ಲೋಕದರ್ಶನ ವರದಿ
ಯಲಬುರ್ಗಾ 05: ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಆಯಾ ಗ್ರಾಮದ ಸಾರ್ವಜನಿಕರ ಸಹಾಯ, ಸಹಕಾರ ಅತ್ಯಗತ್ಯವಾಗಿದೆ ಎಂದು ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ.ಕಳ್ಳಿ ಹೇಳಿದರು.
ತಾಲೂಕಿನ ಮಕ್ಕಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಿರೇಅರಳಿಹಳ್ಳಿ ಸಿಆರ್ಸಿ ವ್ಯಾಪ್ತಿಯ ಮುಖ್ಯೋಪಾಧ್ಯಯರ ಸಭೆ, ಶಾಲೆಗೆ ದಾನವಾಗಿ ನೀಡಿದ ಲ್ಯಾಪ್ ಟಾಪ್, ಪ್ರಿಂಟರ್ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು,
ಜಾಗತೀಕರಣದ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪೋಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಅವರು ಗುಣಮಟ್ಟದ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು. ಮತ್ತು ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದ ಅವರು, ಸರಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹತ್ತು ಹಲವಾರು ಯೊಜನೆಗಳನ್ನು ಜಾರಿಗೆ ತರುತ್ತಿದೆ. ಯಾವ ಇಲಾಖೆಗೆ ನೀಡದಂತ ಸೌಲಭ್ಯಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಅಂದು ನಾವು ಶಾಲೆ ಕಲಿಯಬೇಕೆಂದರೆ ಕಷ್ಟಕರ ಜೀವನ ಇತ್ತು. ಆದರೆ ಇವತ್ತು ಅಂತಾ ಕಷ್ಟವಿಲ್ಲ. ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಸರಕಾರ, ಸೈಕಲ್, ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಶೂ ವಿತರಿಸುತ್ತಿದೆ. ಅಂತಹ ಸೌಲಭ್ಯಗಳನ್ನು ಪ್ರತಿಯೊಬ್ಬ ಮಗು ಇದರ ಲಾಭವನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು. ಗ್ರಾಮದ ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಗ್ರಾಮಸ್ಥರ ಸಹಕಾರ ಅಮೂಲ್ಯ. ಈ ನಿಟ್ಟಿನಲ್ಲಿ ತಮ್ಮ ಗ್ರಾಮದ ಮಕ್ಕಳು ಇನ್ನು ಹೆಚ್ಚಿನ ಜ್ಞಾನ ಸಿಗಲಿ, ವಿದ್ಯಾವಂತರಾಗಲಿ ಎಂಬ ದೃಷ್ಠಿ ಇಟ್ಟುಕೊಂಡು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಉಪಾದ್ಯಕ್ಷರು ಸೇರಿ ಲ್ಯಾಪ್ಟಾಪ್, ಪ್ರಿಂಟರ್ ದಾನವಾಗಿ ನೀಡಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪಂಪಣ್ಣ ಹೊಸಮನಿ ಲ್ಯಾಪ್ಟಾಪ್ನ್ನು ಹಾಗೂ ಉಪಾಧ್ಯಕ್ಷ ಶರಣಪ್ಪ ಕರೆಕುರಿ ಪ್ರಿಂಟರ್ನ್ನು ದಾನವಾಗಿ ನೀಡಿದರು.
ಹಿರೇಅರಳಿಹಳ್ಳಿಯ ಸಿಆರ್ಪಿ ಅಧಿಕಾರಿ ಮಹೇಶ ಅಸೂಟಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪಂಪಣ್ಣ ಹೊಸಮನಿ ವಹಿಸಿದ್ದರು. ಉಪಾಧ್ಯಕ್ಷ ಶರಣಪ್ಪ ಕರೆಕುರಿ, ಸದಸ್ಯ ಮಲ್ಲಪ್ಪ ಕರೆಕುರಿ, ಗ್ರಾಪಂ ಸದಸ್ಯ ನಿಂಗಪ್ಪ ಹೊಸಮನಿ, ಬಸಪ್ಪ ದಮ್ಮೂರು, ಸೇರಿದಂತೆ ಹಿರೇಅರಳಿಹಳ್ಳಿ ಸಿಆರ್ಸಿ ವ್ಯಾಪ್ತಿಯ ಮುಖ್ಯೋಪಾಧ್ಯಯರ ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಯ ಬಸವರಾಜ ಹಳೇಗೌಡ್ರ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಪಾಲಕ್ಷಿ ಮೇಟಿ ನಿರೂಪಿಸಿ ವಂದಿಸಿದರು.