ಲೋಕದರ್ಶನವರದಿ
ಹಾವೇರಿ: ಅಖಿಲ ಭಾರತ ತೈಲಿಕ ಸಾಹು(ಗಾಣಿಗ) ಮಹಾಸಭಾ ದೆಹಲಿ, ಯುವ ಘಟಕ ಕನರ್ಾಟಕ ಇವರ ಆಶ್ರಯ ಹಾಗೂ ಅಖಿಲ ಭಾರತ ಗಾಣಿಗ ಸಂಘ ಹುಬ್ಬಳ್ಳಿ, ತಾಲೂಕು ಘಟಕ ಧಾರವಾಡ ಇವರ ಸಹಯೋಗದಲ್ಲಿ ಗಾಣಿಗರ ಏಕತೆ ರಾಜ್ಯ ಸಮಾವೇಶ ಹಾಗೂ ಅಖಂಡ ಕನರ್ಾಟಕದ ಗಾಣಿಗರ ಎಲ್ಲಾ ಒಳಪಂಗಡಗಳ ಸಮ್ಮಿಲನ ಸಮಾರಂಭ ಜು. 29ರಂದು ಬೆಳಗ್ಗೆ 9ಕ್ಕೆ ಧಾರವಾಡದ ಮುದಕೇಶ್ವರ ವಡ್ಡಿನ ಕಲ್ಯಾಣ ಮಂಟಪ, ಗಿರಿನಗರ, ಕಲಘಟಗಿ ರಸ್ತೆ(ನುಗ್ಗಿಕೇರಿ ಹನುಮಂತ ದೇವರ ಮಂದಿರದ ಹತ್ತಿರ) ದಿ. ಸಿದ್ದು ನ್ಯಾಮಗೌಡರ ಮಹಾವೇದಿಕೆಯಲ್ಲಿ ಜರುಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸಹೋದರರಾದ ಪ್ರಹ್ಲಾದ್ ದಾಮೋದರದಾಸ್ ಮೋದಿಯವರು ಸಮಾರಂಭಕ್ಕೆ ಚಾಲನೆ ನೀಡುವರು. ಕುಳ್ಳೂರ ಶಿವಯೋಗೀಶ್ವರ ಸಂಸ್ಥಾನ ಕಲ್ಮಠದ ಬಸವಾನಂದ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು.
ದೇಶದ 10ರಾಜ್ಯಗಳಿಂದ ಗಾಣಿಗ ಸಮಾಜದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ರಾಜ್ಯ ಗಾಣಿಗ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸಮಾಜದ ಎಲ್ಲ ಬಾಂಧವರು ಸೇರಿ 25ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಗಾಣಿಗ ಸಮಾಜದಲ್ಲಿರುವ ಎಲ್ಲ ಒಳಪಂಗಡಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ.
ಅಲ್ಲದೇ ಗಾಣಿಗ ಸಮಾಜದವರಿಗೆ 2ಎ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಹಾಗೂ ಕೇಂದ್ರ ಸಕರ್ಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಿಂದ ಗಾಣಿಗ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಅಖಿಲ ಭಾರತ ಗಾಣಿಗ ಸಂಘದ ಜಿಲ್ಲಾಘಟಕದ ಅಧ್ಯಕ್ಷ ರಾಜೇಂದ್ರ ಸಜ್ಜನರ ತಿಳಿಸಿದ್ದಾರೆ.