ಐಪಿಎಲ್‌ ಹಣದಿಂದ ಪ್ಯಾಟ್‌ ಕಮಿನ್ಸ್ ಗೆಳತಿ ನಾಯಿ ಆಟಿಕೆಗಳನ್ನು ಖರೀದಿಸುತ್ತಾಳಂತೆ !

ನವದೆಹಲಿ, ಡಿ 24  ಡಿ.19 ರಂದು ಕೋಲ್ಕತಾದಲ್ಲಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಹಿರಿಯ ವೇಗಿ  ಪ್ಯಾಟ್‌ ಕಮಿನ್ಸ್ 15.5 ಕೋಟಿ ರೂ.ಗಳಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ಪಾಲಾಗಿದ್ದರು. ಆ ಮೂಲಕ ಅತ್ಯಂತ ಶ್ರೀಮಂತ ವಿದೇಶಿ ಆಟಗಾರ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದರು.2017ರ ಆವೃತ್ತಿಯಲ್ಲಿ ಇಂಗ್ಲೆಂಡ್‌ ನ ಬೆನ್‌ ಸ್ಟೋಕ್ಸ್ 14.5 ಕೋಟಿ ರೂ.ಗಳನ್ನು ಪಡೆದಿದ್ದರು. ಈ ದಾಖಲೆಯನ್ನು ಆಸೀಸ್‌ ವೇಗಿ ಮುರಿದಿದ್ದಾರೆ.ಐಪಿಎಲ್ ನಲ್ಲಿ ನಡೆದಿರುವ ಅಷ್ಟೊಂದು ದುಬಾರಿ ಮೊತ್ತವನ್ನು ಏನು ಮಾಡುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪ್ಯಾಟ್‌ ಕಮಿನ್ಸ್ ಅಚ್ಚರಿ ಉತ್ತರ ನೀಡಿದ್ದಾರೆ."ಅಷ್ಟೊಂದು ಮೊತ್ತ ಏನು ಮಾಡಬೇಕು ಎಂದು ನನಗೆ ಗೊತ್ತಿಲ್ಲ. ಆದರೆ, ನನ್ನ ಗೆಳತಿ ಮಾತ್ರ ಆ ಮೊತ್ತದಲ್ಲಿ ಮೊದಲ ಉಪಯೋಗಿಸಬೇಕಾದ ಯೋಜನೆಯನ್ನು ತಿಳಿಸಿದ್ದಾಳೆ. ನಾಯಿಗೆ ಹಲವು ಆಟಿಕೆಗಳನ್ನು ಖರೀದಿಸಲು ಬಯಸಿದ್ದಾಳೆ," ಎಂದು ಮೆಲ್ಬೋರ್ನ್‌ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಸುದ್ದಿಗೋಷ್ಠಿಯಲ್ಲಿ ಕಮಿನ್ಸ್ ತನ್ನ ಗೆಳತಿಯ ಯೋಜನೆಯನ್ನು ಬಹಿರಂಗ ಪಡಿಸಿದ್ದಾರೆ."ನಾನು ನನ್ನಂತೆಯೇ ಇರಲು ಬಯಸುತ್ತೇನೆ. ಸುತ್ತಮುತ್ತ ಒಳ್ಳೆಯ ಜನರನ್ನು ಹೊಂದಿರುವ ನಾನು ಅತ್ಯಂತ ಪುಣ್ಯವಂತ. ತಂಡದ ಹುಡಗರು ಅದ್ಭುತ ಜತೆಗೆ, ಕುಟುಂಬ ಮತ್ತು ಸ್ನೇಹಿತರು ಒಳ್ಳೆಯವರು. ನಾನು ಇನ್ನೂ ಕ್ರಿಕೆಟ್‌ ಆಡುತ್ತಿದ್ದೇನೆ ಎಂದರೆ, ಅದಕ್ಕೆ ಕಾರಣ ನಾನು ಕ್ರಿಕೆಟ್‌ ಕ್ರೀಡೆಯನ್ನು ಹೆಚ್ಚು ಪ್ರೀತಿಸುತ್ತೇನೆ. ನಾನು ಅಂದುಕೊಂಡಂತೆ ಎಲ್ಲ ನಡೆಯುತ್ತಿದೆ. ಇದಕ್ಕೆ ನಾನು ಅಭಾರಿಯಾಗಿದ್ದಾನೆ," ಎಂದು ಹೇಳಿದರು.ಮೆಲ್ಬೋರ್ನ್‌ ನಲ್ಲಿ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ನಾಲ್ಕು ವೇಗಿಗಳನ್ನು ಟೀಮ್ ಮ್ಯಾನೇಜ್‌ಮೆಂಟ್ ಕಣಕ್ಕೆ ಇಳಿಸುವ ಯೋಜನೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನಾವು ಅತ್ಯುತ್ತಮ ಪ್ರದರ್ಶನ ತೋರುತ್ತೇವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ," ಪ್ಯಾಟ್ ಕಮಿನ್ಸ್ ತಿಳಿಸಿದರು.