ಪಾದಯಾತ್ರಿ ದತ್ತಾತ್ರೇಯ
ಚಿಮ್ಮಡ; ಗ್ರಾಮದಿಂದ ದೇವರ ನಿಂಬರಗಿ ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ತೆರಳಿದ ಯುವಕ ಕ್ಷೇತ್ರ ತಲುಪುವ ಮುನ್ನವೇ ರಸ್ತೆ ಅಪಘಾತದಲ್ಲಿ ಬಲಿಯಾದ ವೃದಯವಿದ್ರಾವಕ ಘಟಣೆ ಸೋಮವಾರ ರಾತ್ರಿ ನಡೆದಿದೆ.
ಖಾಸಗೀ ವೈದ್ಯರಾಗಿರುವ ತಂದೆ ಕೃಷ್ಣಾ, ಸರಕಾರಿ ಶಿಕ್ಷಕಿಯಾಗಿರುವ ತಾಯಿ ಸುನಿತಾ ದಂಪತಿಗಳ ಏಕೈಕ ಪುತ್ರನಾಗಿರುವ ದತ್ತಾತ್ರೇಯ ಯರಗಟ್ಟಿರ (31) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮಂಗಳವಾರ ಸ್ವಗ್ರಾಮದಲ್ಲಿ ನಡೆದ ಮೃತನ ಅಂತ್ಯಕ್ರಿಯೇಯಲ್ಲಿ ಸಾವಿರಾರು ಜನ ಪಾಲ್ಗೊಂಡು ಅಂತಿಮ ನಮಣ ಸಲ್ಲಿಸಿದರು. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.