“ವಿಶೇಷ ಚೇತನ”ರ ವಿಶೇಷ ಪಾಲಕರ ಸಭೆ

Parents meeting of specially challenged

ಧಾರವಾಡ 21: ಬೌದ್ಧಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಅಸಾಮರ್ಥ್ಯವನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವೂ ಬೇಕು. ಆ ನಿಟ್ಟಿನಲ್ಲಿ ಪೋಷಕರು ವಿಶೇಷ ಕಾಳಜಿವಹಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಹೇಳಿದರು.   

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಗ್ರಾಮೀಣ ಫೋರ್ಥ್‌ ವೇವ್ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ ವಿಶ್ವ ವಿಕಲಚೇತನ ಮಕ್ಕಳ ವಿಶೇಷ ಪಾಲಕರ ಸಭೆ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡ ಶಹರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅವರು ಉದ್ಘಾಟಿಸಿ ಮಾತನಾಡುತ್ತಾ ಈ ಹಿಂದೆ ವಿಶೇಷ ಚೇತನ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಇದೀಗ ಜಾಗೃತಿ ಕಾರ್ಯಕ್ರಮಗಳಿಂದ ಕಡಿಮೆಯಾಗುತ್ತಿದೆ. ವಿಶೇಷ ಚೇತನ ಮಕ್ಕಳನ್ನು ದೇವರ ಮಕ್ಕಳೆಂದು ಭಾವಿಸಬೇಕು. ಆ ಮಕ್ಕಳ ಪ್ರತಿಭೆಗೆ ತಕ್ಕಂತೆ ಅವಕಾಶವನ್ನು ನೀಡಲು ಪೋಷಕರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. 

ಫೋರ್ಥ್‌ ವೇವ್ ಫೌಂಡೇಶನ್ ಮುಖ್ಯಸ್ಥರಾದ ಬಸವರಾಜ್ ಮ್ಯಾಗೇರಿ ಪ್ರಸ್ತಾವಿಕ ಮಾತನಾಡಿ  ಅವರು ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸಹಕಾರ ನೀಡಲಿದೆ ಹಾಗೂ  ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡ ಶಹರದ ಆವರಣದಲ್ಲಿರುವ ಶಾಲಾ ಸಿದ್ಧತಾ ಕೇಂದ್ರದಲ್ಲಿ ಎಲ್ಲ ಅಗತ್ಯ ಸಾಮಗ್ರಿ ಹಾಗೂ ಜಿಲ್ಲೆಯಲ್ಲಿಯೆ ಮಾದರಿಯಾಗಿ ಪೀಜಿಯೋಥೇರಪಿ ಚಿಕಿತ್ಸೆ ಇಲಾಖೆ ಸಹಕಾರದೊಂದಿಗೆ ನಮ್ಮ ಸಂಸ್ಥೆ ಒದಗಿಸಿದೆ ಎಂದರು. 

ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಉದಯ್ ರಾಯ್ಕರ್ ನಿವೃತ್ತ  ಕೆಯುಡಿ ಪ್ರೊಫೆಸರ್ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ ಇವರು ಮಾತನಾಡುತ್ತಾ ವಿಶೇಷ ಚೇತನ ಮಕ್ಕಳು ದೇವರ ಪ್ರಸಾದ ಈ ಮಕ್ಕಳ ಸೇವೆ ಮಾಡುವುದರಿಂದ ಪುಣ್ಯ ದೊರಕುತ್ತದೆ ಎಂದು ಪಾಲಕರು ಮಕ್ಕಳಿಗೆ ಪ್ರೋತ್ಸಾಹಕೊಡಬೇಕೆಂದು ಮಾತನಾಡಿದರು. 

ಅತಿಥಿಗಳಾಗಿ ಆಗಮಿಸಿದ ಮಾತಾಂರ್ಡಪ್ಪ ಕತ್ತಿ ಪಶು ವೈದ್ಯರು ಫಿಸಿಯೋಥೆರಪಿ  ಮತ್ತು ಸಂಗೀತ ತರಬೇತಿಯಿಂದ ವಿಶೇಷತೇತನ ಮಕ್ಕಳ ಮೆದುಳಿನ ನರಗಳು ಪ್ರಚೋದನೆ ಆಗುವುದರಿಂದ ಮಕ್ಕಳಲ್ಲಿ ಚೇತರಿಕೆ ಉಂಟಾಗುತ್ತದೆ ಎಂದರು. ಪ್ರಸ್ತುತ ದಿನಗಳಲ್ಲಿ ಅತಿಯಾದ ತಂತ್ರಜ್ಞಾನದಿಸಿದ ನ್ಯೂನತೆಗಳು ಹೆಚ್ಚಾಗುತ್ತಿದ್ದು ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ. ಅತೀ ಹೆಚ್ಚು ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿನ ತೊಂದರೆಗಳಿಗೆ ಕಾರಣವಾಗಬಹುದು ಆದ್ದರಿಂದ ಪೋಷಕರ ಅಭ್ಯಾಸಗಳಲ್ಲೂ ಬದಲಾವಣೆಗಳಲಾಗಬೇಕು ಎಂದು ಸಲಹೆ ನೀಡಿದರು. 

ಅಥಿತಿ ರಾಜು ಪಾಟೀಲ್ ಇವರು ಮಾತನಾಡುತ್ತಾ ಇರುವಷ್ಟು ದಿನ ಸಂತೋಷದಿಂದ ಇರಬೇಕು , ಯಾವಾಗಲೂ ನಾವು ಮಾತನಾಡುವಾಗ ಧನಾತ್ಮಕ ಚಿಂತನೆಯನ್ನು ಇಟ್ಟುಕೊಂಡು ಮಾತನಾಡಿದರೆ ಅದು ಫಲಿಸುತ್ತದೆ ಮತ್ತು ಮುಂದಿನ ಜೀವನದ ಗುರಿಯನ್ನು ಇಂದೆ ಇಟ್ಟುಕೊಂಡು ನಮ್ಮ ಜೀವನವನ್ನು ಸಾಧಿಸಬೇಕು ಮತ್ತು  ಪಾಲಕರು ಮಕ್ಕಳ ಸೇವೆಯಲ್ಲಿ ಸಂತೋಷವನ್ನು ಕಾಣಬೇಕು ಹೇಳಿದರು. 

ಡಾಕ್ಟರ್ ಮೋಹನ್ ಸ್ವಾಮಿ ವಿವೇಕಾನಂದ ಯೂತ್ ಫೌಂಡೇಶನ್ ಇವರು ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಮನೆಗೆ ಹೋಗಿ ಅವರಿಗೆ ಅವಶ್ಯಕತೆ ಇರುವ ಚಿಕಿತ್ಸೆಗಳಾದ ಸ್ಪೇಚ್ ತೆರಪಿ ಮತ್ತು ವೈದ್ಯಕೀಯ ಸೌಲಭ್ಯ ನೀಡಲು ಸದಾ ಸಿದ್ಧ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಾಲಕರಿಗೆ ತಿಳಿಸಿದರು. 

ಶ್ರೀಧರ್ ಕುಲಕರ್ಣಿ ಯುನಿವರ್ಸಿಟಿ ಸಂಗೀತ ಶಿಕ್ಷಕರ  ಇವರು ಮಕ್ಕಳಿಗೆ ಮ್ಯೂಸಿಕಲ್ ತೆರಪಿ ಕೊಡುವುದರಿಂದ ಮಕ್ಕಳ ಕಲಿಕೆ ಸಂತೋಷದಾಯಕವಾಗುತ್ತದೆ ಎಂದು ಶಾಲಾ ಸಿದ್ಧತಾ ಕೇಂದ್ರಕ್ಕೆ ವಾರಕ್ಕೆ ಒಂದು ದಿನ ತಮ್ಮ ಸೇವೆ ಕೊಡಲು ಸಿದ್ಧರಿರುತ್ತೇವೆ ಎಂದು ತಿಳಿಸಿದರು. ಯೋಗ, ಧ್ಯಾನ ಮತ್ತಿತರ ಚಟುವಟಿಕೆಗಳನ್ನು ಮಾಡಿಸಬೇಕು ಹಾಗೂ ಅವರನ್ನು ನಿತ್ಯ ಸೂಕ್ಷಂ ವಾಗಿ ಗಮನಿಸಬೇಕು ಎಂದು ತಿಳಿಸಿದರು. 

ಫಿಜಿಯೋಥೆರಪಿ ವೈದ್ಯರಾದ ಸುಜಾತ ನಾಯಕ್, ವಿದ್ಯಾ ಮ್ಯಾಗೇರಿ, ಪುಷ್ಪ ಮಾನೆ, ಸರೋಜಾ ಧಾರವಾಡ, ಪ್ರಭಾವತಿ ಕವಳಿ, ನೂರಾರು ವಿಶೇಷ ಚೇತನ ಮಕ್ಕಳು, ಪಾಲಕರು, ಹಾಜರಿದ್ದು ಯಶಸ್ವಿಗೊಳಿಸಿದರು. ಮಧ್ಯಾಹ್ನದ  ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.  

ಬಿ.ಐ.ಆರ್‌.ಟಿ ಶಿಕ್ಷಕರಾದ  ಲಲಿತ ಹೊನ್ನವಾಡ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಣೆ ಮಾಡಿದರೆ,ಕೊನೆಯಲ್ಲಿ  ಗೋಪಾಲ್ ಸೊನ್ನಹಳ್ಳಿ ವಂದಿಸಿದರು. 

ಉದ್ಘಾಟನೆ ಹಾಗೂ  ಬೌದ್ಧಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಅಸಾಮರ್ಥ್ಯವನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವೂ ಬೇಕು. ಆ ನಿಟ್ಟಿನಲ್ಲಿ ಪೋಷಕರು ವಿಶೇಷ ಕಾಳಜಿವಹಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಹೇಳಿದರು.   

ಫೋರ್ಥ್‌ ವೇವ್ ಫೌಂಡೇಶನ್ ಮುಖ್ಯಸ್ಥರಾದ ಬಸವರಾಜ್ ಮ್ಯಾಗೇರಿ,  ಡಾಕ್ಟರ್ ಉದಯ್ ರಾಯ್ಕರ್ ನಿವೃತ್ತ  ಕೆಯುಡಿ ಪ್ರೊಫೆಸರ್ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ, ಮಾತಾಂರ್ಡಪ್ಪ ಕತ್ತಿ ಪಶು ವೈದ್ಯರು ಮಾತನಾಡಿದರು.   ರಾಜು ಪಾಟೀಲ್, ಡಾಕ್ಟರ್ ಮೋಹನ್ ಸ್ವಾಮಿ ವಿವೇಕಾನಂದ ಯೂತ್ ಫೌಂಡೇಶನ್, ಶ್ರೀಧರ್ ಕುಲಕರ್ಣಿ ಯುನಿವರ್ಸಿಟಿ ಸಂಗೀತ ಶಿಕ್ಷಕರು ಮಾತನಾಡಿದರು.