‘ಪಾಪ್ಕಾರ್ನ್ ಮಂಕಿ ಟೈಗರ್’

ಬೆಂಗಳೂರು, ಫೆ 16  ಸ್ಟುಡಿಯೋ ೧೮ ಲಾಂಛನದಲ್ಲಿ ಸುಧೀರ್ ಕೆ ಎಂ ನಿರ್ಮಿಸಿರುವ, ದುನಿಯಾ ಸೂರಿ ನಿರ್ದೇಶನದ ‘ಪಾಪ್ಕಾರ್ನ್ ಮಂಕಿ ಟೈಗರ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 ಚರಣ್ರಾಜ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ  ಶೇಖರ್ ಎಸ್ ಛಾಯಾಗ್ರಹಣವಿದೆ  ದೀಪು ಎಸ್ ಕುಮಾರ್ ಸಂಕಲನ, ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ಮಲ್ಲ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಅಮೃತ್ ಭಾರ್ಗವ್ ಸಹ ನಿರ್ದೇಶನವಿದೆ    ಡಾಲಿ ಧನಂಜಯ್ ನಾಯಕ ನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ನಿವೇದಿತ, ಸುಧಿ, ನವೀನ್, ಮೋನಿಷ ನಾಡ್ಗಿರ್, ಸಪ್ತಮಿ ಗೌಡ, ಅಮೃತ ಅಯ್ಯಂಗಾರ್, ಪೂರ್ಣಚಂದ್ರ ಮುಂತಾದವರಿದ್ದಾರೆ.