ಪಾಂಡಪ್ಪ ಇಂಚಲ ಪೆನೆಲ್ಗೆ ಜಯ: ವಿಜಯೋತ್ಸವ


ಬೈಲಹೊಂಗಲ 01: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ನಂ.1 ರ(ಎಲ್.ಎಸ್.ಎಮ್.ಪಿ)ಇದರ ಆಡಳಿತ  ಮಂಡಳಿಗೆ ಸೋಮವಾರ ನಡೆದ ಸಾಮಾನ್ಯ ಸಾಲಗಾರರ ಕ್ಷೇತ್ರದ ಚುನಾವಣೆಯಲ್ಲಿ ಈರಪ್ಪ ಚನ್ನಬಸಪ್ಪ ತುರಮರಿ(321), ಗುರುಬಸಪ್ಪ ಮಲಕಾಜಪ್ಪ ಮೂಗಿ(320), ವೀರುಪಾಕ್ಷಪ್ಪ ಚನ್ನಬಸಪ್ಪ ವಾಲಿ(312), ಶಿವಪ್ಪ ಚನ್ನಬಸಪ್ಪ ಮತ್ತಿಕೊಪ್ಪ(319), ಶಿವಾನಂದ ಬಸಪ್ಪ ಮಡಿವಾಳರ(310) ಮತಗಳನ್ನು ಗಳಿಸಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.

        ಸೋಮವಾರ ಬೆಳಿಗ್ಗೆ ಬಿರುಸಿನಿಂದ ಮತದಾನ ಪ್ರಾರಂಭವಾಗಿ ಸಂಜೆ 4 ಕ್ಕೆ ಮುಕ್ತಾಯವಾಯಿತು. ಮತ ಎಣಿಕೆ ಸಂಘದ ಭವನದಲ್ಲಿ ನಡೆಯಿತು. ಹಳೇ ಊರು ಪೆನೆಲ್ ನ ಪಾಂಡಪ್ಪ ಇಂಚಲ ನೇತೃತ್ವದ ಪೆನೆಲ್ ಚುನಾಯಿತರಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಹಚ್ಚಿ ಗೆಲುವಿನ ನಗೆ ಬೀರಿದರು.

        ಈ ಬಾರಿ ಒಟ್ಟು 12 ಸ್ಥಾನಗಳಿಗೆ 36 ನಾಮಪತ್ರ ಸಲ್ಲಿಕೆ ಆಗಿದ್ದವು. ಈ ಪೈಕಿ ಸಾಲಗಾರರ ಮಹಿಳಾ ಮೀಸಲಾತಿ ಎರಡು ಸ್ಥಾನಗಳಿಗೆ ಸುಜಾತಾ ಮಹಾಂತೇಶ ಹರಕುಣಿ, ಪ್ರೇಮಾ ಪಾಂಡಪ್ಪ ಇಂಚಲ, ಸಾಲಗಾರರ ಹಿಂದುಳಿದಬಿ ವರ್ಗ ಮೀಸಲು 2 ಸ್ಥಾನ್ಕಕೆ ಬಸಪ್ಪ ಮಲ್ಲಪ್ಪ ಗೋಣಿ, ಬಾಬುಸಾಬ ಫಕ್ರುಸಾಬ ಸುತಗಟ್ಟಿ, ಸಾಲಗಾರರ ಪರಿಶಿಷ್ಟ ಜಾತಿ ಮೀಸಲು ಒಂದು ಸ್ಥಾನಕ್ಕೆ ಪುಂಡಲೀಕ ಹಣಮಂತಪ್ಪ ರಾಯಬಾಗ, ಸಾಲಗಾರರ ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನಕ್ಕೆ ಬಸವರಾಜ ಯಲ್ಲಪ್ಪ ಬೆಟಗೇರಿ ಹಾಗೂ ಸಾಲಗಾರರಲ್ಲದ ಒಂದು ಸ್ಥಾನಕ್ಕೆ ಶಿವಪ್ಪ ಬಸಪ್ಪ ಗುಂಡ್ಲೂರ ಅವಿರೋಧವಾಗಿ ಆಯ್ಕೆಯಾದರು

   ಪೊಟೊ ಕ್ಯಾಪ್ಸನ;ಎಚ್30-ಬಿಎಲ್ಎಚ್5

ಪಾಂಡಪ್ಪ ಇಂಚಲ ನೇತೃತ್ವದ ಹಳೇ ಊರು ರೈತ ಪೆನೆಲ್ ಜಯಗಳಿಸಿದ್ದು, ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಹಚ್ಚಿ ಗೆಲುವಿನ ನಗೆ ಬೀರಿದರು.