ಪನ್ನೀರ್ ಫೋಟೋ ಅಸಲಿಯತ್ತೇನು?


ನವದೆಹಲಿ 30: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು ತಲೆಬಾಗಿ ನಮಿಸುತ್ತಿರುವ ಫೋಟೋ ವೈರಲ್ ಆಗಿದ್ದು ಈ ಫೋಟೋ ಅಸಲಿಯತ್ತೇನು ಎಂದು ತಿಳಿದುಬಂದಿದೆ.  

ಇನ್ನು ಈ ಫೋಟೋ ಸತ್ಯಾಸತ್ಯತೆ ಬಗ್ಗೆ ಆಲ್ಟ್ ನ್ಯೂಸ್ ಪರಿಶೀಲನೆ ನಡೆಸಿತ್ತು. ಅಲ್ಲದೆ ಈ ಪೋಟೋವನ್ನು ಹಲವು ಪತ್ರಿಕೆಗಳಲ್ಲಿ ಈ ಫೋಟೋ ಬಳಕೆಯಾಗಿದೆ ಎಂದು ಹೇಳಿತ್ತು.  

ಗೂಗಲ್ ಲ್ಲಿ ಒ ಪನ್ನೀರ್ ಸೆಲ್ವಂ ಬೌವ್ ಎಂದು ಕೀವಡರ್್ ಸಚರ್್ ಮಾಡಿದಾಗ ಪನ್ನೀರ್ ಅವರು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಮುಂದೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋ ಸಿಗುತ್ತದೆ.  

ಇದೇ ಫೋಟೋವನ್ನು ತೆಗೆದುಕೊಂಡು ಫೋಟೋ ಶಾಪ್ ನಲ್ಲಿ ಪ್ರಧಾನಿ ಮೋದಿ ಮುಂದೆ ಪನ್ನೀರ್ ಸೆಲ್ವಂ ಅವರು ತಲೆಬಾಗಿ ನಮಸ್ಕರಿಸಿದಂತೆ ಕಾಣುವಂತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.