30ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ

ಲೋಕದರ್ಶನ ವರದಿ

ಬೆಳಗಾವಿ 26: ಬೆಳಗಾವಿಯ ಹಿಂದವಾಡಿಯಲ್ಲಿರುವ ಜಿನಮಂದಿರದ ನೂತನೀಕರಣ ಮತ್ತು 1008 ಚಂದ್ರಪ್ರಭ, ಆದಿನಾಥ  ಮತ್ತು ಭ.ಭರತ ಹಾಗೂ 24 ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ ಡಿ.30 ರಿಂದ ಜ.3 ರವರೆಗೆ ನಡೆಯಲಿದೆ ಎಂದು ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿ  ಕಾಯರ್ಾಧ್ಯಕ್ಷ ಭೂಷಣ ಮಿಜರ್ಿ ಅವರು ಇಂದಿಲ್ಲಿ ಹೇಳಿದರು. 

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದವಾಡಿಯಲ್ಲಿ 1996 ರಲ್ಲಿ ನಿಮರ್ಿಸಲಾದ ಜೈನ ಮಂದಿರದ ಪ್ರಥಮ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮ ನಡೆಸಲಾಗಿತ್ತು. ತದನಂತರ 2000 ನೇ ಸಾಲಿನಲ್ಲಿ  ಹೊಸದಾಗಿ ಮಾನಸ್ಥಂಭವನ್ನು ನಿಮರ್ಿಸಿ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈ ಬಾರಿ ಜೈನ ಮಂದಿರವನ್ನು ಸಂಪೂರ್ಣವಾಗಿ ನೂತನಿಕರಣ ಮಾಡಲಾಗಿದ್ದು,ಬಸದಿಯಲ್ಲಿ ಹೊಸದಾಗಿ ಶ್ರೀ.1008 ಭ. ಚಂದ್ರಪ್ರಭ, ಬಸದಿಯ ಶಿಖರದಲ್ಲಿ ಭ.ಆದಿನಾಥ  ಮತ್ತು ಭ.ಭರತ ಮತ್ತು 24 ತೀರ್ಥಂಕರರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 

ಸಮಿತಿಯ ಉಪಾಧ್ಯಕ್ಷ ಶೀತಲ ನಿಲಜಗಿ ಅವರು ಮಾತನಾಡಿ,ಡಿ. 30 ರಂದು ಧ್ವಜಾರೋಹಣ,ಮಂಟಪ ಉದ್ಘಾಟನೆ,ಮಂಗಲಕಲಶ ಸ್ಥಾಪನೆ, ಅಖಂಡದೀಪ ಪ್ರಜ್ವಲನೆ, ಧರ್ಮಸಭಾ, ಗರ್ಭಕಲ್ಯಾಣ ಸಂಸ್ಕಾರವಿಧಿ, ಇಂದ್ರಸಭಾ, ರತ್ನವೃಷ್ಠಿ, ಷೋಡಷ ಸ್ವಪ್ನ ದರ್ಶನ ಕಾರ್ಯಕ್ರಮಗಳು ನಡೆಯಲಿವೆ. ಡಿ.31 ರಂದು ಪಂಚಾಮೃತ ಅಭಿಷೇಕ, ಜನ್ಮಕಲ್ಯಾಣ ಸಂಸ್ಕಾರ ವಿಧಿ, ಪಾಂಡುಕಶಿಲೆ ಮೆರವಣಿಗೆ, ಜನ್ಮಾಭಿಷೇಕ, ನಾಮಕರಣ, ಬಾಲಕ್ರಿಡೆ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಜ.1 ರಂದು ಮಂಗಲಕುಂಭಾನಯನ, ಮೌಂಜಿಬಂಧನ, ತಪಕಲ್ಯಾಣ, ಧರ್ಮಸಭಾ, ರಾಜ್ಯಾಭಿಷೇಕ, ಕಾಣಿಕೆ ಅರ್ಪಣೆ, ದರಬಾರಿ ನೃತ್ಯ, ವೈರಾಗ್ಯಭಾವನಾ, ದೀಕ್ಷಾಕಲ್ಯಾಣ ಸಂಸ್ಕಾರ ವಿಧಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ. 2ರಂದು ತೀರ್ಥಂಕರರ ಮಹಾಮುನಿ ಅವಸ್ಥೆಯಲ್ಲಿ ಆಹಾರ ವಿಧಿ, ಕೇವಲಜ್ಞಾನ ಸಂಸ್ಕಾರ ವಿಧಿ, ಕೇವಲಜ್ಞಾನ ಕಲ್ಯಾಣ ಪೂಜಾ, ಸಮವಶರಣ ರಚನಾ ಸಭಾ, ದಿವ್ಯಧ್ವನಿ, ಪ್ರಶ್ನೋತ್ತರ, ಹಾಗೂ ರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಜ.3 ರಂದು ಮಂಗಲಕುಂಭಾನಯನ, ನಿತ್ಯವಿಧಿ, ಶಾಂತಿಮಂತ್ರ, ನಿವರ್ಾಣಕಲ್ಯಾಣ ಸಂಸ್ಕಾರ ವಿಧಿ ನಿವರ್ಾಣಕಲ್ಯಾಣ ಪೂಜಾ, ಧರ್ಮಸಭಾ, 1008 ಕಲಶಾಭಿಷೇಕ ಮಹೋತ್ಸವ,ಕಂಕಣ ವಿಮೋಚನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು. 

ಮಹಾಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, 108 ಆಚಾರ್ಯ ಧರ್ಮಸೇನ ಮುನಿ ಮಹಾರಾಜರ ಸಾನಿಧ್ಯದಲ್ಲಿ ಹಾಗೂ ಸ್ವಸ್ತೀಶ್ರೀ ಭುನವಕೀತರ್ಿ ಭಟ್ಟಾರಕ ಸ್ವಾಮೀಜಿ ಕನಕಗಿರಿ, ಸ್ವಸ್ತೀಶ್ರೀ ಧವಲಕಿತರ್ಿ ಭಟ್ಟಾರಕ ಅರಿಹಂತಗಿರಿ ತಮಿಳುನಾಡು, ಸ್ವಸ್ತಿಶ್ರೀ ದೇವೇಂದ್ರಕೀತರ್ಿ ಭಟ್ಟಾರಕ ಸ್ವಾಮೀಜಿ ಹೊಂಬುಜ, ಸ್ವಸ್ತೀಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸ್ವಾದಿ, ಮತ್ತು ಸ್ವಸ್ತೀಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಎನ್.ಆರ್.ಪುರ ಇವರ ಪ್ರಮುಖ ಉಪಸ್ಥಿತಿಯಲ್ಲಿ ಈ  ಎಲ್ಲ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿ ಪದಾಧಿಕಾರಿಗಳಾದ ಅಪ್ಪಾಸಾಹೇಬ ಕಟಗೆಣ್ಣವರ, ಸುಹಾಸ ಹುಲಭತ್ತೆ, ಬ್ರಹ್ಮಾನಂದ ನಿಲಜಗಿ, ಸನತಕುಮಾರ ವಿ.ವಿ. ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.