ಪಂಪಯ್ಯಸ್ವಾಮಿ ಅವರಿಗೆ ಗ್ರೀನ್ ಹೀರೋ ಪ್ರಶಸ್ತಿ

ಲೋಕದರ್ಶನವರದಿ

ಹೊಸಪೇಟೆ15: ಖ್ಯಾತ ವನ್ಯಜೀವಿ ಛಾಯಾಗ್ರಾಹಕ, ಪರಿಸರ ಸಂರಕ್ಷಕ, ವನ್ಯಜೀವಿ ಮಾರ್ಗದರ್ಶಕ ಕಮಲಾಪುರದ ಪಂಪಯ್ಯಸ್ವಾಮಿ ಮಳೆಮಠ ಅವರಿಗೆ ಬೆಂಗಳೂರಿನ ವೃಕ್ಷಮಿತ್ರ ಪೌಂಡೇಶನ್ ನ ' ಗ್ರೀನ್ ಹೀರೋ ' ಪ್ರಶಸ್ತಿ ಲಭ್ಯವಾಗಿದೆ.

   ಬೆಂಗಳೂರಿನ ಜಯನಗರದ ಎಸ್.ಎಸ್ ಎಂಆರ್,ವಿ ಕಾಲೇಜಿನ ಆವರಣದಲ್ಲಿ ನಡೆದ ಪೌಂಡೇಶನ್ ನ ಸಮಾರಂಭದಲ್ಲಿ ನಿವೃತ್ತ ಮುಖ್ಯ ನ್ಯಾಯಾಧೀಶ ಎಂ.ಎನ್. ವೆಂಕಟಚಲಯ್ಯ ಅವರು ಈ ಪ್ರಶಸ್ತಿಯನ್ನು ಕೊಡಮಾಡಿದರು.

     ಇವರೊಂದಿಗೆ ನಾಡಿನ ವಿವಿಧೆಡೆ ಪರಿಸರ ಕ್ಷೇತ್ರದಲ್ಲಿ ಸಾಧನೆಗೈಯ್ದ 9 ಜನರಿಗೂ ಈ ಪ್ರಶಸ್ತಿಯನ್ನು ನೀಡಲಾಗಿದೆ.

      ಈ ಸಂದರ್ಭದಲ್ಲಿ ವೃಕ್ಷ ಪೌಂಡೇಶನ್ ಸಂಸ್ಥಾಪಕ ಟ್ರೀ ಡಾಕ್ಟರ್ ವಿಜಯ್ ನಿಶಾಂತ್ ಎಸ್.ಎಸ್.ಎಂ.ಆರ್.ವಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಅನಿಲ್ ಕುಮಾರ್, ಸಮರ್ಥ ಭಾರತದ ಕೃಷ್ಣೇಗೌಡ, ಪಟ್ಟಾಭಿರಾಮ ನಗರದ ಕಾಪರ್ೋರೇಟರ್ ಶ್ರೀಮತಿ ನಾಗರತ್ನ ರಾಮಮೂತರ್ಿ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ,  ಬಿ.ಬಿ.ಎಂಪಿಯ ಮೇಯರ್ ಗಂಗಾಂಬಿಕೆ ಮಲ್ಲಿಕಾಜರ್ುನ ಉಪಸ್ಥಿತರಿದ್ದರು.

ಪಂಪಯ್ಯಸ್ವಾಮಿ ಅವರ ಒಟ್ಟು ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.