ಬೆಳವಣಿಗೆಗೆ  ಕಾರಣ ಏನು?   ಮೊನ್ನೆಯಷ್ಟೆ  ಉದ್ದವ ಠಾಕ್ರೆ  ಮುಂದಿನ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದ  ಶರದ್ ಪವಾರ್ ಕೊನೆಯಲ್ಲಿ ನಿಲುವು ಬದಲಿಸಲು ಕಾರಣವೇನು? ಇದರ ಹಿಂದಿನ  ಶಕ್ತಿ ಯಾರು?   ಎಂಬ ಚಚರ್ೆಗಳು ನಡೆಯುತ್ತಿವೆ .  ಇದರ ಹಿಂದೆ ಪ್ರಧಾನಿ  ಮೋದಿ ಮತ್ತು ಬಿಜೆಪಿ ಅಧ್ಯಕ್ಷ  ಅಮಿತ್ ಶಾ  ಅವರ ಕಾಣದ ಕೈಗಳು  ಕೆಲಸ ಮಾಡಿವೆ ಎಂಬ ಮಾತು ಕೇಳಿಬಂದಿದೆ.  ಇದಕ್ಕೆ ಪೂರಕ ಎಂಬಂತೆ ಗುರುವಾರ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ  ಜೊತೆ  ಪವಾರ್ 40 ನಿಮಿಷಗಳ ಕಾಲ ಮಾತುಕತೆ ಮಾಡಿದ್ದರು.  ಇಲ್ಲಿಯೇ  ಹೊಸ ಸರಕಾರ  ರಚನೆಯ ಮಾತುಗಳು ಕೇಳಿ ಬಂದು, ಮಾತುಕತೆ  ನಡೆದು ಪವಾರ್ ಅವರ ನಿಲುವು  ಕೂಡ ಬದಲಾಯಿತು ಎಂದೂ   ಉನ್ನತ ಮೂಲಗಳು ಹೇಳಿವೆ.  ಒಟ್ಟಿನಲ್ಲಿ  ಮೋದಿ ಮತ್ತು ಶಾ ಹೆಣೆದ ಸೂತ್ರಕ್ಕೆ  ಪವಾರ್ ಮಾರು  ಹೋಗಿ ರಾತ್ರೋರಾತ್ರಿ ಯಾರು ಊಹೆ ಮಾಡದ ರಾಜಕೀಯ ಬೆಳವಣಿಗೆ ನಡೆಯಿತು ಎಂದೂ  ಹೇಳಲಾಗಿದೆ.ಇದರ ಜೊತೆಗೆ ಉದ್ದವ ಠಾಕ್ರೆ ಅವರ  ಅಧಿಕಾರದ ಮಿತಿಮೀರಿದ  ಆಸೆಯೂ ಕಾರಣ ಎನ್ನಲಾಗಿದೆ.