ಇರಾನ್ ನಲ್ಲಿ ಸಿಲುಕಿರುವ ಭಾರತೀಯರ ವಾಪಸ್ಸು ಕರೆತರುವ ಪ್ರಕ್ರಿಯೆ ಆರಂಭ; ಸಚಿವ ಜೈಶಂಕರ

ನವದೆಹಲಿ, ಮಾ ೯, ಇರಾನ್ನಲ್ಲಿ ಸಿಲುಕಿರುವ ಭಾರತೀಯ ಯಾತ್ರಿಕರ ತಪಾಸಣೆ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಅವರನ್ನು ತಾಯ್ನಾಡಿಗೆ  ಮರಳಿ    ಕರೆತರಲು ಇರಾನ್  ಅಧಿಕಾರಿಗಳೊಂದಿಗೆ    ಕೈಗೊಳ್ಳಬೇಕಿರುವ  ಮುಂದಿನ ವ್ಯವಸ್ಥೆಗಳ ಬಗ್ಗೆ  ಚರ್ಚಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ  ಸಚಿವ ಡಾ.ಎಸ್.ಜೈಶಂಕರ್  ಹೇಳಿದ್ದಾರೆ. ಕರೋನಾ ವೈರಸ್   ಸೋಂಕಿನಿಂದ  ತೀವ್ರ   ತೊಂದರೆಗೊಳಗಾಗಿರುವ ದೇಶಗಳಲ್ಲಿ ಇರಾನ್ ಕೂಡ ಸೇರಿದ್ದು,  ಇರಾನ್ ನಲ್ಲಿರುವ  ಭಾರತೀಯ ಮೀನುಗಾರರ ಪೈಕಿ   ಯಾರೊಬ್ಬರಿಗೂ  ಕರೋನಾ ಸೋಂಕು ತಗುಲಿರುವ ಬಗ್ಗೆ  ವರದಿಯಾಗಿಲ್ಲ ಎಂದು ಡಾ.ಜೈಶಂಕರ್  ಸ್ಪಷ್ಟಪಡಿಸಿದ್ದಾರೆ.ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್,   ಕರೋನಾ ವೈರಸ್    ಹಿನ್ನೆಲೆಯಲ್ಲಿ ಇರಾನ್ನಲ್ಲಿ ಸಿಲುಕಿರುವ ಭಾರತೀಯರಿಗೆ ಸೂಕ್ತ ವೈದ್ಯಕೀಯ ನೆರವು ಮತ್ತು ಸಾಮಾನ್ಯ ನೆರವು ಖಾತರಿ ಪಡಿಸಬೇಕು  ಎಂದು  ಟ್ವೀಟ್ ನಲ್ಲಿ  ವಿದೇಶಾಂಗ ವ್ಯವಹಾರಗಳ ಸಚಿವರನ್ನು ಒತ್ತಾಯಿಸಿದ್ದರು. ಇದಕ್ಕೆ  ಪ್ರತಿಕ್ರಿಯಿಸಿರುವ   ಸಚಿವ ಜೈಶಂಕರ್,   ಇರಾನ್ನ  ಕೋಮ್ ನಲ್ಲಿ  ಸಿಲುಕಿರುವ ಭಾರತೀಯ ಯಾತ್ರಿಕರನ್ನು  ತಾಯ್ನಾಡಿಗೆ   ವಾಪಸ್ಸು ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಕರೋನಾ ವೈರಸ್ನಿಂದ  ಹೊಸದಾಗಿ  ೪೯ ಹೊಸದಾಗಿ ಮೃತಪಟ್ಟಿದ್ದಾರೆ ಎಂದು ಇರಾನ್  ಆರೋಗ್ಯ ಸಚಿವಾಲಯ  ನಿನ್ನೆ  ಹೇಳಿತ್ತು.