ನವದೆಹಲಿ, ಆ 8 ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗುರುವಾರ 2019-20 ಆವೃತ್ತಿಯ ಆಟಗಾರರ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 'ಎ' ಲಿಸ್ಟ್ನಲ್ಲಿ ಬಾಬರ್ ಅಜಾಮ್, ಸರ್ಫರಾಜ್ ಅಹಮದ್ ಹಾಗೂ ಯಾಸೀರ್ ಶಾ ಅವರು ಸ್ಥಾನ ಪಡೆದಿದ್ದಾರೆ. ಪಿಸಿಬಿ ಕಳೆದ ಆವೃತ್ತಿಯಲ್ಲಿ 33 ಆಟಗಾರನ್ನು ಗುತ್ತಿಗೆ ಲಿಸ್ಟ್ನಲ್ಲಿ ಗುರುತಿಸಿತ್ತು. ಆದರೆ, ಈ ಬಾರಿ 19ಕ್ಕೆ ಇಳಿಸಿದೆ. ಮೊಹಮ್ಮದ್ ಹಫೀಜ್ ಹಾಗೂ ಶೊಯೆಬ್ ಮಲ್ಲಿಕ್ ಅವರನ್ನು ಲಿಸ್ಟ್ನಲ್ಲಿ ಪರಿಗಣಿಸಿಲ್ಲ. ಆದರೆ, ಅವರು ರಾಷ್ಟ್ರೀಯ ತಂಡದ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ಪಿಸಿಬಿ ಮಾಧ್ಯಮ ಹೇಳಿಕೆ ಸ್ಪಷ್ಟಪಡಿಸಿದೆ. ಕಳೆದ 12 ತಿಂಗಳಲ್ಲಿ ಆಟಗಾರರ ಫಿಟ್ನೆಸ್ ಹಾಗೂ ಪ್ರದರ್ಶನ ಪರಿಶೀಲಿಸಿ ಗುತ್ತಿಗೆ ಲಿಸ್ಟ್ ಅಂತಿಮಗೊಳಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಐದು ವಿಭಾಗಗಳನ್ನು ರಚಿಸಿತ್ತು. ಆದರೆ, ಈ ಬಾರಿ ಮೂರು ವಿಭಾಗಗಳಿಗೆ ಕಡಿತಗೊಳಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ-20 ಸರಣಿಗಳನ್ನು ಶ್ರೀಲಂಕಾ ವಿರುದ್ಧ ಸೆಣಸಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಟಿ-20 ಸರಣಿಗಳನ್ನು ಆಸ್ಟ್ರೇಲಿಯಾ ವಿರುದ್ಧ ಮತ್ತು ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಹಾಗೂ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪಾಕಿಸ್ತಾನ ಪ್ರಸ್ತುತ ಆವೃತ್ತಿಯಲ್ಲಿ ಸೆಣಸಲಿದೆ. ಪಾಕಿಸ್ತಾನ ಗುತ್ತಿಗೆ ಆಟಗಾರರು(2019 ಜು 1 ರಿಂದ 2020 ಜೂನ್ 30) 'ಎ' ವಿಭಾಗ: ಬಾಬರ್ ಅಜಾಮ್, ಸರ್ಫರಾಜ್ ಅಹಮದ್, ಯಾಸೀರ್ ಅಹಮದ್ 'ಬಿ' ವಿಭಾಗ: ಅಸಾದ್ ಶಫಿಕ್, ಅಜರ್ ಅಲಿ, ಹ್ಯಾರಿಸ್ ಸೊಹೈಲ್, ಇಮಾಮ್-ಉಲ್-ಹಕ್, ಮೊಹಮ್ಮದ್ ಅಬ್ಬಾಸ್, ಶದಾಬ್ ಖಾನ್, ಶಾಹೀನ್ ಶಾ ಅಫ್ರಿದಿ ಹಾಗೂ ವಹಾಬ್ ರಿಯಾಜ್ 'ಸಿ' ವಿಭಾಗ: ಅದಿಲ್ ಅಲಿ, ಹಸನ್ ಅಲಿ, ಫಖಾರ್ ಜಮಾನ್, ಇಮಾದ್ ವಾಸೀಮ್, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ಶಾನ್ ಮಸೂದ್, ಉಸ್ಮಾನ್ ಶಿನ್ವಾರಿ