ಗುಳೇದಗುಡ್ಡ27: ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಮಾನತೆಯ ಆಧಾರದ ಮೇಲೆ ರಚಿತವಾದ ಇಲ್ಲಿನ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಿ, ಅದನ್ನು ಪಾಲಿಸಿದಾಗ ದೇಶ ಭಕ್ತಿ ಕಾಣಲು ಸಾಧ್ಯವೆಂದು ತಹಸೀಲ್ದಾರ ಜಿ.ಎಂ. ಕುಲಕರ್ಣಿ ಹೇಳಿದರು.
ಅವರು ಭಾನುವಾರ ಪಟ್ಟಣದಲ್ಲಿ ನಡೆದ ತಾಲೂಕು ಆಡಳಿತದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 71 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗುಳೇದಗುಡ್ಡ ಪಟ್ಟಣ ನೂತನ ತಾಲೂಕು ಕೇಂದ್ರವಾಗಿ ರಚನೆಗೊಂಡ ಬಳಿಕ ಈ ಬಾರಿ ಪ್ರಥಮ ಬಾರಿಗೆ ತಾಲೂಕು ಆಡಳಿತದಿಂದ ಧ್ವಜಾರೋಹಣ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಅದ್ಧೂರಿಯಾಗಿ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಲಾಗುವುದು. ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನು ಏನು ಕೊಡುಗೆ ನೀಡಿದ್ದೇನೆ ಎಂಬುದುನ್ನು ನಾವು ಅರಿತುಕೊಳ್ಳಬೇಕು. ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಪುರಸಭೆಯಿಂದ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಸ್ವಾತಂತ್ರ್ಯಯೋಧರ ಕುಟುಂಬದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಪಂ ಸದಸ್ಯ ಸರಸ್ವತಿ ಮೇಟಿ, ತಾಪಂ ಸದಸ್ಯ ಕನಕಪ್ಪ ಬಂದಕೇರಿ, ಪುರಸಭೆ ಮುಖ್ಯಾಧಿಕಾರಿ ರವಿಂದ್ರನಾಥ ಅಂಗಡಿ, ಪುರಸಭೆ ಸದಸ್ಯರಾದ ಉಮೇಶ ಹುನಗುಂದ, ಶ್ಯಾಮ ಮೇಡಿ, ವಂದನಾ ಭಟ್ಟಡ, ವಿದ್ಯಾ ಮುರಗೋಡ, ಶಿಲ್ಪಾ ಹಳ್ಳಿ, ವಿನೋದ ಮದ್ದಾನಿ, ಅಂಬರೀಶ ಕವಡಿಮಟ್ಟಿ, ಷರೀಫಾ ಮಂಗಳೂರು, ಗೋವಿನಕೊಪ್ಪ, ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಉಪಪ್ರಾಚಾರ್ಯ ಎಂ.ಎಂ.ಚಲವಾದಿ, ಪ್ರಾಚಾರ್ಯ ವಿಠ್ಠಲ ಕಳಸಾ, ಕಂದಾಯ ನೀರಿಕ್ಷಕ ಮಹಾಂತೇಶ ಅಂಗಡಿ, ಶಿವಾನಂದ ಆಲೂರ, ಪುರಸಭೆ ವ್ಯವಸ್ಥಾಪಕ ರಮೇಶ ಪದಕಿ, ಆರ್.ಎನ್.ಕಾಟವಾ, ಸೇರಿದಂತೆ ಶಾಲಾ ಕಾಲೇಜುಗಳ ಶಿಕ್ಷಕರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ,ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕಾಟಾಚಾರದ ಆಚರಣೆ: ತಾಲೂಕು ಕೇಂದ್ರವಾದ ಬಳಿಕ ಪ್ರಥಮ ಬಾರಿಗೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ಶಿಕ್ಷಣ ಇಲಾಖೆ ಸರಿಯಾಗಿ ಕಾಳಜಿವಹಿಸದಂತೆ ಕಂಡುಬಂದಿತು. ಕೇವಲ ಬೆರಣಿಕೆಯಷ್ಟು ಶಾಲೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಬಂದ ವಿದ್ಯಾಥರ್ಿಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕಾರ್ಯಕ್ರಮದ ಮಧ್ಯದಲ್ಲಿಯೇ ಎದ್ದು ಹೋಗುತ್ತಿರುವುದ್ಯುಭಾಸವೆನಿಸಿತು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಹೋರಾಡಿದ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಮಳಿಯವ್ವ ರಂಜಣಗಿ, ಗುರವ್ವ ಗಂಜ್ಯಾಳ ಅವರಿಗೆ ಸನ್ಮಾನಿಸಿದರು. ಆದರೆ ಕಾಟಾಚಾರಕ್ಕೆ ಎಂಬಂತೆ ಸನ್ಮಾನ ಕೇವಲ ಹಾರ ಮತ್ತು ಶಾಲಿಗೆ ಸೀಮಿತ ಮಾಡಿದ್ದು ಎದ್ದು ಕಾಣುತ್ತಿತ್ತು. ಅಲ್ಲದೇ ಅವರ ಪರಿಚಯವನ್ನು ಸಹ ಮಕ್ಕಳಿಗೆ ಹಾಗೂ ಸಭೆಗೆ ಮಾಡಿಕೊಡದೇ ಇರುವುದು ಸಾರ್ವಜನಿಕರಿಗೆ ಅಸಮಾಧಾನ ತಂದಿತು.
ಹೊಸ ಹಾಸ್ಟೇಲ್ ಕಟ್ಟಡ ನಿಮರ್ಾಣಕ್ಕೆ ಕೇಂದ್ರದಿಂದ 500 ಕೋಟಿ : ಕಾರಜೋಳ