ಜೈಲು ಹಕ್ಕಿಗಳಿಗೆ ಪರಿಣಾಮ ಬೀರಿದ ಪಾಪು ಬಾಪು ನಾಟಕ



ಲೋಕದರ್ಶನ ವರದಿ

ಬಾಗಲಕೋಟೆ 4: ವಿಶ್ವ ನಾಯಕ ಮಹಾತ್ಮಾ ಗಾಂಧೀಜಿಯವರ ಜೀವನಾಧಾರಿತ ಸಂಕ್ಷಿಪ್ತ ಚಿತ್ರಣವನ್ನೊಳಗೊಂಡ 'ಪಾಪು ಬಾಪು' ನಾಟಕವು ಜೈಲಿನಲ್ಲಿರುವ ಕೈದಿಗಳಿಗೆ ಮನಮುಟ್ಟುವಂತೆ ಪರಿಣಾಮ ಬೀರಿತು.

   ಶುಕ್ರವಾರ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹಾತ್ಮಾಗಾಂಧೀಜಿಯವರ 150 ನೇ ವಷರ್ಾಚರಣೆ ಅಂಗವಾಗಿ ಹಮ್ಮಿಕೊಂಡ 'ಪಾಪು ಬಾಪು' ರಂಗರೂಪಕ ನಾಟಕ ಪ್ರದರ್ಶನ ನವನಗರದ ಹೊರವಲಯದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಪ್ರದಶರ್ಿಸಲ್ಪಟ್ಟಿತು. ಗಾಂಧೀಜಿ ಎಲ್ಲರಂತೆಯೇ ಹುಟ್ಟಿ ಎಲ್ಲರಂತೆ ಬೆಳೆದ ಸಾಮಾನ್ಯ ಮನುಷ್ಯನಾಗಿದ್ದು, ಕಷ್ಟದಲ್ಲಿರುವವರ ಬಗ್ಗೆ ಮತ್ತು ಸುಳ್ಳು ಮತ್ತು ಅನ್ಯಾಯದ ವಿರುದ್ದ ಎದೆಗುಂದದೆ ಜೀವನವೀಡಿ ಹೋರಾಟದ ಬದುಕು ಸಾಗಿಸಿದನ್ನು, ಪ್ರತಿಯೊಂದು ಕ್ಷೇತ್ರದಲ್ಲಿ ಅವರು ನೀಡಿದ ಸಾಮಾಜಿಕ ಕೊಡುಗೆಗಳನ್ನೊಳಗೊಂಡ ಸನ್ನಿವೇಶಗಳನ್ನು ಹಿಡಿದು ಅಲ್ಪ ಸಮಯದಲ್ಲಿಯೇ ಅರ್ಥವಾಗುವಂತೆ ರಚಿಸಿದ ನಾಟಕ ಈದಾಗಿತ್ತು.

   ಮಹಾತ್ಮಾ ಗಾಂಧೀಜಿಯವರ ಪಾಪುನಿಂದ ಹಿಡಿದು ಬಾಪುವರೆಗಿನ ಸಂಪೂರ್ಣ ಚಿತ್ರಣದ ನಾಟಕ ಇದಾಗಿತ್ತು. ಉಪವಾಸದ ಬಾಲಪಾಠ, ಸುಳ್ಳು ಹೇಳಬಾರದೆಂಬ ನೀತಿ ಬೋಧನೆ, ವಿದ್ಯಾಥರ್ಿಗಳಾದವರು ಪರೀಕ್ಷೆಯಲ್ಲಿ ನಕಲು ಮಾಡದಂತೆ ಪ್ರಚೋದಿಸುವ, ಜನ್ಮ ಮತ್ತು ಕರ್ಮ, ಅಪರಾಧ ಮತ್ತು ಶಿಕ್ಷೆ, ಕಡಲು ದಾಟಿದರೆ ಬಹಿಕ್ಷಾರ, ರೈಲಿನಿಂದ ಹೊರಗೆ ತಳ್ಳಿದ ಸನ್ನಿವೇಶ, ಹೋರಾಟದ ಸಾವಿರ ದಿನಗಳು, ವಿದೇಶದಿಂದ ಮರಳಿ ತಾಯಿನಾಡಿಗೆ ಆಗಮಿಸಿದ್ದು, ಸತ್ಯಾಗ್ರಹದ ಸನ್ನಿವೇಶಗಳು, ಜೈಲುವಾಸ, ಉಪ್ಪಿನ ಸತ್ಯಾಗ್ರಹ, ದೇಶ ವಿಭಜನೆಯಂತಹ ಸನ್ನಿವೇಶಗಳು ವೀಕ್ಷಿಸುತ್ತಿರುವ ಜೈಲು ಕೈದಿಗಳಿಗೆ ಪರಿಣಾಮ ಬೀರಿದವು.

   ಇದೇ ಸಂದರ್ಭದಲ್ಲಿ ಕೈದಿಗಳಾದ ಬಸವರಾಜ ನಾಟಕ ವೀಕ್ಷಿಸಿ, ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ ಯುವ ಜನಾಂಗಕ್ಕೆ ಉತ್ತಮ ಸಂದೇಶವುಳ್ಳ ನಾಟಕ ಇದಾಗಿದ್ದು, ಗಾಂಧೀಜಿಯವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ಅದೇ ರೀತಿ ಕೈದಿ ಆನಂದ ಬೆನ್ನೂರ ಮಾತನಾಡಿ ಗದ್ಘದಿತನಾಗಿ ಮುಂದಿನ ಜನ್ಮ ಅಂತ ಒಂದಿದ್ದರೆ ಗಾಂಧೀಜಿಯವರ ತತ್ವಾದರ್ಶ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.

   ಪ್ರಾರಂಭದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಶಶಿಕಲಾ ಹುಡೇದ ನೂಲಿನ ಹಾರ ಹಾಕುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. 

  ಇದೇ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಆನಂದ ಭಜಂತ್ರಿ, ಪ್ರಧಾನ ವೀಕ್ಷಕ ಎಸ್.ವಾಯ್.ಕುರಿ, ಮುಖ್ಯ ವೀಕ್ಷಕ ಎಸ್.ಎಸ್.ಪೂಜಾರಿ, ವೀಕ್ಷಕರಾದ ಎಸ್.ಆರ್.ಪಾಟೀಲ, ಎಸ್.ಐ.ಶಿರಗುಂಪಿ, ಸಿ.ಎಲ್.ಚವ್ಹಾಣ, ಕಾರ್ಯಕ್ರಮದ ಜಿಲ್ಲಾ ಸಂಚಾಲಯ ಮಹಾಂತೇಶ ಗಜೇಂದ್ರಗಡ ಸೇರಿದಂತೆ ಇತರರು ಉಪಸ್ಥಿತರಿದ್ದರು.