ಇಂಡಿ 12: ಸಿವಿ ರಾಮನ್ ಪಿಯು ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆ ಎದುರಿಸುವುದು ಹೇಗೆ ಎಂಬದು ಕುರಿತು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಗಣಿತ್ ಎಂದರೆ ಭಯ ಬೀಡುವಿನ ಕಾಲದಲ್ಲಿ ಹೇಗೆ ಪರೀಕ್ಷೆಯನ್ನು ಎದುರಿಸಬೇಕು ಪರೀಕ್ಷೆಗೆ ಹೇಗೆಲ್ಲ ತಯಾರಿಗಳನ್ನು ಮಾಡಬೇಕು ಎಂಬುವುದರ ಕುರಿತು ಗಣಿತ ಉಪನ್ಯಾಸಕರಾದ ಶಂಕರ್ ಕುಂಬಾರ್ ಉಪನ್ಯಾಸ ಮಾಡಿದರು. ತಮ್ಮ ಕಾರ್ಯಗಾರ ಉದ್ದಕ್ಕೂ ಮಕ್ಕಳಿಗೆ ಪಿಯುಸಿ ವಿಜ್ಞಾನ ಗಣಿತ ವಿಷಯದಲಿ ಹೇಗೆ ನೂರಕ್ಕೆ ನೂರು ಅಂಕಗಳನ್ನು ಪಡೆಯಬೇಕು ಯಾವ ಸೂತ್ರಗಳನ್ನು ನಾವು ಹೆಚ್ಚಾಗಿ ಮನದಟ್ಟಣೆ ಮಾಡಿಕೊಳ್ಳಬೇಕು. ಹೇಗೆಲ್ಲಾ ಪ್ರಶ್ನೆಗಳನ್ನ ಬಿಡಿಸಬೇಕು ಎನ್ನುವುದರ ಕುರಿತು ಸವಿಸ್ತರವಾಗಿ ಹೇಳಿದರು.
ಈ ಕಾರ್ಯಕ್ರಮವನ್ನು ಆಯೋಸಿದ್ದಕ್ಕಾಗಿ ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ ಅವರಿಗೆ ವಿದ್ಯಾರ್ಥಿಗಳಾದ ಮಂಜುನಾಥ ಬಬಲಗಾವ, ಸಮರ್ಥ್ ಬಿರಾದಾರ ಮತ್ತು ತೇಜಸ್ವಿನಿ ಗೋಳ್ಳಗಿ, ಪೂಜಾ ಜಾದವ್ ಕಾರ್ಯಗಾರದ ನಂತರ ತಮ್ಮ ಅನಿಸಿಕೆಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿ ತುಂಬು ಹೃದಯದ ಧನ್ಯವಾದಗಳು ಹಿಂತ ಕಾರ್ಯಗಾರಗಳಿಂದ ನಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ ಕಾಮಗೊಂಡ, ವರ್ಧಮಾನ ಮಹಾವೀರ್, ಶೈಲೇಶ್ ಬೀಳಗಿ, ಸನ್ನತಿ ಹಳ್ಳಿ, ಪ್ರಸನ್ನಕುಮಾರ್ ನಾಡಗೌಡ, ಡಾಕ್ಟರ್ ಸೋಮಶೇಖರ್ ಹುದ್ದಾರಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳಲ್ಲಿ ಈ ಕಾರ್ಯಕ್ರಮದಿಂದ ಹೇಗೆ ದ್ವಿತೀಯ ಪಿಯುಸಿ ಎದುರಿಸಬೇಕು ಅನ್ನುವ ಆತ್ಮವಿಶ್ವಾಸ ಬಲ ಛಲ ಹೆಚ್ಚಾಗುತ್ತದೆ ಎಂದು ಆಡಳಿತ ಮಂಡಳಿಯವರೆಲ್ಲರೂ ತಿಳಿಸಿದರು.