ಉತ್ತಮ ನಡುವಳಿಕೆ ಕಲಿಸುವುದೇ ಶಿಕ್ಷಣ: ನಾರನಗೌಡ ಉತ್ತಂಗಿ
PUC students welcome program
ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ಮಹಾಲಿಂಗಪುರ 27: ಬರೀ ರಾ್ಯಂಕ್ ಗಳಿಸುವುದೊಂದೇ ಶಿಕ್ಷಣವಲ್ಲ, ನಮ್ಮ ಸಂಸ್ಕಾರ ನಡುವಳಿಕೆಗಳನ್ನು ಉತ್ತಮ ಗೊಳಸಿಕೊಳ್ಳುವುದು ನಿಜವಾದ ಶಿಕ್ಷಣದ ಧ್ಯೇಯವೆಂದು ಸಾಹಿತಿ, ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು.
ಗ್ರಾಮದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯೂಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆೆ, ಸಾಂಸ್ಕ್ರತಿಕ ಚಟುವಟಿಕೆಗಳ ಉದ್ಘಾಟಣಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದ ಅವರು ಸಧ್ರಡ ದೇಹದಲ್ಲಿ ಸಧ್ರಡ ಮನಸ್ಸಿರುತ್ತದೆ, ಪ್ರತಿಯೊಂದು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು, ಓದುವ ಸಮಯದಲ್ಲಿ ತಮ್ಮ ಗಮನವನ್ನು ಬೇರೆಡೆ ತಿರುಗಿಸದೆ ನೇರ ಗುರಿಯೊಂದಿಗೆ ಸತತ ಅಧ್ಯಯನ ಮಾಡಿದಲ್ಲಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂದರು.
ಉಪನ್ಯಾಸಕರಾದ ಎ.ಬಿ. ಗೌಡಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರಮ ಪಟ್ಟರೆ ಮಾತ್ರ ಆತ್ಮವಿಶಾಸ ಬರುತ್ತದೆ, ಆತ್ಮವಿಶ್ವಾಸ ಉನ್ನತಿ ನೀಡುತ್ತದೆ, ಒಳ್ಳೆಯ ನಡುವಳಿಕೆಯಿಂದ ತಂದೆ ತಾಯಿಯರಿಗೆ ವಿಧೇಯರಾಗಿ ಸತತ ಅದ್ಯಯನ ಮಾಡಿದಲ್ಲಿ ಒಳ್ಳೆಯ ಫಲ ದೊರೆಯಲಿದೆ ಮಕ್ಕಳ ಸರ್ವತೋಮುಖ ಅಭಿವೃದ್ದಿಯೇ ಶಿಕ್ಷಣದ ಮೂಲ ಉದ್ದೇಶ ಎಂದರು.
ಅಭಿವೃದ್ದಿ ಸಮಿತಿಯ ಪ್ರಭು ನೇಸೂರ, ಕಾಳಪ್ಪ ಬಡಿಗೇರ ಮಾತನಾಡಿದರು.
ವಿದ್ಯಾಲಯದ ಪ್ರಾಚಾರ್ಯೆ ಸವಿತಾ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ದಿ ಸಮೀತಿಯ ಅಧ್ಯಕ್ಷ ಬಸವರಾಜ ಕುಂಚನೂರ, ಉಪಾಧ್ಯಕ್ಷ ಅವ್ವನಪ್ಪಾ ಮುಗಳಖೋಡ, ಬೀರಾ್ಪ ಹಳೆಮನಿ, ರಾಚಯ್ಯ ಮಠಪತಿ, ಶಂಕರ ಬ. ಪಾಟೀಲ, ಪತ್ರಕರ್ತ ಇಲಾಹಿ ಜಮಖಂಡಿ, ಗಟಿಗೆಪ್ಪ ಜಾಂಗನೂರ, ಲಕ್ಕಪ್ಪ ದೊಡಮನಿ, ಉಪನ್ಯಾಸಕ ಬಿ.ಬಿ.ಕುದರಿಮನಿ, ಆರ್.ಎಂ. ಬಿರಾದರ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜು ಸಂಸತ್ತಿಗೆ ಆಯ್ಕೆಯಾದ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.
ಉಪನ್ಯಾಸಕ ಪ್ರವೀಣ ಮೈತ್ರಿ ಸ್ವಾಗತಿಸಿದರು, ಡಾ. ಎಚ್.ಎಂ.ಕುಂಬಾರ ನಿರೂಪಿಸಿದರು, ಪಿ.ಪಿ. ವಸ್ತ್ರದ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 