ಶಿಗ್ಗಾವಿ: ಗ್ರಾಮೀಣ ಸೊಗಡಿನಲ್ಲಿ ಹೃದಯವಂತಿಕೆ ಇರುತ್ತದೆ, ನಾವು ನಮ್ಮ ಅನುಭವಗಳ ಜೊತೆಗೆ ಮತ್ತೊಬ್ಬರ ಅನುಭವಗಳನ್ನು ಕೇಳಿ ನೋಡಿ ಕಲಿಯಬೇಕಿದೆ, ಮಕ್ಕಳ ಪಾಲಕರು ತಮ್ಮ ಹೊಣೆಗಾರಿಕೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ. ಪಾಲಕರು ಜೀವನದ ಮೌಲ್ಯಗಳ ಜೊತೆಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು ಬೆಂಗಳೂರಿನ ಅಪರ ಜಿಲ್ಲಾಧಿಕಾರಿ ಡಾ ರವಿ ಎಮ್ ತಿರ್ಲಾಪೂರ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಫಿನಿಕ್ಸ ಕಾನ್ಮೆಂಟ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹಸಮ್ಮೇಳನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕ್ರಿಯಾಶೀಲತೆ, ಧನಾತ್ಮಕ ಚಿಂತನೆಗಳು ಹಾಗೂ ಪ್ರೋತ್ಸಾಹದಾಯಕ ಮಾತುಗಳು ಮಕ್ಕಳ ಸರ್ವತೊಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮಯದ ಮಹತ್ವ, ಪೂರ್ವಸಿದ್ಧತೆ ಮತ್ತು ಪ್ರಯತ್ನ ಇದ್ದಾಗ ಮಾತ್ರ ಸಾಧನೆ ಮಾಡಲು ಸಾದ್ಯ ಪಾಲಕರು ಪೂರ್ವಾಗ್ರಹ ಪೀಡಿತರಾಗದೇ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಕಾಣಬೇಕಿದೆ ಇಂದಿನ ಸ್ಫರ್ಧಾತ್ಮಕ ಯುಗಕ್ಕೆ ತಮ್ಮ ಮಕ್ಕಳನ್ನು ತಯ್ಯಾರಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ, ಪಾಲಕರು ಮಕ್ಕಳಿಗೆ ಪ್ರತಿದಿನ ದಿನಪತ್ರಿಕೆಗಳನ್ನು ಓದುವುದು, ಬದಲಾವಣೆಯಾಗುವ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವುದು, ಧನಾತ್ಮಕ ಚಿಂತನೆ ನೀಡುವುದು, ಪ್ರೋತ್ಸಾಹದಾಯಕ ಮಾತುಗಳನ್ನಾಡುವ ಜೊತೆಗೆ ಅವರಲ್ಲಿ ಅಡಗಿರುವ ಪ್ರತೀಭೆಗಳನ್ನು ಗುರುತಿಸುವಂತ ಕಾರ್ಯ ಮಾಡಬೇಕಿದೆ, ಸಾಧನೆಗೆ ಮೀತಿಯಿಲ್ಲ, ಪ್ರೋತ್ಸಾಹದ ಅವಶ್ಯವಿದೆ ಎಂದರು.
ತಹಶೀಲ್ದಾರ ಚಂದ್ರಶೇಖರ ಗಾಳಿ ಮಾತನಾಡಿ ಅಂತ್ಯವಿಲ್ಲದ ಹೆಸರನ್ನು ಹೊಂದಿರುವ ಈ ಶಾಲೆ ಅತ್ಯುನ್ಯತವಾಗಿ ಬೆಳೆಯಬೇಕು ತಾಯಿಯ ಮಮತೆ ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಮಕ್ಕಳನ್ನು ಮೊಬೈಲಿನಿಂದ ದೂರವಿಟ್ಟು ಒಳ್ಳೆಯ ಸ್ನೇಹಿತರೊಂದಿಗೆ ಬೆರೆಸಿ ಒಳ್ಳೆಯ ಮಾರ್ಗದರ್ಶನ ನೀಡುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸುವದು ಅವಶ್ಯವಿದೆ ಎಂದರು.
ಫಿನಿಕ್ಸ ಕಾನ್ಮೆಂಟ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ|| ಎಮ್ ಎಮ್ ತಿಲರ್ಾಪೂರ ಮಾತನಾಡಿ ಸಮಾಜದ ಋಣದಲ್ಲಿರುವ ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ತತ್ವದ ಅಡಿಯಲ್ಲಿ ಈ ಶಾಲೆಯನ್ನು ಪ್ರಾರಂಭಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕವಾಗಿ ವಂಚಿರಾಗಬಾರದು ಎನ್ನುವುದೇ ನಮ್ಮ ಉದ್ದೇಶ, ಉತ್ತಮ ಶಿಕ್ಷಣದ ಜೊತೆಗೆ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಮಾಡುತ್ತಿದೆ, ಸಂಚಾರಿ ಆರೋಗ್ಯ ಕಾರ್ಯಕ್ರಮ ಮಾಡಿ ಅತ್ಯುತ್ತಮ ಪ್ರಶಸ್ತಿ ಪಡೆದಿದೆ, ವನ ಮಹೋತ್ಸವ, ರುದ್ರಾಶ್ರಮ, ಪ್ಯಾರಾ ಮೆಡಿಕಲ್ ವೃತ್ತಿಪರ ತರಬೇತಿ ಕೇಂದ್ರ, ಆರೋಗ್ಯ ಶಿಬಿರಗಳಂತಹ ಹಲವಾರು ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ಮಾಡುತ್ತಾ ಬಂದಿದೆ, ಕಳೆದ 3 ವರ್ಷಗಳಿಂದ ನಮ್ಮ ಈ ವಿದ್ಯಾಸಂಸ್ಥೆಯಿಂದ ಶೇ100 ಕ್ಕೆ 100 ರಷ್ಟು ಫಲಿತಾಂಶ ನೀಡುತ್ತಾ ಬಂದಿದೆ, ನುರಿತ ಶಿಕ್ಷಕ ವೃಂದ, ಪಠ್ಯೇತರ ಚಟುವಟಿಕೆಗಳು, ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳು ಹೀಗೆ ಬಗೆ ಬಗೆಯ ಕಾರ್ಯಕ್ರಮಗಳನ್ನು ಮಾಡುತ್ತಾ ನಮ್ಮ ಸಂಸ್ಥೆ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ಕೊಟ್ಟು ಮಕ್ಕಳಲ್ಲಿರುವ ಪ್ರತಿಭೆಗಳನ್ನ ಹೊರಹಾಕಲು ಎಲ್ಲ ರೀತಿಯ ಪ್ರಯತ್ನಗಳಲ್ಲಿ ನಮ್ಮ ವಿದ್ಯಾ ಸಂಸ್ಥೆ ಮುಂದಿದೆ ಎಂದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ ಮಾತೆ ಸಾಧನೆಯಾಗಬಾರದು, ಸಾಧನೆ ಮಾತಾಗಬೇಕು. ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು ಅಹಂಕಾರವನ್ನು ಬಿಡಬೇಕು ವಿದ್ಯೆಯ ಜೊತೆಗೆ ಬುದ್ಧಿಯನ್ನು ಕಲಿಸಬೇಕು ಮನೆಯ ಮೊದಲ ಪಾಠಶಾಲೆಯಾಗಬೇಕು ಸಂಸ್ಕೃತಿಯ ಜೊತೆಗೆ ಶಾಂತಿ ನೆಲೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಟ್ರೇಶ ಮಾಸ್ತರ ಬೆಳಗಲಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾಥರ್ಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರವಮವನ್ನು ಸಂಸ್ಥೆಯ ಸದಸ್ಯಿಣಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸರೋಜಿನಿ ಎಮ್ ತಿಲರ್ಾಪೂರ ಉದ್ಟಾಟಿಸಿದರು. ಸಂಸ್ಥೆಯ ಕಾರ್ಯದಶಿ ಡಾ|| ರಾಣಿ ತಿಲರ್ಾಪೂರ, ನಿದರ್ೇಶಕ ಶಶಿಕಾಂತ ರಾಠೋಡ ಮುಖ್ಯೋಪಾದ್ಯಾಯ ಪ್ರದೀಪ ದಾನರೆಡ್ಡಿ, ಸೇರಿದಂತೆ ಸಂಸ್ಥೆಯ ಶಿಕ್ಷಕರು, ವಿವಿದ್ಯಾರ್ಥಿಗಳು , ಪಾಲಕರು ಉಪಸ್ಥಿತರಿದ್ದರು.