ವಿದ್ಯಾಥರ್ಿಗಳಿಗೆ ಪಿಯುಸಿ ಹಂತವು ಭವಿಷ್ಯವನ್ನು ನಿರ್ಧರಿಸುತ್ತದೆ :ಚನ್ನಬಸಪ್ಪಾ

ಲೋಕದರ್ಶನ ವರದಿ

ಬೆಳಗಾವಿ, 13: ನಗರದ    "ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ ಪದವಿ-ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ"  ದಲ್ಲಿ ದಿನಾಂಕ  12ರಂದು "2018-19 ನೇ ಸಾಲಿನ ವಾಷರ್ಿಕ ದಿನಾಚರಣೆ ಮತ್ತು ಪಾರಿತೋಷಕ ವಿತರಣಾ ಸಮಾರಂಭವು " ಜರುಗಿತು. 

   ಸಮಾರಂಭಕ್ಕೆ  ಮುಖ್ಯ ಅತಿಥಿಗಳಾಗಿ ಚನ್ನಬಸ್ಸಪ್ಪಾ ವಿ. ಕೊಡ್ಲಿ ಜಂಟಿ ನಿದರ್ೇಶಕರು, ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ, ವಿಜಯಪುರ ಅವರು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾಥರ್ಿಗಳಿಗೆ ಪಿಯುಸಿ ಹಂತವು ಭವಿಷ್ಯವನ್ನು ನಿರ್ಧರಿಸುವ, ಬದುಕನ್ನು ಕಟ್ಟಿಕೊಳ್ಳುವ ಸುವರ್ಣ ಅವಕಾಶ. ನಿಮ್ಮಲ್ಲಿರುವ ವಿಶ್ವಾಸ ಮತ್ತು ಶ್ರಮ ನಿಮ್ಮ ಕನಸನ್ನು ನನಸಾಗಿಸುತ್ತದೆ. 

ಸತತ ಪ್ರಯತ್ನದಿಂದಲೇ ಯಶಸ್ಸು ಸಿಗುವುದು ಹೊರತು ಪ್ರತಿಭೆ ಮತ್ತು ಅದೃಷ್ಟವನ್ನೆ ಅವಲಂಬಿಸಿ ಇರಲಾಗದು. ವಿದ್ಯಾಥರ್ಿಗಳು ವಿದ್ಯಾಥರ್ಿ ಜೀವನದಲ್ಲಿ ಬುದ್ದಿ ಸಾಮಥ್ರ್ಯವನ್ನು ಸಂವರ್ಧನೆ ಮಾಡಿಕೊಳ್ಳಬೇಕು. ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಉತ್ತಮ ಭವಿಷ್ಯ ನಿಮರ್ಾಣವಾಗುತ್ತದೆ. ಎಂದು ಕರೆ ನೀಡಿದರು. ಮುಂದುವರೆದು ಮಾತನಾಡುತ್ತಾ, ನಾಯ್ಕರ್ ಶಿಕ್ಷಣ ಸಂಸ್ಥೆಯು ಶೈಕ್ಷಣಿಕವಾಗಿ ಸಾಂಸ್ಕ್ರತಿಕವಾಗಿ ಸರ್ವತೋಮುಖ ಬೆಳವಣಿಗೆ ಹೊಂದುತ್ತಿರುವುದು ಅಭಿಮಾನದ ಸಂಗತಿ. ಮತ್ತು ಈ ಸಂಸ್ಥೆಯು ಬರಲಿರುವ ದಿನಗಳಲ್ಲಿ ಒಂದು ಅತ್ಯುತ್ತಮ ಸಂಸ್ಥೆಯಾಗಲೆಂದು ಶುಭ ಹಾರೈಸಿದರು.   

  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರವೀಂದ್ರನಾಥ ಠಾಗೋರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ  ಡಾ.ಸಿ.ಎನ್.ನಾಯ್ಕರ ಅವರು ಮಾತನಾಡುತ್ತಾ, ಉತ್ತಮ ಪಾಲಕರು ಮತ್ತು ಶಿಕ್ಷಕರಿಂದ  ವಿದ್ಯಾಥರ್ಿಗಳ ಭವಿಷ್ಯ ನಿಮರ್ಾಣವಾಗುತ್ತದೆ. ವಿದ್ಯಾಥರ್ಿಗಳು ಭವಿಷ್ಯದ ಗುರಿ, ಧ್ಯೇಯೋದ್ದೇಶಗಳನ್ನು ತಲುಪಲು ಸಮಸ್ಯೆಗಳ ಬಂದರೆ ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ವಿದ್ಯಾಥರ್ಿಗಳು ಜೀವನದಲ್ಲಿ ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಒಂದು ಒಳ್ಳೆಯ ಪರಿಸರವನ್ನು ನಿಮರ್ಾಣ ಮಾಡುವಲ್ಲಿ ನಮ್ಮ ಉಪನ್ಯಾಸ ವೃಂದ ಯಾವತ್ತು ಸ್ಪಧರ್ಾತ್ಮಕ ವಿಚಾರಗಳನ್ನು ಅಳವಡಿಸಿಕೊಂಡು ಸಂಸ್ಥೆಯು ಅತ್ಯುನ್ನತ ಗುರಿ ಧ್ಯೇಯೋದ್ದೇಶಗಳನ್ನು ಗುರಿ ತಲುಪಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ನುಡಿದರು.

        ಕಾರ್ಯಕ್ರಮದ ವೇದಿಕೆಯ ಮೇಲೆ ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ.ಶ್ವೇತಾ ಸಿ. ನಾಯ್ಕರ ಹಾಗೂ ಗುಡ್ ಶೆಪರ್ಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಎಮ್.ಎಮ್. ಮುಲ್ತಾನಿ  ಅವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸುಧಾ ಅಂಗಡಿ ಸ್ವಾಗತಿಸಿದರು. ಉಮೇಶ ಸುಲ್ತಾನಪುರಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಗುಡ್ ಶೆಪರ್ಡ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಮ್.ಎಮ್. ಮುಲ್ತಾನಿ ವರದಿ ವಾಚನ ಮಾಡಿದರು. ಶ್ರೀಮತಿ.ಸುಪ್ರಿಯಾ ಸಿದ್ನಾಳ ವಂದಿಸಿದರು. ದೀಪಾ ಕಾರ್ಯಕ್ರಮ ನಿರೂಪಿಸಿದರು.

2018-19 ನೇ ಸಾಲಿನ ಅತ್ಯುತ್ತಮ ವಿದ್ಯಾಥರ್ಿ ಎಂದು ಕುಮಾರ. ಯಶ ಗೋಧೆ ಮತ್ತು ಅತ್ಯುತ್ತಮ ವಿದ್ಯಾಥರ್ಿನಿ ಎಂದು ಕುಮಾರಿ. ಸಹನಾ ಕೊಚ್ಚರಗಿ ಅವರನ್ನು ಘೋಷಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾ ವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.