ಚೆನ್ನೈ ಮಾ 12,ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ, ಸುಧಾರಣೆ ತರಲು ರಾಜಕೀಯಕ್ಕೆ ಬರುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಪ್ರಕಟಿದ್ದಾರೆ. ಶೀಘ್ರದಲ್ಲೇ ಹೊಸ ಪಕ್ಷದ ಹೆಸರು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಚೆನ್ನೈನ ಲೀಲಾಪ್ಯಾಲೇಸ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1996 ರಿಂದಲೂ ರಾಜಕೀಯದಲ್ಲಿ ನನ್ನ ಹೆಸರು ಕೇಳಿ ಬಂದಿತ್ತು.ತಮಿಳುನಾಡಿಗೆ ಏನಾದರೂ ಕೊಡುಗೆ , ಕಾಣಿಕೆ ನೀಡುವ ಆಸೆಯಿದೆ. ಸಮಾಜ, ಜನರ ಮನಸ್ಥಿತಿ ಬದಲಾಯಿಸುತ್ತೇನೆ ಎಂದು ಅವರು ದೃಢವಾಗಿ ಹೇಳಿದರು. ತಮಿಳುನಾಡಿನಲ್ಲಿ ಎರಡು ದೊಡ್ಡ ರಾಜಕೀಯ ಪಕ್ಷಗಳಿವೆ. ಇದೀಗ ಈ ಎರಡು ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ. ತಮಿಳುನಾಡು ರಾಜಕೀಯವನ್ನು ಹತ್ತಿರದಿಂದ ಕಂಡಿದ್ದೇನೆ. ಜನರ ನಿರೀಕ್ಷೆಯಂತೆ ರಾಜ್ಯದಲ್ಲಿ ಬದಲಾವಣೆ ಬಯಸಿ ರಾಜಕೀಯಕ್ಕೆ ಬರುತ್ತಿದ್ದೇನೆಯೇ ಹೊರತು ಸಿಎಂ ಆಗಿ ಮೆರೆಯಬೇಕು ಎಂಬ ಕಾರಣದಿಂದ ಅಲ್ಲ ಎಂದರು ನನ್ನ ಹೊಸ ಪಕ್ಷದಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.ನನಗೆ ಸಿಎಂ ಆಗುವ ಅಸೆ ಇಲ್ಲ, ನಾನು ಪಕ್ಷದ ಮುಖ್ಯಸ್ಥನಾಗಿರುತ್ತೇನೆ. ಸಿಎಂ ಹುದ್ದೆಗೆ ವಿದ್ಯಾವಂತನಾಗಿರಬೇಕು, ಯುವ, ಅನುಭವಿ ಆಡಳಿತಗಾರ ಬೇಕು . ಪಕ್ಷಕ್ಕೆ ಹಣವಂತರು ಬೇಡ, ಗುಣವಂತರು ಬೇಕು ಎಂದೂ ಎಂದು ನಟ ರಜನಿ ಒತ್ತಿ ಹೇಳಿದ್ದಾರೆ .