ಕರಾಚಿ , ಮಾ 22, ಕರೋನ ವಿರುದ್ದ ಹೋರಾಟದ ನೇತೃತ್ವ ವಹಿಸಿದ್ದ ಪಾಕ್ 'ಹೀರೋ' ವೈದ್ಯರೊಬ್ಬರು ಮೃತಪಟ್ಟಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದ್ದು, ಜನತೆಯನ್ನು ಈ ಸುದ್ದಿ ದಂಗು ಬಡಿಸಿದೆ.
ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಯಲ್ಲಿ ಕರೋನ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದ ಯುವ ವೈದ್ಯ ಮೃತಪಟ್ಟಿದ್ದಾರೆ ಆದರೆ ಅವರು ಸೋಂಕಿನ ಅಥವಾ ಇತರ ಕಾರಣಗಳಿಂದ ಮೃತಪಟ್ಟಿದ್ದಾರೆಯೇ ಎಂದು ನಿರ್ದಿಷ್ಟವಾಗಿ ಖಚಿತವಾಗಿಲ್ಲ ವೈದ್ಯ ಉಸಾಮಾ ರಿಯಾಜ್ ಅವರ ಸಾವನ್ನು ಭಾನುವಾರ ರಾತ್ರಿ ಜಿಬಿ ಸರ್ಕಾರದ ವಕ್ತಾರ ಫೈಜುಲ್ಲಾ ಫರಾಕ್ ಖಚಿತಪಡಿಸಿದ್ದಾರೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಇರಾನ್‌ನ ಗಡಿಯನ್ನು ಹಂಚಿಕೊಳ್ಳುವ ಟಫ್ಟಾನ್ ಎಂಬ ಪಟ್ಟಣದಿಂದ ಈ ಪ್ರದೇಶಕ್ಕೆ ಬರುವ ರೋಗಿಗಳ ತಪಾಸಣೆಯಲ್ಲಿ ವೈದ್ಯರು ಸಕ್ರಿಯರಾಗಿ ಆರೈಕೆ ಮಾಡಿ ಜನರ ಮೆಚ್ಚುಗೆ ಗಳಿಸಿದ್ದರು .
ಕರೋನ ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈದ್ಯ ಉಸಾಮಾ ರಿಯಾಜ್ ನಿಧನ ಹೊಂದಿದ್ದಾರೆ ಎಂದು ಗಿಲ್ಗಿಟ್-ಬಾಲ್ಟಿಸ್ತಾನ್ ಆರೋಗ್ಯ ಇಲಾಖೆ ಖಚಿತಪಡಿಸಿರುವುದು ತೀವ್ರ ದುಃಖದಿಂದ ಕೂಡಿದೆ ಸರ್ಕಾರದ ಮಾಹಿತಿ ವಿಭಾಗ ಟ್ವೀಟ್ ಮಾಡಿದೆ.ವೈದ್ಯರನ್ನು ಅಧಿಕೃತವಾಗಿ ರಾಷ್ಟ್ರೀಯ ವೀರ ಎಂದು ಘೋಷಿಸಲಾಗುವುದು ಎಂದು ಇಲಾಖೆ ತಿಳಿಸಿದೆ.