ಶ್ರೀನಗರ, ಏಪ್ರಿಲ್ 10,ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿನ ಕೆರನ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಪಡೆಗಳು ಶುಕ್ರವಾರ ಅಪ್ರಚೋದಿತ ಭಾರೀ ಶೆಲ್ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದೆ.2003 ರ ಕದನ ವಿರಾಮವನ್ನು ಉಲ್ಲಂಘಿಸಿರುವ ಪಾಕಿಸ್ತಾನಿ ಪಡೆಗಳು ಶುಕ್ರವಾರ ಮಧ್ಯಾಹ್ನ ಗಡಿಯ ಮುನ್ನೆಲೆ ಸೇನಾ ಶಿಬಿರಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮೊರ್ಟರ್ ಶೆಲ್‍ಗಳನ್ನು ಹಾರಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಭಾರತೀಯ ಪಡೆಗಳು ಸಹ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದು, ಇತ್ತೀಚಿನ ವರದಿಗಳು ಬರುವವರೆಗೆ ಗುಂಡಿನ ಚಕಮಕಿ ಮುಂದುವರೆದಿತ್ತು. ಆದರೂ, ಭಾರತದ ಕಡೆ ಯಾವುದೇ ಆಸ್ತಿಗೆ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ. ಈ ಮಧ್ಯೆ, ಪಾಕ್ ಪಡೆಗಳ ದಾಳಿಯಿಂದ ಗಡಿ ಪ್ರದೇಶ ಸಮೀಪವಿರುವ ಹಳ್ಳಿಗಳ ವಾಸಿಗಳು ಭೀತಿಗೊಂಡಿದ್ದಾರೆ. ಶೆಲ್ ದಾಳಿಗಳಿಂದ ತಪ್ಪಿಸಲು ಅನೇಕ ಸ್ಥಳೀಯರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ತೆರಳಿದ್ದಾರೆ.