ಸದ್ಯದಲ್ಲೇ ‘ಭ್ರಮೆ’ ವಿಭಿನ್ನ ಮೋಷನ್ ಪೋಸ್ಟರ್ ಲಾಂಚ್

ಬೆಂಗಳೂರು, ಮಾ03, ಹನೀಷ್ ರಾಜ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಭ್ರಮೆ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಬೆಂಗಳೂರು, ಚಿಕ್ಕಮಗಳೂರು, ಮೂಡಿಗೆರೆ, ಉಡುಪಿ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಸದ್ಯದಲ್ಲೇ ವಿಭಿನ್ನ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ ಅಮೇರಿಕಾದ ವೈಟ್ಹೌಸ್ನಲ್ಲಿ ಅಧ್ಯಕ್ಷ ಟ್ರಂಪ್ ‘ಭ್ರಮೆ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದಂತೆ ಪೋಸ್ಟರ್ ನಲ್ಲಿ ತೋರಿಸಿರುವ ನಿರ್ದೇಶಕರು ಸಿನಿರಸಿಕರನ್ನು ‘ಭ್ರಮೆ‘ಯಲ್ಲಿ ತೇಲಿಸಿದ್ದಾರೆ. ಚರಣ್ರಾಜ್ ಈ ಚಿತ್ರದ ನಿರ್ದೇಶಕರು. ಈ ಹಿಂದೆ ನೆನಪಿರಲಿ ಪ್ರೇಂ ಅಭಿನಯದ ‘ಮಸ್ತ್ ಮಹೊಬ್ಬತ್‘ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ, ಚರಣ್ರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಡಾ ವಿ.ನಾಗೇಂದ್ರಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಹಾಗೂ ಸಿನಿಟೆಕ್ ಸೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸೈಕಲಾಜಿಕಲ್ ಸಸ್ಪೆನ್ಸ್ - ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಒಂದು ಹಾಡು ಹಾಗೂ ಒಂದು ಸಾಹಸ ಸನ್ನಿವೇಶವಿದೆ. ಚಾಮರಾಜ್ ಈ ಚಿತ್ರದ ನೃತ್ಯ ನಿರ್ದೇಶಕರು. ನವೀನ್ ರಘು, ಮಜಾ ಟಾಕೀಸ್ ಪವನ್, ಮುತ್ತುರಾಜ್ ಹಾಗೂ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೊನಲ್ಲಿ ಅಭಿನಯಿಸಿದ್ದ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.