ಪಟ್ಟಸಾಲಿ ನೇಕಾರ ನೌಕರರ ಸಂಘ: ನಿವೃತ್ತ ದಂಪತಿಗಳ ಸನ್ಮಾನ

ರಾಣೇಬೆನ್ನೂರು: ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ಪಟ್ಟಸಾಲಿ ನೇಕಾರ ನೌಕರರ ಸಂಘವು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿತ್ತು.  ಸಮಾರಂಭದಲ್ಲಿ ಬಿ.ಎಸ್.ಎನ್.ಎಲ್. ನಿವೃತ್ತ ಉದ್ಯೋಗಿಗಳಾದ ಲಿಂಗರಾಜ ಮತ್ತು ನಿರ್ಮಲಾ ಡಿ, ದುರ್ಗದ್ ಅವರನ್ನು ಸಂಘಟನೆಯ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಡಾ|| ಹೆಚ್.ಕೆ.ಕದರಮಂಡಲಗಿ, ಶ್ರೀರಾಮ ಭಂಡಾರಿ, ಪ್ರಕಾಶ ಚನ್ನಪ್ಪನವರ, ಲಕ್ಷ್ಮಣ ಸಾಲಿ, ಅಶೋಕ ಕದರಮಂಡಲಗಿ, ರಾಮಣ್ಣ ಸಾಲಿ, ಶಿವಾನಂದ ಬೆನ್ನೂರು, ಡಾ|| ರಾಜೇಶ್ವರಿ ಹೆಚ್., ಚಂದ್ರಶೇಖರ ಚಿನ್ನಿಕಟ್ಟಿ, ಎನ್.ದೇವೆಂದ್ರಪ್ಪ, ಶಾರದಾ ಬುಳ್ಳಾಪುರ, ತಿಪ್ಪೇಸ್ವಾಮಿ ಹಳ್ಳದದಂಡಿ, ಗೋಪಾಲ ಗುತ್ತಲ, ಶ್ರೀಧರ ಶೇಷಗಿರಿ ಸೇರಿದಂತೆ ಮತ್ತಿತರ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.