ಉದ್ಯೋಗ ಖಾತ್ರಿಯಡಿ ಪ್ಯಾಕೇಜ್ ಮಾದರಿ ಕಾಮಗಾರಿ

ಹಾವೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ ಮಾದರಿಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ   ಗ್ರಾಮ ಪಂಚಾಯತ್ಗಳಿಗೆ ತಾಲೂಕ ಪಂಚಾಯತಿಯ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ಗಿರೀಶ ಎಸ್.ಬೆನ್ನೂರ ಅವರು ಹೇಳಿದರು.

 ಆಲದಕಟ್ಟಿ  ಗ್ರಾಮ ಪಂಚಾಯತಿಯ  ಆಲದಕಟ್ಟಿ  ಗ್ರಾಮದಲ್ಲಿ ಆಯೋಜಿಸಿದ 2019-20 ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತಾರೆ. ಪ್ರತಿ ಕುಟುಂಬಕ್ಕೆ ಒಂದು ಆಥರ್ಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವಂತೆ ಸಲಹೆ ನೀಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸಬೇಕು. ಗ್ರಾಮೀಣ ಬಡವರ ಜೀವನೋಪಾಯದ ಮಟ್ಟವನ್ನು ಸುಧಾರಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

 ರೋಜಗಾರ ದಿವಸವನ್ನು ಒಂದು ತಿಂಗಳಲ್ಲಿ ಕನಿಷ್ಠ ಒಂದು ಬಾರಿ ವಾರ್ಡ ಮಟ್ಟದಲ್ಲಿ ಆಯೋಜಿಸಬೇಕು. ಹಂತವಾರು ಪ್ರಗತಿಯಲ್ಲಿರುವ ವಿವಿಧ ವಸತಿ ಯೋಜನೆ ಅಡಿ ನಿಮರ್ಾಣ ಹಂತದಲ್ಲಿರುವ  ಕಾಮಗಾರಿಗಳಿಗೆ ಪ್ರತಿಯೊಬ್ಬ ಫಲಾನುಭವಿಗೆ 90 ಮಾನವ ದಿನಗಳ ಮೊತ್ತವನ್ನು ಸಂಬದ ಪಟ್ಟ ಫಲಾನುಭವಿಗೆ ಪಾವತಿಸುವಂತೆ ಹೇಳಿದರು.

 ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ  ತೋಟಗಾರಿಕೆ (ತೆಂಗು, ಗೇರು (ಗೋಡಂಬಿ ಬೀಜ) ಮಾವು/ಸಪೋಟ, ದಾಳಿಂಬೆ, ಪೇರಲ, ಹುಣಸೆ, ನೇರಳೆ, ಸೀತಾಫಲ, ಬಾರೆ ಹಣ್ಣು, ನುಗ್ಗೆಕಾಯಿ, ನೆಲ್ಲಿ ಇನ್ನು ಹಲವಾರು ಬೆಳೆಗಳು), ರೇಷ್ಮೆ ಇಲಾಖೆಯ ಕಾಮಗಾರಿಗಳು,  ಅರಣ್ಯ ಇಲಾಖೆಯ ಕಾಮಗಾರಿಗಳು, ಕೃಷಿ ಅರಣ್ಯ ಕಾಮಗಾರಿಗಳು , ಕೃಷಿ ಹೊಂಡ, ಕಾಂಪೋಸ್ಟ್ ಪಿಟ್, ಪ್ಯಾಕೇಜ್ ಕಾಮಗಾರಿಗಳು, ಇಂಗು ಗುಂಡಿ, ಕೊಳುವೆ ಬಾವಿ ಮರಪೂರಣ ಘಟಕ,  ಭೂ ಅಭಿವೃದ್ಧಿ ದನದದೊಡ್ಡಿ, ಗ್ರಾಮೀಣ ಗೋದಾಮು, ಬೋಲ್ಡರ್ ಚೆಕ್ ಡ್ಯಾಂಗಳು,  ಕಲ್ಲು/ಕಾಂಕ್ರೀಟ್ ಚೆಕ್ ಡ್ಯಾಂ,  ಜಮೀನು ಸುತ್ತಲು ತೋಟಗಾರಿಕಾ ಸಸಿಗಳನ್ನು ನೆಡಬಹುದು.

 ಸಮುದಾಯ ಕಾಮಗಾರಿಗಳಾದ ಕೆರೆ ಹೂಳೆತ್ತುವುದು,  ಗೋ ಕಟ್ಟೆ ನಿರ್ಮಾಣ , ಹೊಸ ಕೆರೆ ನಿರ್ಮಾಣ, ನೆರೆಹಾವಳಿ ತಡೆಗಟ್ಟುವಿಕೆ ಕಾಮಗಾರಿಗಳು, ಮಣ್ಣುಗಾಲುವೆ ನಿರ್ಮಾಣ, ಮಲ್ಟಿ ಆರ್ಚ ಚೆಕ್ ಡ್ಯಾಂ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ,   ಎಸ್.ಹೆಚ್.ಜಿ ಭವನ , ಸರ್ಕಾರಿ  ಶಾಲೆಗಳ ಆಟದ ಮೈದಾನ ಅಭಿವೃದ್ದಿ, ಸರ್ಕಾರಿ ಶಾಲೆಗಳಿಗೆ ಕಂಪೌಂಡ್ ನಿರ್ಮಾಣ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಅಂಗನವಾಡಿ ಕಟ್ಟಡಗಳು, ಸರ್ಕಾರ ದಿಂದ ಆಯ್ದ ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಸಮುದಾಯ ದನದ ದೊಡ್ಡಿ ನಿರ್ಮಾಣ,  ರೈತರ ಒಕ್ಕಣಿ ಕಣ,  ಜಾಗದ ಲಭ್ಯತೆ ಇರುವ ಸರ್ಕಾರಿ ಶಾಲೆಯಲ್ಲಿ ಕೈತೋಟ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುಬಹುದಾಗಿದೆ ಎಂದು ಹೇಳಿದರು.

 ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಇಲಾಖೆಯವರು, ಕೂಲಿ ಕಾಮರ್ಿಕರು, ಆಶಾ ಕಾರ್ಯಕತರ್ೆಯರು ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಭಾಗವಹಿಸಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸವಿತಾ ಯರೇಶಿಮಿ ಕಾರ್ಯಕ್ರಮ ನಡೆಸಿಕೊಟ್ಟರು.