ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪಾಟೀಲ ಚಾಲನೆ

ಲೋಕದರ್ಶನ ವರದಿ

ರಾಯಬಾಗ: ನಸಲಾಪೂರ ಜಿ.ಪಂ.ಸದಸ್ಯೆ ವಿಲಾಸಮತಿ ಈರಗೌಡ ಪಾಟೀಲ ಅವರ ಅನುದಾನದಲ್ಲಿ  ತಾಲೂಕಿನ ಮಾಡಲಗಿ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ 4 ಲಕ್ಷರೂ. ವೆಚ್ಚದಲ್ಲಿ ರಂಗಮಂದಿರ ನಿಮರ್ಾಣ, ಬೂದಿಹಾಳ ಗ್ರಾಮದಲ್ಲಿ 5 ಲಕ್ಷರೂ. ವೆಚ್ಚದಲ್ಲಿ ವಿಠಲ ಮಂದಿರ ಸಮುದಾಯ ಭವನ ನಿಮರ್ಾಣ, ಹಣಬರಟ್ಟಿ ಗ್ರಾಮದ ಹನುಮಾನ ಮಂದಿರ ಆವರಣದಲ್ಲಿ 4 ಲಕ್ಷರೂ. ವೆಚ್ಚದಲ್ಲಿ ಸಮುದಾಯ ಭವನ ನಿಮರ್ಾಣ, ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದಿಂದ ಕೋಟಿವಾಲೆ ತೋಟದ ವರೆಗೆ 12 ಲಕ್ಷರೂ. ವೆಚ್ಚದಲ್ಲಿ ರಸ್ತೆ ನಿಮರ್ಾಣ ಕಾಮಗಾರಿಗಳಿಗೆ ಯುವಧುರೀಣ ಧೂಳಗೌಡ ಪಾಟೀಲ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಿ.ಪಂ.ಸದಸ್ಯರ ಅನುದಾನದಲ್ಲಿ ನಸಲಾಪೂರ ಜಿ.ಪಂ.ಕ್ಷೇತ್ರದಲ್ಲಿ ರಸ್ತೆ, ರಂಗಮಂಟಪ, ಸಮುದಾಯ ಭವನ ನಿಮರ್ಾಣ ಮಾಡುವುದರ ಮೂಲಕ ಸವರ್ಾಂಗೀಣ ಅಭಿವೃದ್ಧಿ ಕಾರ್ಯವನ್ನು ಕೈಗೊಂಡು, ಒಂದು ಮಾದರಿ ಜಿ.ಪಂ.ಕ್ಷೇತ್ರವನ್ನಾಗಿ ಮಾಡಲಾಗುತ್ತಿದೆ. 

ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ, ಕ್ಷೇತ್ರದಲ್ಲಿ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಮಾರುತಿ ನಾಯಿಕ, ಬಸು ಖಿಚಡೆ, ಸುಭಾಷ ಕೋಟಿವಾಲೆ, ದಿಲೀಪ ಜಮಾದಾರ, ಈರಣ್ಣ ಕಮತೆ, ಶಿವಲಿಂಗ ಚೌಗುಲೆ, ಮುರಗೇಶ ಕೋಟಿವಾಲೆ, ಲಗಮಣ್ಣ ಲಠೆ, ತುಕಾರಾಮ ಮಾಳಿ, ರಾಜು ಬಿಳಗಿ, ಈಶ್ವರ ಮಾಳಿ, ಬೀರಪ್ಪ ವಂಜಿರೆ, ದಶರಥ ರಾಯಮಾನೆ, ತುಕಾರಾಮ ರಾಯಮಾನೆ, ಕಲ್ಲಪ್ಪ ಆಕಳಿ, ಮಹಾದೇವ ಮಂಟೂರ, ರಮೇಶ ಬೆಳಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.