ಲೋಕದರ್ಶನ ವರದಿ
ಬೆಳಗಾವಿ, 13: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ 2018-19ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾಥರ್ಿಗಳಿಗೆ ಬೀಳ್ಕೊಡುವ ಮತ್ತು ಪಾರಿತೋಷಕ ವಿತರಣಾ ಸಮಾರಂಭವು ದಿ.12 ರಂದು ಜರುಗಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ನಿಯತಿ ಫೌಂಡೇಶನದ ಕಾರ್ಯಾಧ್ಯಕ್ಷರಾದ ಡಾ. ಸೋನಾಲಿ ಸರನೋಬತ ಅವರು ಮಾತನಾಡುತ್ತಾ, ವಿದ್ಯಾಥರ್ಿಗಳು ಕಠಿಣಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಬೇಕು. ನಿಯಮಿತ ಶಿಕ್ಷಣದ ಜೊತೆಗೆ ಮೃದು ಕೌಶಲ್ಯಗಳನ್ನು ಗಳಿಸಬೇಕು, ವೈವಿಧ್ಯಮಯ ಸಾಮಥ್ರ್ಯಹೊಂದಬೇಕು. ವಿದ್ಯಾಥರ್ಿಗಳು ಸಮಯಬದ್ಧ, ನಿಯಮಬದ್ಧ ಹಾಗೂ ಯೋಜನಾ ಬದ್ಧವಾಗಿ ಮಾಹಿತಿ ತಂತ್ರಜ್ಞಾನ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಖಚಿತತೆಹೊಂದಿರಬೇಕು, ಶಿಕ್ಷಕ-ಪಾಲಕರಿಗೆ ಗೌರವ ನೀಡಬೇಕು, ವಿವೇಕ ಮತ್ತು ಜ್ಞಾನದಿಂದ ಅಧ್ಯಯನಗೈದು ಧೆಯೋದ್ದೇಶಗಳನ್ನು, ಗುರಿಗಳನ್ನು ತಲುಪಬೇಕು. ದೃಢ ನಿಶ್ಚಯದಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ದೂರ ದೃಷ್ಟಿಯಿಂದ ಸಾಧನೆಗೈಯಬೇಕು ಎಂದು ವಿದ್ಯಾಥರ್ಿಗಳಿಗೆ ಕರೆನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಮಾತನಾಡುತ್ತಾ, ಜೀವನಕ್ಕೆ ಶಿಕ್ಷಣ ಅತ್ಯಾವಶ್ಯಕ, ವಿದ್ಯಾಥರ್ಿಗಳು ಜೀವನದಲ್ಲಿ ಸನ್ನಢತೆಗಳನ್ನು ರೂಢಿಸಿಕೊಂಡು ಭವಿಷ್ಯರೂಪಿಸಿಕೊಳ್ಳಬೇಕು. ವಿದ್ಯಾಥರ್ಿಗಳು ಜೀವನದಲ್ಲಿ ಗೌರವಕೊಡುವ, ಸ್ವೀಕರಣ ಮನೋಭಾವನೆ ಮತ್ತು ಗೌರವಕ್ಕೆ ಪ್ರಾಧಾನ್ಯತೆ ನೀಡುವ ಗುಣಗಳನ್ನು ಹೊಂದಿ ಜೀವನದ ಸಾರ್ಥಕತೆ ಪಡೆಯಬೇಕು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಎಲ್.ವ್ಹಿ. ದೇಸಾಯಿ ಅವರು ಮಾತನಾಡುತ್ತಾ, ವಿದ್ಯಾಥರ್ಿಗಳು ಭವಿಷ್ಯಕ್ಕಾಗಿ ವಿವಿಧ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಬೇಕು. ಮಾಹಿತಿ ತಂತ್ರಜ್ಞಾನ ಶಿಕ್ಷಣ ಇಂದು ಜಾಗತಿಕ ಶಿಕ್ಷಣವಾಗುತ್ತಿದೆ. ಐಟಿ ಶಿಕ್ಷಣದಲ್ಲಿ ವಿವಿಧ ಅವಕಾಶಗಳು ಸೃಷ್ಟಿಯಾಗುತ್ತಿವೆ, ಕೃಷಿ ಹಾಗೂ ಹೈನುಗಾರಿಕೆ ಮೂಲಕ ಸಾಧನೆ ಮಾಡಬೇಕು. ಗುರುವಿನ ಮಾರ್ಗದರ್ಶನದಲ್ಲಿ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಪ್ರಾರಂಭದಲ್ಲಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಜಿ. ನಂಜಪ್ಪನವರ ಅವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ. ಸೌಮ್ಯಾ ಬೈಲಕೇರಿ ಮತ್ತು ಅನು ಕೆಂಪಣ್ಣವರ ಸ್ವಾಗತಗೀತೆ ಹಾಡಿದರು. ಆರ್.ಬಿ. ಯರಗಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಷರ್ಾ ಭದ್ರಿ ವಂದಿಸಿದರು. ಕುಮಾರಿ. ಚಾರುಶೀಲಾ, ಕುಮಾರಿ. ಅಮೀನಾ ಮತ್ತು ಕುಮಾರ. ಪ್ರದ್ಯುಮ್ನ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ. ಭೂಮಿಕಾ ಕಡಬಿ, ಕುಮಾರ. ದರ್ಶನ ಎಲ್, ಹಾಗೂ ಕುಮಾರಿ. ಪ್ರಾಪ್ತಿ ಪಾಟೀಲ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಮ್.ಎಮ್. ಕುಂಬಾರ ಸಾಂಸ್ಕೃತಿಕ, ವಿಜ್ಞಾನ, ಪರಿಸರ ಸಂಘಗಳ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ಜಿ.ವ್ಹಿ. ಮಠದ ಕ್ರೀಡಾ ಚುಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸುಸಂದರ್ಭದಲ್ಲಿ 2018-19ನೇ ಸಾಲಿನ "ಆದರ್ಶ ವಿದ್ಯಾಥರ್ಿನಿ" ಎಂದು ಕುಮಾರಿ ಭೂಮಿಕಾ ಕಡಬಿ ಮತ್ತು "ಆದರ್ಶ ವಿದ್ಯಾಥರ್ಿ ಎಂದು ಕುಮಾರ. ನಿಶಾಂತ ಹಲಗತ್ತಿ ಅವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮಹಾ ವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾಥರ್ಿವೃಂದದವರು ಉಪಸ್ಥಿತರಿದ್ದರು.