ರಾಣೇಬೆನ್ನೂರ 02 : ಗ್ರಾಮಸ್ಥರು ಕಳೆದ 30 ವರ್ಷಗಳಿಂದ ಪಾದಯಾತ್ರೆಯನ್ನು ಕೈಗೊಂಡಿದ್ದು, ವಿವಿಧ ವಸ್ತ್ರಲಂಕಾರದಿಂದ ವಿವಿಧ ರೀತಿಯ ಬೇಡಿಕೆಗಳೊಂದಿಗೆ ಪಾದಯಾತ್ರೆ ಮಾಡುತ್ತಾ ಬಂದಿದ್ದಾರೆ. ಈ ವರ್ಷವೂ ಸಹಾ ರೈತರ ಶಾಲನ್ನು ಧರಿಸಿ ಪಾದಯಾತ್ರೆಯನ್ನು ಹುಲಿಕಟ್ಟಿ ಮಾರ್ಗವಾಗಿ ಸಂಚರಿಸಲಾಯಿತು. ಪಾದಯಾತ್ರೆಯ ರೈತರಾದ ಕರಬಸಪ್ಪ ಬಣಕಾರ ಮಾತನಾಡಿ ಹುಲಿಕಟ್ಟಿ ಮಾರ್ಗವಾಗಿ ಸಂಚರಿಸುವಾಗ ಗ್ರಾಮಸ್ಥರಿಂದ ಕೊಡುವ ತಂಪು ಪಾನೀಯ ಸ್ವೀಕರಿಸಿ 30 ವರ್ಷದಿಂದ ಪಾದಯಾತ್ರೆಯಲ್ಲಿ ಸಂಚರಿಸುತ್ತಿದ್ದೇವೆ.
ಈ ವರ್ಷ ನಾವು ರೈತರ ಶಾಲು ಧರಿಸಿ ನಾಡಿನ ಸಮಸ್ತ ರೈತರು,ದೇಶಕ್ಕೆ ಅನ್ನ ಹಾಕುವ ರೈತ ದೇಶದ ಬೆನ್ನೆಲುಬು ಹಾಗಿರುವ ರೈತರಿಗೆ ಒಳ್ಳೆಯ ಬೆಳೆ ಬೆಳೆಯಲಿ ಮಳೆ ನಾಡಿನಾದ್ಯಂತ ಸಮೃದ್ಧಿಯಾಗಿ ಬೆಳೆ ಬರಲಿ, ರೈತರು ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ರೈತರ ಮಕ್ಕಳಿಗೆ ಕನ್ಯಾ ಸಿಗುತ್ತಿಲ್ಲ ರೈತರ ಮಕ್ಕಳಿಗೆ ಕನ್ಯಾ ಸಿಗಲಿ ನಾಡಿನ ಸಮಸ್ತ ಬಸವೇಶ್ವರ ಸ್ವಾಮೀಯ ಭಕ್ತಾದಿಗಳಿಗೆ ಒಳ್ಳೆಯೇದಾಗಲಿ ಎಂದು ಶ್ರೀ ಬಸವೇಶ್ವರ ಸ್ವಾಮೀಯ ಹತ್ತಿರ ಬೇಡಿಕೊಳ್ಳುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಪುಟ್ಟಪ್ಪ ತೆರೆದಹಳ್ಳಿ ಮಾತನಾಡಿ ಪ್ರತಿ ವರ್ಷ ನಾವು ಒದೊಂದು ಕೋರಿಕೇಯಂತೆ ಪಾದಯಾತ್ರೆ ಮಾಡುತ್ತೇವೆ ಈ ವರ್ಷವೂ ಕೂಡಾ ನಾಡಿನ ರೈತರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತೇವೆ ನಾಡಿನ ರೈತರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತ್ತಾಗಿದೆ ಎಲ್ಲಾ ರೈತರ ಹೊಲದಲ್ಲಿ ಒಳ್ಳೆಯ ಬೆಳೆ ಬೆಳೆಯಲಿ ರೈತರು ಸಮೃದ್ಧಿ ಇಂದ ಇರಲಿ ಎಂದು ಬೇಡಿಕೊಳ್ಳುತ್ತೇವೆ ಎಂದು ತಿಳಿಸಿದರು ಕೊಟ್ರೇಶ ಮಂಜಪ್ಪ ಬಣಕಾರ ಮಾತನಾಡಿ ಪಾದ ಯಾತ್ರೆಯಲ್ಲಿ ನಾವು ಪ್ರತಿ ವರ್ಷವೂ 40 ರಿಂದ 50 ಜನ ಪಾದ ಯಾತ್ರೆ ಮಾಡುತ್ತೇವೆ ಪ್ರತಿ ಗ್ರಾಮದಲ್ಲಿ ನಮಗೆ ಪಾದ ಯಾತ್ರೆ ಮಾಡುತ್ತಿರುವ ಎಲ್ಲಾ ಭಕ್ತದಿಗಳಿಗೂ ತಮ್ಮ ಕೈಲಾದ ಫಲ ಪುಷ್ಪ ಊಟ ಪುಪಚಾರ ಕೊಟ್ಟು ಪಾದಯಾತ್ರೆ ಮಾಡುವವರಿಗೆ ಮನ ಸಂತೋಷ ಪಡಿಸುತ್ತಾರೆ ನಮ್ಮನ್ನು ಮುಂದೆ ಪಾದಯಾತ್ರೆ ಮಾಡಲು ಬೀಳ್ಕೊಡುತ್ತಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸ್ವಾಕರ ವೇ ತಾಲೂಕ ಅಧ್ಯಕ್ಷ ಚಂದ್ರ್ಪ ಬಣಕಾರ, ಹನುಮಂತಗೌಡ ಗೌಡ್ರು, ಮಂಜಪ್ಪ ಗೌಡ್ರು, ಕಿರಣ್ ಬಣಕಾರ, ಮಲ್ಲನಗೌಡ ಗೌಡ್ರು, ಶಶಾಂಕ್ ಮೆಗಳಗೇರಿ, ಮಲ್ಲಿಕ ಬಣಕಾರ,ಕೊಟ್ರೇಶ್ ಬಣಕಾರ, ರಮೇಶ ಬಣಕಾರ,ರುದ್ರಗೌಡ ಉಜ್ಜನಗೌಡ್ರು, ರೇವಣಸಿದ್ಧಪ್ಪ ಉಜ್ಜನಗೌಡ್ರು,ತರುಣ್ ಗೌಡ್ರು,ಪ್ರವೀಣ್ ಬಣಕಾರ, ಶಂಭು ಹಿರೇಮಠ,ವಿರೇಶ್ ಹುಲಿಕಟ್ಟಿ,ಮಲ್ಲೇಶ್ ಬಣಕಾರ,ಹಾಲೇಶ್ ಗೌಡ್ರು,ಜಗದೀಶ್ ಬಣಕಾರ, ಸಂಜಯ್ ಬಣಕಾರ, ರಮೇಶ ತೆರೆದಹಳ್ಳಿ,ಸಿದ್ದನಗೌಡ ಗೌಡ್ರು,ಬಸನಗೌಡ ಗೌಡ್ರು, ದರ್ಶನ್ ಬಣಕಾರ, ಶಂಭುಲಿಂಗ ಮೆಗಳಗೇರಿ, ಬಸವರಾಜ ಬಣಕಾರ, ಸೇರಿದಂತೆ ಹುಲಿಕಟ್ಟಿ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.