ಪರಶುರಾಮ ಹುಬ್ಬಳ್ಳಿಯವರಿಗೆ ಕನರ್ಾಟಕ ಜನಸೇವಾ ರತ್ನ ರಾಷ್ಟ್ರ ಪ್ರಶಸ್ತಿ

ಲೋಕದರ್ಶನ ವರದಿ

ಕೊಪ್ಪಳ 01: ದಿ. 31ರಂದು ಹುಬ್ಬಳ್ಳಿಯ ಸಿದ್ದೇಶ್ವರ ಕೈಲಾಸ ಮಂಟಪದಲ್ಲಿ ಕನರ್ಾಟಕ ದರ್ಶನ ಮಾಸ ಪತ್ರಿಕೆಯು ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ, ಹೋರಾಟ ಚಳುವಳಿ ಮೂಲಕ ಗುತರ್ಿಸಿಕೊಂಡು ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಯನ್ನು ನೀಡುವ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಇದರಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಸುಮಾರು ವರ್ಷಗಳಿಂದ ಹಲವು ಜನಮೆಚ್ಚಿಗೆ ಕಾರ್ಯಗಳನ್ನು ಮಾಡಿ ಜನಮನಗಳಿಸಿಕೊಂಡು ಕನರ್ಾಟಕ ಕ್ರಾಂತಿ ಸೇನೆ ಕೊಪ್ಪಳ ತಾಲೂಕ ಅಧ್ಯಕ್ಷರಾದ ಪರಶುರಾಮ ಯಲ್ಲಪ್ಪ ಹುಬ್ಬಳ್ಳಿಯವರಿಗೆ ಕನರ್ಾಟಕ ಜನಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪ್ರಶಸ್ತಿಯನ್ನು ಸಂಪಾದಕರಾದ ಎಸ್ಎಸ್ ಪಾಟೀಲ್ರವರು ನೀಡಿ ಪರಶುರಾಮ ಹುಬ್ಬಳ್ಳಿಯವರು  ಇನಷ್ಟು ಜನ ಸೇವೆ, ಸಮಾಜ ಸೇವೆ ಮಾಡಲಿ ಎಂದು ಹಾರೈಸಿದರು. ಈ ಸಮಾರಂಭದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು, ಸ್ವಾಮಿಜಿಯವರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.