ಪಾಪಿನಾಯಕನಹಳ್ಳಿ : ಪೂರ್ವ ವಲಯ ಮಟ್ಟದ ಕ್ರೀಡಾಕೂಟ


ಲೋಕದರ್ಶನ ವರದಿ

ಹೊಸಪೇಟೆ04 : ವಿದ್ಯಾಥರ್ಿಗಳು ಮೊಬೈಲ್, ಇಂಟರ್ನೆಟ್ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾನಸಿಕವಾಗಿ ಕುಗ್ಗುವುದಕ್ಕಿಂತ, ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಆಸಕ್ತಿ ವಹಿಸಿದರೆ ಸದೃಡ ಶರೀರದ ಜೊತೆಗೆ ಮನೋ ವಿಕಾಸದ ಬೆಳವಣಿಗೆಯಾಗುತ್ತದೆ ಎಂದು ಗಣಿ ಉದ್ಯಮಿ ಗೊಗ್ಗ ಗುರುಶಾಂತಯ್ಯ ಹೇಳಿದರು.

ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಬುಧವಾರ ನಡೆದ ಹೊಸಪೇಟೆ ಪೂರ್ವ ವಲಯ ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ವಿದ್ಯಾಥರ್ಿಗಳಿಗೆ ಪಾಠ ಎಷ್ಟು ಮುಖ್ಯವೋ ಅಷ್ಠೇ ಆಟಗಳು ಮುಖ್ಯ. ಕ್ರೀಡೆಗಳು ಮಕ್ಕಳ ಮನೋ ವಿಕಾಸದ ಜೊತೆಗೆ ಶರೀರವನ್ನು ಸದೃಡಗೊಳಿಸಲು ಸಹಕಾರಿಯಾಗುತ್ತವೆ. ಆದರೆ ಇಂದಿನ ದಿನಗಳಲ್ಲಿ ವಿದ್ಯಾಥರ್ಿಗಳು ಮೊಬೈಲ್, ಇಂಟರ್ನೆಟ್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ವಿದ್ಯಾಥರ್ಿಗಳು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ಉದ್ಯಮಿ ಗೊಗ್ಗ ವಿಶ್ವನಾಥ ಮಾತನಾಡಿ, ಗೊಗ್ಗ ಮೈನ್ಸ್ ಕಂಪನಿಯು ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ಅನೇಕ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬಂದಿದೆ. ಅದರಂತೆ ಇಂದು ಗ್ರಾಮೀಣ ಕ್ರೀಡಾಕೂಟಕ್ಕೆ ಸಹ ಸಹಕಾರ ನೀಡಿದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ. ಹೀಗಾಗಿ ಮಕ್ಕಳು ಕ್ರೀಡಾ ಮನೋಭಾವದಿಂದ  ಆಟಗಳನ್ನು ಆಡಬೇಕು ಎಂದು ಸಲಹೆ ನೀಡಿದರು.

ಕ್ರೀಡಾಕೂಟದಲ್ಲಿ 16 ಪ್ರೌಢಶಾಲೆಯ ಸುಮಾರು 800ರಿಂದ 1000 ವಿದ್ಯಾಥರ್ಿಗಳು ಭಾಗವಹಿಸಿದ್ದರು.

ದೈಹಿಕ ಶಿಕ್ಷಕ ಪಾಂಡುರಂಗ ಪ್ರಾಸ್ತಾವಿಕ ಮಾತನಾಡಿದರು. ಕಾರ್ಮೂರ್ ವಿದ್ಯಾಪೀಠದ ಅಧ್ಯಕ್ಷೆ ಎಚ್.ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ನಜೀರ್ಸಾಬ್ ಪಾಟೀಲ ನಿರೂಪಿಸಿದರು. ಪ್ರಭುಸ್ವಾಮಿ ವಂದಿಸಿದರು.

ಬಳಿಕ ಕ್ರೀಡಾಕೂಟಗಳು ಪ್ರಾರಂಭವಾದವು. ಬಾಲಕೀಯರ ಖೋಖೋ ವಿಭಾಗದಲ್ಲಿ ಸಕರ್ಾರಿ ಪ್ರೌಢಶಾಲೆ, ಗಾಗಿಗನೂರು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಹೊಸಪೇಟೆ ರಾಣಿ ಚೆನ್ನಮ್ಮ ಪ್ರೌಢಶಾಲೆ ಪಡೆಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಗೊಗ್ಗ ಚನ್ನಬಸಪ್ಪ, ಜಿ.ಪಂ.ಸದಸ್ಯೆ ಜಯಕುಮಾರಿ ಈಶ್ವರ್, ತಾ.ಪಂ.ಸದಸ್ಯೆ ಸುಬ್ಬಮ್ಮ ನಾಯಕರ, ಗ್ರಾ.ಪಂ.ಅಧ್ಯಕ್ಷೆ ಭೀಮಕ್ಕ ನಾಯಕರ, ಮುಖಂಡರಾದ ಎನ್.ತಿಪ್ಪೇಸ್ವಾಮಿ, ಬಿ.ರಾಮು, ವಿ.ಸೋಮಪ್ಪ, ಮೇಟಿ ಶಂಕರ್, ಶಶಿಧರ, ಕೆ.ತಿಪ್ಪೇಸ್ವಾಮಿ, ಹನುಮಂತ, ಶಿಕ್ಷಣ ಇಲಾಖೆಯ ಬಸವರಾಜ ಜತ್ತಿ, ಎ.ಎನ್.ಸುಧಾಕರ್, ಮುಖ್ಯಗುರು ಎಚ್.ಬಿ.ಪದ್ಮಾವತಿ, ಗುರುಲಿಂಗಯ್ಯ, ರವಿಕಿರಣ ಇದ್ದರು.