ಕೊಪ್ಪಳ 27: ವಿದ್ಯುತ್ ಗುತ್ತಿಗೆದಾರರ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ಹುಲಿಗಿ ಗ್ರಾಮದ ಪ್ರಕಾಶ್ ಎಲೆಕ್ಟ್ರಿಕಲ್ಸ್ ಮಾಲಿಕರಾದ ಪ್ರಕಾಶ್ ಬೈಲ ಪತ್ತಾರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೊಪ್ಪಳ ತಾಲ್ಲೂಕು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಫೆ.25 ಮಂಗಳವಾರ ಚುನಾವಣೆ ನಡೆಯಿತು.
ಸರ್ಕಾರದಿಂದ ಅನುಮತಿ ಪಡೆದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಪ್ರಕಾಶ ಬೈಲ ಪತ್ತಾರ್ 2025 ರಿಂದ 2028 ವರೆಗಿನ 3 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲೂಕಾ ಸಮಿತಿ ಎಲ್ಲಾ ಪದಾಧಿಕಾರಿಗಳು, ಸದಸ್ಯರಿಗೆ ಪ್ರಕಾಶ್ ಬೈಲಪತ್ತಾರ್ ಅಭಿನಂದನೆ ಸಲ್ಲಿಸಿದರು.