ನವದೆಹಲಿ 27: ಜೈಷ್-ಎ-ಮಹಮದ್(ಜೆಇಎಂ) ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಹಾಗೂ ಪಠಾಣ್ಕೋಟ್ ವಾಯು ನೆಲೆ ದಾಳಿಯ ಸೂತ್ರಧಾರ ಮಸೂದ್ ಅಜರ್ ಮೇಲೆ ಅಮೆರಿಕ ಅಂತಾರಾಷ್ಟ್ರೀಯ ನಿಷೇಧ ಹೇರಬೇಕೆಂಬ ತನ್ನ ಬೇಡಿಕೆಯನ್ನು ಭಾರತ ಮತ್ತಷ್ಟು ಬಿಗಿಗೊಳಿಸಲಿದೆ.
ಭಾರತ ಮತ್ತು ಅಮೆರಿಕ ನಡುವೆ ಸೆಪ್ಟೆಂಬರ್ 6 ರಿಂದ 2+2 ಮಹತ್ವದ ಸಭೆ ನಡೆಯಲಿದ್ದು ಅಜರ್ ವಿರುದ್ಧ ಅಂತಾರಾಷ್ಟ್ರೀಯ ನಿರ್ಬಂಧ ವಿಧಿಸುವ ವಿಷಯವೂ ಪ್ರಮುಖವಾಗಿ ಪ್ರಸ್ತಾಪವಾಗಲಿದೆ.
ಕಳೆದ ವರ್ಷವೇ ಜೆಇಎಂ ಮುಖ್ಯಸ್ಥನನ್ನು ಜಾಗತಿಕ ಭಯೋತ್ಪಾದಕ ಎಂದು ಪರಿಗಣಿಸುವ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಬೆಂಬಲ ಸೂಚಿಸಿತ್ತು. ಆದರೆ ಪಾಕಿಸ್ತಾನದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಚೀನಾ ಈ ಪ್ರಸ್ತಾವನೆಗೆ ಬೆಂಬಲ ನೀಡಲು ನಿರಾಕರಿಸಿದ್ದರಿಂದ ಈ ಪ್ರಕ್ರಿಯೆಗೆ ಹಿನ್ನಡೆಯಾಗುತ್ತದೆ.
ಈ ವಿಷಯದಲ್ಲಿ ಭಾರತಕ್ಕೆ ಬೆಂಬಲ ನೀಡುವ ಬಗ್ಗೆ ಅಮೆರಿಕ ಒಲವು ತೋರಿರುವುದರಿಂದ. ಅಜರ್ ವಿರುದ್ಧ ಕುಣಿಕೆಯನ್ನು ಬಿಗಿಗೊಳಿಸಲು ಭಾರತ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಮತ್ತೊಂದು ಪೂರಕ ಬೆಳವಣಿಗೆ ಎಂದರೆ, ಅಜರ್ ವಿರುದ್ಧ ಹೊಂಧಿರುವ ನಿಲುವನ್ನು ಬದಲಿಸಿಕೊಳ್ಳುವಂತೆಯೂ ತಾನು ಚೀನಾದ ಮನವೊಲಿಸುವುದಾಗಿ ಅಮೆರಿಕ ಹೇಳಿರುವುದು ಭಾರತಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.
ಭಾರತ ಮತ್ತು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವೆ ನಡೆಯಬೇಕಿದ್ದ 2+2 ಸಮಾವೇಶ ಕೆಲವು ಕಾರಣಗಳಿಂದ ಈಗಾಗಲೇ ವಿಳಂಬವಾಗಿದೆ. ಸೆಪ್ಟೆಂಬರ್ 6ರಂದು ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ತಮ್ಮ ಸಹವತರ್ಿಗಳಾದ ಮೈಕ್ ಪೊಂಪಿಯೋ ಮತ್ತು ಜೇಮ್ಸ್ ಮಟ್ಟೀಸ್ ಅವರೊಂದಿಗೆ ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಸಹಭಾಗಿತ್ವ ಕುರಿತು ಚಚರ್ಿಸುವರು.
ಇದಕ್ಕೆ ಪೂರ್ವಭಾವಿಯಾಗಿ ಪರಾಮಶರ್ೆ ನಡೆಸಲು ಪೊಂಪಿಯೋ ಮತ್ತು ಮಟ್ಟೀಸ್ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಅವರ ಭೇಟಿ ಸಂದರ್ಭದಲ್ಲಿ ಕೇಂದ್ರ ಸಕರ್ಾರ ಅಜರ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂಬ ತನ್ನ ಬೇಡಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಲಿದ್ದು. 2+2 ಸಮಾವೇಶದಲ್ಲೂ ಈ ಬಗ್ಗೆ ಚಚರ್ೆಗೆ ಕಾರ್ಯಸೂಚಿ ವಿಷಯವನ್ನಾಗಿ ಸೇರಿಸಲು ಮನವಿ ಮಾಡಲಿದೆ.