600ಕ್ಕೆ 594 ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳು
ಬಾಗಲಕೋಟೆ: ಪ್ರಸಕ್ತ 2025 ಮಾರ್ಚನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು 600 ಅಂಕಗಳಿಗೆ 594 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಪಿ.ಬಿ.ಜೇವೂರ ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಜಮಖಂಡಿಯ ತುಂಗಳ ಎಸ್.ಸಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಭೂಮಿಕಾ ಶಿವಕುಮಾರ ಬಾಗೇವಾಡಿ, ಬಾಗಲಕೋಟೆಯ ವಿಶ್ವಚೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕಲಾವತಿ ಬಸನಗೌಡರ ಸುರಖೋಡ 600 ಅಂಕಗಳಿಗೆ 594 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, ಜಮಖಂಡಿಯ ತುಂಗಳ ಎಸ್.ಸಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಂಗಪ್ಪ ಉಪ್ಪಾರ, ತೊದಲಬಾಗಿಯ ಮಲ್ಲಿಕಾರ್ಜುನ ಪಿಯು ಕಾಲೇಜಿನ ವಿದ್ಯಾರ್ಥಿ ಮಧುಶ್ರೀ ಹನಮಂತ ಶೆಟ್ಟೇನ್ನವರ 600ಕ್ಕೆ 593 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜಮಖಂಡಿಯ ಸಾಯಿನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿ ವಿಕ್ರಮ ಸಿದ್ದಪ್ಪ ಹೆರಕಲ್ಲ 600ಕ್ಕೆ 592 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.