ಗುಳೇದಗುಡ್ಡ03: ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಕಳೆದ 4 ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಗುಳೇದಗುಡ್ಡ ಸಂಗೀತ ವಿದ್ಯಾಲಯದ ಪ್ರಾಚಾರ್ಯ, ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯ ಅಖಂಡೇಶ್ವರ ಪತ್ತಾರ ಅವರು ಕಲಬುರಗಿಯಲ್ಲಿ ಇದೇ 5,6,7 ರಂದು ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸುಗಮ ಸಂಗೀತ ಕಾರ್ಯಕ್ರಮ ಪ್ರದರ್ಶನ ಮಾಡಲಿದ್ದಾರೆ.
ಸಂಗೀತ ಮನೆತನದಲ್ಲಿ ಜನಿಸಿದ ಹಿಂದುಸ್ಥಾನಿ ಗಾಯಕ ಅಖಂಡೇಶ್ವರ ಪತ್ತಾರ ಅವರು, ಮೊದಲು ತಮ್ಮ ತಂದೆ ದಿ. ಮಲ್ಲೇಶಪ್ಪ ಪತ್ತಾರ ಗಾವಾಯಿಗಳಿಂದ ಸಂಗೀತ ಕಲಿಕೆಗೆ ಶ್ರೀಕಾರ ಹಾಕಿಕೊಂಡರು. ನಂತರ ಗದುಗಿನ ಶಿವಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಹಾಮರ್ೋನಿಯಂ, ಅಭ್ಯಾಸ ಮಾಡಿದ ಅಖಂಡೇಶ್ವರ ವಿದ್ವತ್ ಹಾಡುಗಾರಿಕೆ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ರಾಜ್ಯದ ತುಂಬೆಲ್ಲ ಸಂಚರಿಸಿ ತಮ್ಮ ಸಂಗೀತ ಕಲೆಯನ್ನು ಪ್ರದಶರ್ಿಸಿ ರಾಜ್ಯದ ಪ್ರತಿಭಾವಂತ ಸಂಗೀತ ಕಲಾವಿದರಾಗಿ ಚಿರಪರಿಚಿತರಾಗಿದ್ದಾರೆೆ.
ಕಲಬುರಗಿಯ ಸಾಹಿತ್ಯ ಸಮ್ಮೇಳನದಲ್ಲಿ ಗಾಯಕ ಅಖಂಡೇಶ್ವರ ಪತ್ತಾರ ಅವರು ತಮ್ಮ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಹಿರಿಯ ಸಾಹಿತಿ ಡಾ. ಎಸ್.ಎಸ್.ಬಸುಪಟ್ಟದ ಅವರ 'ಅದೇನೆಲ ಅದೇಜಲ' ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಅವರ 'ಎಲ್ಲಿ ಜಾರಿತೂ ಮನವ' ತಮ್ಮ ಸ್ವರಚಿತ ಕವನ 'ನಿನನ್ನು ಕಂಡಾಗ ನೆನಪಿಗೆ ಬಂದಿತು' ಹಾಗೂ ವಚನ ಗಾಯನ ಪ್ರದರ್ಶನ ಮಾಡಲಿದ್ದಾರೆ.
ಗಾಯಕ ಅಖಂಡೇಶ್ವರ ಪತ್ತಾರ ಈಗಾಗಲೇ ರಾಷ್ಟ್ರೀಯ ಪಟ್ಟದಕಲ್ಲು ಉತ್ಸವ, ನವರಸಪುರ ಉತ್ಸವ, ಮೈಸೂರು ದಸರಾ ಸಂಗೀತೋತ್ಸವ, ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನರ್ಾಟಕ ಸಂಗೀತ ನೃತ್ಯ ಅಕಾಡೆಮಿ ಸೇರಿದಂತೆ ರಾಜ್ಯ-ರಾಷ್ಟಮಟ್ಟದ ಸಂಗೀತ, ಸಾಹಿತ್ಯ ಉತ್ಸವಗಳಲ್ಲಿ ಪಾಲ್ಗೊಂಡು ತಮ್ಮ ಸಂಗೀತ ಕಲೆಯನ್ನು ಪ್ರದಶರ್ಿಸಿದ್ದಾರೆ. ಸಂಸ್ಥಾನಿಕ ಮಠಾಧೀಶರಿಂದ ಹಾಗೂ ಹೆಸರಾಂತ ಸಾಹಿತಿ ಸಂಗೀತ ದಿಗ್ಗಜರಿಂದ ಹತ್ತು ಹಲವು ಸಂಗೀತ ಪ್ರಶಸ್ತಿ ಸನ್ಮಾನ, ಬಿರುದುಗಳು ಅಖಂಡೇಶ್ವರ ಅವರಿಗೆ ಲಭಿಸಿವೆ.
ಅಖಂಡೇಶ್ವರ ಅವರು ಜಿಲ್ಲೆಯ ಗುಳೇದಗುಡ್ಡದಲ್ಲಿ ಕಳೆದ 4 ದಶಕಗಳ ಹಿಂದೆ ಸ್ಥಾಪಿಸಿದ ಶ್ರೀ ಗಾನಯೋಗಿ ಪಂಚಾಕ್ಷರ ಸಂಗೀತ ವಿದ್ಯಾಲಯದಲ್ಲಿ ಅನೇಕ ಬಡಮಕ್ಕಳಿಗೆ ಸಂಗೀತ ತರಬೇತಿ ನೀಡಿ ಪ್ರತಿಭಾನ್ವಿತ ಸಂಗೀತಗಾರರನ್ನು ಹಾಗೂ ಸಂಗೀತ ಶಿಕ್ಷಕರನ್ನು ತಯಾರಿಸಿ ಕೊಡುಗೆಯನ್ನಾಗಿ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.