ಗದಗ 26: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ಕೋಶ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ರೋಟರಿ ಕ್ಲಬ್ ಮತ್ತು ರೋಟರಿ ವೆಲ್ಫೇರ್ ಸೊಸೈಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕುಷ್ಟಗಿ ಕಮ್ಯುನೀಟಿ ಕೇರ್ ಹಾಲ್ ರೋಟರಿ ಸಂಸ್ಥೆಯಲ್ಲಿ ಗೃಹ ರಕ್ಷಕ ಸಿಬ್ಬಂದಿಯವರಿಗೆ ಹೆಚ್.ಐ.ವ್ಹಿ/ಏಡ್ಸ್ ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಬಗ್ಗೆ ತರಬೇತಿ ಕಾಯರ್ಾಗಾರ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ಎಮ್. ಗೌಡರ ಮಾತನಾಡಿ ತಂಬಾಕು ಸೇವನೆಯಿಂದ ಹಲವಾರು ದುಷ್ಪ್ಪರಿಣಾಮಗಳು ಆಗುತ್ತಿದ್ದು, ಕ್ಯಾನ್ಸರ್, ಅಲ್ಸರ್ ಮತ್ತು ಹೃದಯದ ಕಾಯಿಲೆಗಳಂತೆ ಗಂಭಿರ ಕಾಯಿಲೆಗಳಿಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ತಂಬಾಕಿನಿಂದ ದೂರವಿರಲು ಕರೆ ನೀಡಿದರು. ಯುವಕರು ತಂಬಾಕು ಸೇವೆನೆಗೆ ದಾಸರಾಗುತ್ತಿದ್ದು ಇಲಾಖೆಯ ಜೋತೆಗೆ ಸಮುದಾಯದವರು ಕೈಗೂಡಿಸಿ ತಂಬಾಕಿನಿಂದ ದೂರವಿರಲು ಸಹಕರಿಸಬೇಕೆಂದು ತಿಳಿ ಹೇಳಿದರು.
ಡಾ. ರಾಜೇಂದ್ರ ಬಸರಿಗಿಡದ ಮಾತನಾಡಿ ತಂಬಾಕು ಸೇವನೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿದ್ದು, ಶಾಲಾ ಕಾಲೇಜು ಆಡಳಿತ ಮಂಡಳಿ ಹಾಗೂ ಪಾಲಕರು ಮಕ್ಕಳ ಮೇಲೆ ನಿಗಾವಹಿಸಿ ತಂಬಾಕಿನಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಠರಾದ ವಿಶ್ವನಾಥ ಯಳಮಲಿ ಮಾತನಾಡಿ ತಂಬಾಕು ಸೇವನೆ ನಿಯಂತ್ರಣಕ್ಕೆ ಕೋಪ್ಟಾ ಕಾಯ್ದೆ ಜಾರಿಯಲ್ಲಿದ್ದು ಇಲಾಖೆಯವರು ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದು ಇದರಿಂದ ತಂಬಾಕು ಸೇವನೆ ನಿಯಂತ್ರಣವಾಗಿದೆ ಎಂದು ಹೇಳಿದರು.
ಡಾ. ಅರವಿಂದ ರವರು ತಂಬಾಕು ಸೇವನೆ ದುಷ್ಪರಿಣಾಮಗಳ ಬಗ್ಗೆ ವಿವರವಾದ ಉಪನ್ಯಾಸ ನೀಡಿದರು. ಗೋಪಾಲ ಸುರಪುರ ರವರು ತಂಬಾಕು ಸೇವನೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಬಳಕೆ, ಮಾರಾಟಕ್ಕೆ ದಂಡ ವಿಧಿಸುವುದರ ಬಗ್ಗೆ ಕಾನೂನು ಅರಿವು ಕುರಿತು ಮಾತನಾಡಿದರು. ಬಸವರಾಜ ಲಾಲಗಟ್ಟಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು, ಆರೋಗ್ಯ ಇಲಾಖೆ ಇವರು ಮಾತನಾಡಿ ಹೆಚ್ಐವಿ ಸೋಕು ಹರಡುವ ಬಗೆ ಹಾಗೂ ನಿಯಂತ್ರಣ ಕ್ರಮಗಳನ್ನು ತಿಳಿಸಿ, ಸೋಂಕಿತರಿಗೆ ಸರಕಾರದಿಂದ ದೊರೆಯುವ ಸೇವಾ ಸೌಲಬ್ಯಗಳ ಕುರಿತು ವಿವರಿಸಿದರು. ನರೇಶ ಜೈನ್ ಮಾತನಾಡಿ ಹೆಚ್.ಐ.ವ್ಹಿ ತಡೆಗಟ್ಟುವಲ್ಲಿ ಯುವಕರ ಪಾತ್ರ ದೊಡ್ಡದಿದ್ದು ಮುಂದಿನ ದಿನಮಾನದಲ್ಲಿ ತಾವೆಲ್ಲರೂ ಸಾಮಾಜಿಕ ಸೇವೆಯತ್ತ ಮುನ್ನುಗ್ಗಬೇಕು ಹಾಗೂ ದಿನದಲಿತರ ಬಡವರ ಸೇವೆಯನ್ನು ಮಾಡಿ ಭೂಮಿ ಖುಣವನ್ನು ತಿರಿಸಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ರೋಟರಿ ಕಾರ್ಯದರ್ಶಿ ಗಳಾದ ಶ್ರೀಧರ ಸುಲ್ತಾನಪುರ್, ನರೇಶ ಜೈನ್ ಇತರರು ಇದ್ದರು.
ಪ್ರಾರಂಭದಲ್ಲಿ ಶಿವು ಬಾಗಡೆ ಸ್ವಾಗತಿಸಿ ವಿನಂತಿಸಿದರು. ಬಸವರಾಜ ಲಾಲಗಟ್ಟಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರು ಕಾರ್ಯಕ್ರಮವನ್ನು ನಿರ್ವಹಿಸಿದರು.