ನವದೆಹಲಿ 20: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಹಗರಣಕ್ಕೆ ಸಂಬಂಧಿಸಿದಂತೆ ಅಲಹಬಾದ್ ಬ್ಯಾಂಕ್ ಮಾಜಿ ವ್ಯವಸ್ಥಾಪಕ ನಿದರ್ೆಶಕಿ ಉಷಾ ಅನಂತಸುಬ್ರಹ್ಮಣ್ಯನ್ ಅವರಿಗೆ ಸಿಬಿಐ ಕೋಟರ್್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಉಷಾ ಅವರು ಸಲ್ಲಿಸಿದ್ದ ಅಜರ್ಿಯ ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋಟರ್್ ನ್ಯಾಯಾಧೀಶ ಜೆಸಿ ಜಗದಾಳೆ ಅವರು, 14 ಸಾವಿರ ಕೋಟಿ ರುಪಾಯಿ ಪಿಎನ್ ಬಿ ಹಗರಣದ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಉಷಾ ಅವರನ್ನು ಅಲಹಬಾದ್ ಬ್ಯಾಂಕ್ ಮತ್ತು ಪಿಎನ್ ಬಿಯ ವ್ಯವಸ್ಥಾಪಕ ನಿದರ್ೆಶಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆದರೆ ಬ್ಯಾಂಕ್ ಉದ್ಯೋಗಿಯಾಗಿ ಮುಂದುವರೆದಿದ್ದ ಉಷಾ ಅವರನ್ನು ಕೇಂದ್ರ ಸಕರ್ಾರ ಕಳೆದ ವಾರ ಸೇವೆಯಿಂದಲೇ ವಜಾಗೊಳಿಸಿತ್ತು.
ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದತೆ ಕಳೆದ ಮೇ ತಿಂಗಳಲ್ಲಿ ಸಿಬಿಐ ಸಲ್ಲಿಸಿದ್ದ ಚಾಜ್ಶರ್ಿಟ್ನಲ್ಲಿ, ವಜ್ರ ವ್ಯಾಪಾರಿ ನೀರವ್ ಮೋದಿ, ಮೆಹುಲ್ ಚೋಕ್ಸಿ ಹಾಗೂ ಉಷಾ ಸುಬ್ರಹ್ಮಣ್ಯನ್ ಸೇರಿದಂತೆ ಮೂವರು ಅಧಿಕಾರಿಗಳ ಹೆಸರಿದೆ.
ಅಲಹಾಬಾದ್ ಬ್ಯಾಂಕ್ ಸಿಇಒ ಮತ್ತು ವ್ಯವಸ್ಥಾಪಕ ನಿದರ್ೆಶಕಿಯಾಗಿದ್ದ ಉಷಾ ಅನಂತಸುಬ್ರಹ್ಮಣ್ಯನ್ ಅವರು ವಂಚನೆ ನಡೆದ ಸಮಯದಲ್ಲಿ ಪಿಎನ್ ಬಿ ಬ್ಯಾಂಕ್ ನಿದರ್ೆಶಕಿಯಾಗಿದ್ದರು.