ಗೋಕಾಕ: ಬಿಜೆಪಿ ಅಭ್ಯಥರ್ಿ ರಮೇಶ ಜಾರಕಿಹೊಳಿ ಅವರ ಪ್ರಚಾರಾರ್ಥವಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಹಾಗೂ ಚಲನ ಚಿತ್ರ ನಟಿ ತಾರಾ ಅವರು ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿಗೆ ತೆರಳಿ ಮತಯಾಚನೆ ಮಾಡಿದರು.
ಮಂಗಳವಾರ ಮುಂಜಾನೆ ರಮೇಶ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿದ ತಾರಾ ಅವರು ನಂತರ ಗೋಕಾಕ ಮತಕ್ಷೇತ್ರದ ಕೊಳವಿ, ಗಿಳಿಹೊಸೂರ, ಖನಗಾಂವ ಸೇರಿದಂತೆ ಇತರ ಗ್ರಾಮಗಳಿಗೆ ತೆರಳಿ ಪಕ್ಷದ ಅಭ್ಯಥರ್ಿ ರಮೇಶ ಜಾರಕಿಹೊಳಿ ಅವರ ಪರವಾಗಿ ಮತಯಾಚನೆ ಮಾಡಿದರು.
ಗಿಳಿಹೊಸೂರ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ತಾರಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನರ್ಾಟಕ ರಾಜ್ಯವನ್ನು ನಂ 1 ರಾಜ್ಯವನ್ನಾಗಿಸಲು ಹೊರಟಿದ್ದಾರೆ. ಯಡಿಯೂರಪ್ಪ ಅವರ ಕೈ ಬಲ ಪಡಿಸಬೇಕೆಂದರೆ ಬಿಜೆಪಿ ಅಭ್ಯಥರ್ಿ ಶಾಸಕ ಎ.ಎಸ್ ಪಾಟೀಲ (ನಡಹಳ್ಳಿ) ಅವರು ಮಾತನಾಡಿದರು.
ಸಚಿವೆ ಶಶಿಕಲಾ ಜೋಲ್ಲೆ, ಶಾಸಕರಾದ ಆನಂದ ಮಾಮನಿ, ಮಹಾದೇವಪ್ಪಾ ಯಾದವಾಡ, ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಶಶಿಧರ ದೇಮಶೆಟ್ಟಿ, ಮಹಾಂತೇಶ ತಾವಂಶಿ, ಶಾಮಾನಂದ ಪೂಜಾರಿ, ಶಕೀಲ ಧಾರವಾಡಕರ ಸೇರಿದಂತೆ ಇತರರು ಇದ್ದರು.