ಲೋಕದರ್ಶನ ವರದಿ
ಶಿರಹಟ್ಟಿ 28: ಕ್ಷಯರೋಗದ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದು ರೋಗದಿಂದ ಮುಕ್ತಿ ಹೊಂದಬೇಕು ಎಂದು ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಶ್ಮಿ ಪಾಟೀಲ ಹೇಳಿದರು.
ಅವರು ತಾಲೂಕಿನ ಮಾಚೇನೆಹಳ್ಳಿ ಗ್ರಾಮದಲ್ಲಿ ನಡೆದ ಕ್ಷಯರೋಗ ಪತ್ತೆ ಮತ್ತು ಜಾಗೃತಿ ಅಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಎದೆಯಲ್ಲಿ ನೋವು ಉಂಟಾಗುವದು, ಎರಡು ವಾರಕ್ಕಿಂತ ಹೆಚ್ಚು ದಿನ ಸತತವಾಗಿ ಕೆಮ್ಮುವದು, ಸಂಜೆ ವೇಳೆ ಜ್ವರ ಕಾಣಿಸುವದು ಮತ್ತು ಕಫದಲ್ಲಿ ರಕ್ತ ಬಿಳುವ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೇಯಲ್ಲಿ ಸೂಕ್ತ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವದು ಉತ್ತಮ ಎಂದು ಹೇಳಿದರು.
ನಂತರ ಐ.ಎಫ್.ನಾಶರ್ಿ ಮಾತನಾಡಿ ಈ ತಿಂಗಳ 25 ರಿಂದ ಡಿಸೆಂಬರ್ 10ರ ವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಶಾ ಕಾರ್ಯಕತರ್ೆಯರು ಮನೆ ಮನೆಗೆ ತೆರಳಿ ಸಮಿಕ್ಷೆ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಮಿಕ್ಷೆಯಲ್ಲಿ ಕ್ಷಯ ರೋಗ ಇರುವದು ದೃಡಪಟ್ಟಲ್ಲಿ ಬೆಳ್ಳಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಉಚಿತ ಚಿಕಿತ್ಸೆ ನೀಡಲಾಗುವದು. ಮತ್ತು ಪೌಷ್ಠಿಕ ಆಹಾರ ಸೇವನೆಗಾಗಿ ಪ್ರತಿ ತಿಂಗಳು 500 ರೂಗಳನ್ನು ನೀಡಲಾಗುವದು ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣ ಕಲ್ಲೂರ, ಸದಸ್ಯರಾದ ಶಂಕರ ಮರಾಠಾ, ಅಡಿವೆಪ್ಪ ತಿರಮಲಾಪೂರ, ಎಸ್.ಸಿ.ತೇಗೂರ, ಸಿ.ಕೆ.ಮುಳಕೊಂಡಿಮಠ, ಆಶಾ ಕಾರ್ಯಕತರ್ೆಯರು ಮತ್ತು ಸಾರ್ವಜನಿಕರು ಇದ್ದರು.