ಲೋಕದರ್ಶನವರದಿ
ಹಾವೇರಿ 12: ಸಮಾಜವನ್ನು ತಿದ್ದಿ ತೀಡುವಲ್ಲಿ ವಿದ್ಯಾಥರ್ಿಗಳಾದವರಿಗೆ ಉತ್ತಮ ಮಾರ್ಗದರ್ಶನ ಮಾಡುವುದರ ಮೂಲಕ ಪಾಲಕರು ಮತ್ತು ಶಿಕ್ಷಕರು ಸಮಾಜದ ಕೊಂಡಿಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಹೇಳಿದರು.
ಅವರು ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪಾಲಕರ ಮತ್ತು ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಲೇಜುಗಳು, ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳು ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಜೊತೆಗ ಮಾನವೀಯ ಮೌಲ್ಯಗಳನ್ನು ಸಂವಧರ್ಿಸುವ ಕಾರ್ಯವೆಸಗುತ್ತಿವೆ.
ಆ ಹಿನ್ನೆಲೆಯಲ್ಲಿ ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಉತ್ತಮ ನಾಗರಿಕರನ್ನಾಗಿ ಮಾಡಬೇಕಿದೆ. ನಮ್ಮ ಕಾಲೇಜು ನಿರಂತರ 55 ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ಕೊಡುತ್ತ ಬರುತ್ತಿದೆ. ಇಲ್ಲಿನ ಶಿಕ್ಷಣ ಮಟ್ಟ ಮತ್ತು ಬೋಧನಾ ವ್ಯವಸ್ಥೆ ಕುರಿತು ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ಇದೆ. ಈಗಾಗಲೇ ನ್ಯಾಕ್ನಿಂದ ಏ ಶ್ರೇಣಿಯನ್ನು ಪಡೆದಿದ್ದು ಸಂತೋಷ ತಂದಿದೆ. ಮುಂಬರುವ ದಿನಮಾನಗಳಲ್ಲಿ ಇನ್ನೂ ಮಹತ್ವದ ಬೆಳವಣಿಗೆ ಮತ್ತು ಬದಲಾವಣೆ ಮಾಡುವ ನಿಟ್ಟಿನಲ್ಲಿ ವಿದ್ಯಾಥರ್ಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಸಂಕಲ್ಪ ನಮ್ಮದಾಗಿದೆ. ಕುಂದು ಕೊರತೆಗಳನ್ನು ಸರಿಪಡಿಸಿ ಉತ್ತಮ ಮಟ್ಟದ ಸೇವೆಯನ್ನು ನೀಡಲಾಗುವುದು ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಪಾಲಕರು ಮಾತನಾಡಿ ಕಾಲೇಜಿನ ಬೋಧಕ ವಾತಾವರಣ ಶುದ್ಧವಾಗಿದ್ದು ವಿದ್ಯಾಥರ್ಿಪ್ರೇರಿತ ಶಿಕ್ಷಣವನ್ನು ನೀಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಕಾಲೇಜಿನ ಪ್ರಗತಿಗಾಗಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಬಿ.ಎ., ಬಿಕಾಂ, ಬಿಎಸ್ಸಿ ವಿದ್ಯಾಥರ್ಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು. ಪ್ರೊ. ಡಿ. ಎ. ಕೊಲ್ಲಾಪುರೆ ಸ್ವಾಗತಿಸಿದರು.
ಡಾ|| ಎಸ್. ವಿ. ಮಡವಾಳೆ ಪ್ರಾಸ್ತಾವಿಕ ಮಾತನಾಡಿದರು. ಪಾಲಕರ ಪ್ರತಿನಿಧಿಯಾಗಿ ಎನ್. ಎಸ್. ಕೊಪ್ಪದ ಮಾತನಾಡಿದರು. ಪ್ರೊ. ಎಸ್. ಆರ್. ಕೋರಿಶೆಟ್ಟರ್ ನಿರ್ವಹಿಸಿದರು. ಡಾ|| ಬಿ. ಎನ್. ವಾಸುದೇವ ನಾಯಕ ವಂದಿಸಿದರು.