ಲೋಕದರ್ಶನವರದಿ
ಧಾರವಾಡ೩೧; ಕ್ಷಣಿಕ ಆನಂದಕ್ಕಾಗಿ ಆರಂಭವಾಗುವ ಚಟಗಳು ಮುಂದೆ ಜೀವನದ ಅವಿಭಾಜ್ಯ ಅಂಗವಾಗಿ ಮೃತ್ಯು ಲೋಕಕ್ಕೆ ದಾರಿ ಮಾಡಿಕೊಡುತ್ತವೆ. ತಂಬಾಕು ಸೇವನೆ ಗಂಟಲು ಬಾಯಿ ಕ್ಯಾನ್ಸರ್ದಂತಹ ಮಾರಕ ರೋಗಗಲಿಗೆ ಕಾರಣಾವಾಗುತ್ತವೆ. ಕೌಟುಂಬಿಕ ಸಮಸ್ಯೆ, ಏಕಾಂಗಿತನ ಮಾನಸಿಕ ಖಿನ್ನತೆ ಮುಂತಾದ ಕಾರಣಗಳಿಂದ ಮಾದಕ ವ್ಯಸನಿಗಳಾಗುವ ಸಾಧ್ಯತೆ ಇರುತ್ತದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಧಾರವಾಡ ತಾಲೂಕು, ಮಂಜುನಾಥೇಶ್ವರ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಹಾಗೂ ಅಖಿಲ ಕನರ್ಾಟಕ ಜನಾಜಾಗೃತಿ ವೇದಿಕೆ ಬೆಳ್ತಂಗಡಿ / ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರದಲ್ಲಿ ಎಸ್.ಡಿ.ಎಮ್ ವಿಶ್ವವಿದ್ಯಾಲಯದ ಮನೋಶಾಸ್ತ್ರಜ್ಞರಾದ ಡಾ. ಗಿರೀಶ ಬಾಬು ಹೇಳಿದರು.
ತಂಬಾಕು ವಿರೋಧಿ ದಿನಾಚರಣೆ ಆಚರಿಸಲ್ಪಡುವುದೇ ಖೇದಕರ ಸಂಗತಿ ಅದರಲ್ಲೂ ಹದಿಹರೆಯದ ವಿದ್ಯಾಥರ್ಿಗಲಲ್ಲಿ ಹೆಚುತ್ತಿರುವ ತಂಬಾಕು ಸೇವನೆ ಅಘಾತಕಾರಿ ವಿಷಯ. ಚಟುವಟಿಕೆಯಿಮದಿರಬೇಕಾದ ವಿದ್ಯಾಥರ್ಿಗಳು ಚಟಕ್ಕೆ ದಾಸರಾಗುತ್ತಿರುವುದು ವಿಷಾದನೀಯ. ಪೂಜ್ಯ ವೀರೇಂದ್ರ ಹೆಗ್ಗಡೆಯವರು ಆಯೋಜಿಸುತ್ತಿರುವ ಇಂತಹ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳು ವಿದ್ಯಾಥರ್ಿಗಳ ಮೇಲೆ ಆಗಾಧ ಪರಿಣಾಮ ಬೀರುತ್ತಿವರ ಎಂದು ಅತಿಥಿಗಳಾಗಿ ಆಗಮಿಸಿದ್ದ ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆಯ ಸದಸ್ಯರಾದ ಮಹಾವೀರ ಉಪಾದ್ಯೆ ಹೇಳಿದರು.
ಯುವ ಜನಾಂಗ ದಾರಿ ತಪ್ಪಿದರೆ ದೇಶವೆ ದಾರಿ ತಪ್ಪಿದಂತೆ ವಿದ್ಯಾಥರ್ಿಗಳು ದುಶ್ಚಟಗಲಿಮದ ದೂರವಿದ್ದಷ್ಟು ಆರೋಗ್ಯಕ್ಕೂ ಸಮಾಜಕ್ಕೂ ಒಳ್ಳೆಯದು. ಕೇವಲ ಕ್ಷಣಿಕ ಸುಖಕ್ಕೆ ತಮ್ಮ ಇಡಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಇಮದಿನಿಮದಲೇ ಎಲ್ಲ ವಿದ್ಯಾಥರ್ಿಗಳು ತಂಬಾಕು ಸೇವನೆ ಮಾಡುವದಿಲ್ಲವೆಂದು ಪ್ರಮಾಣ ಮಾಡಬೇಕು ಎಂದು ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯರಾದ ಪ್ರೋ. ವಾಯ.ಎಸ್ ರಾಯಬಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಧವ ನಾಯ್ಕ ತಂಬಾಕು ವಿರೋಧಿ ದಿನ, ಸ್ವಾಸ್ಥ್ಯ ಸಂಕಲ್ಪ, ಮದ್ಯವಜ್ನ ಶಿಬಿರ ಇವೆಲ್ಲಾ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಸಮಾಜದ ಏಳ್ಗೆಗಾಗಿ ಪ್ರಾರಂಭಿಸಿರುವ ಕಾರ್ಯಕ್ರಮಗಳು ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು ಯೋಜನಾಧಿಕಾರಿಗಳಾದ ಉಲ್ಲಾಸ್ ಮೆಸ್ತಾ ನಿರೂಪಿಸಿ, ವಂದಿಸಿದರು.