ಪಿಎನ್ಬಿಗೆ ಇಂಗ್ಲೆಂಡ್ನಲ್ಲೂ 37 ದಶಲಕ್ಷ ಡಾಲರ್ ವಂಚನೆ

ಲಂಡನ್ 10: ಕಳಂಕಿತ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಆತನ ಬಳಗ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ಗೆ ಬಹು ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣದ ದೊಡ್ಡ ಸುದ್ದಿಯಾಗಿರುವಾಗಲೇ, ಪಿಎನ್ಬಿಗೆ ಇಂಗ್ಲೆಂಡ್ನಲ್ಲೂ 37 ದಶಲಕ್ಷ ಡಾಲರ್(271 ಕೋಟಿ ರೂ.ಗಳು) ನಾಮ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿದೆ. 

ಈ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ಐವರು ಭಾರತೀಯರು, ಒಬ್ಬ ಅಮೆರಿಕನ್ ಹಾಗೂ ಇಂಗ್ಲೆಂಡ್ನ ಮೂರು ಕಂಪನಿಗಳ ವಿರುದ್ಧ ಬ್ರಿಟನ್ ಹೈಕೋಟರ್್ನಲ್ಲಿ ದಾವೆ ಹೂಡಿದೆ. 

ಆರೋಪಿಗಳು ವಂಚನೆ ಮತ್ತು ಮೋಸದಿಂದ ಬ್ಯಾಂಕ್ ಅಧಿಕಾರಿಗಳ ದಿಕ್ಕು ತಪ್ಪಿಸಿ, ಕೋಟ್ಯಂತರ ಡಾಲರ್ ಸಾಲ ಪಡೆದಿದ್ದಾರೆ ಎಂದು ದೂರಿನಲ್ಲಿ ಪಿಎನ್ಬಿ ಆರೋಪಿಸಿದೆ. 

ಬ್ಯಾಂಕಿಗೆ 37 ದಶಲಕ್ಷ ಡಾಲರ್ ಅಂದರೆ 271 ಕೋಟಿ ರೂ.ಗಳು ಬಾಕಿ ಬರಬೇಕಿದೆ. ಪಾವತಿಯಾಗದಿರುವ ಈ ಹಣವನ್ನು ತನಗೆ ದಕ್ಕಿಸಿಕೊಡುವಂತೆ ಉನ್ನತಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.        

ಪಂಬಾಬ್ ನ್ಯಾಷನಲ್ ಬ್ಯಾಂಕ್(ಇಂಟರ್ನ್ಯಾಷನಲ್) ಲಿಮಿಟೆಡ್ ಬ್ರಿಟನ್ನಲ್ಲಿ ಒಟ್ಟು ಏಳು ಶಾಖೆಗಳನ್ನು ಹೊಂದಿದೆ. ಆರೋಪಿಗಳಾಗಿರುವ ಆರು ಮಂದಿ ಮತ್ತು ಮೂರು ಸಂಸ್ಥೆಗಳು ಮೋಸದಿಂದ ಸಾಲಗಳನ್ನು ಪಡೆಯಲು ತಪ್ಪು ಮಾಹಿತಿಗಳನ್ನು ನೀಡಿದ್ದಾರೆ. ಅಲ್ಲದೇ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಕ್ಯಾಲಿಫೋನರ್ಿಯಾದಲ್ಲಿರುವ ಲೂಬ್ರಿಕೆಂಟ್ ಆಯಿಲ್ (ಕೀಲೆಣ್ಣೆ) ಶುದ್ಧೀಕರಣ ಘಟಕ ಸ್ಥಾಪನೆ, ವಿಂಡ್ ಎನಜರ್ಿ(ಪವನ ವಿದ್ಯುತ್) ಯೋಜನೆಗಳ ಅಭವೃದ್ದಿ ಹಾಗೂ ಮಾರಾಟಕ್ಕಾಗಿ ಈ ಸಾಲಗಳನ್ನು ಪಡೆಯಲಾಗಿತ್ತು ಎಂದು ಬ್ಯಾಂಕ್ ಆರೋಪಿಸಿದೆ. 

ಸಾಲ ಪಡೆಯುವ ಸಲುವಾಗಿ ಯೋಜನೆಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ತಪ್ಪು ಮತ್ತು ದೋಷಪೂರಿತ ಮಾಹಿತಿಗಳನ್ನು ನೀಡಲಾಗಿದೆ. ಅತ್ಯಧಿಕ ಅಂದಾಜು ಮೌಲ್ಯಗಳು ಮತ್ತು ಆಥರ್ಿಕ ಸ್ಥಿತಿಗಳ ಸುಳ್ಳು ವಿವರಗಳನ್ನು ಸಲ್ಲಿಸಲಾಗಿದೆ. ಯೋಜನೆಗಳ ಹೆಸರಿನಲ್ಲಿ ಪಡೆಯಲಾದ ಸಾಲದ ಹಣವನ್ನು ಆರೋಪಿಗಳು, ಕಂಪನಿ ನಿದರ್ೇಶಕರು ಮತ್ತು ಸಾಲಗಾರರ ಜಾಮೀನುದಾರರು ದುರ್ಬಳಕೆ ಮಾಡಿಕೊಂಡಿದ್ಧಾರೆ. ಇದು ವ್ಯವಸ್ಥಿತ ವಂಚನೆ ಜಾಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪಿಎನ್ಬಿ ಕೋಟರ್್ಗೆ ಹೂಡಿರುವ ಖಟ್ಲೆಯಲ್ಲಿ ಆಪಾದಿಸಿದೆ. 

ಲಂಡನ್ನ ಪಿಎನ್ಬಿ ಶಾಖೆಯಿಂದ 2011 ಮತ್ತು 2014ರ ಅವಧಿಯಲ್ಲಿ ನಾಲ್ಕು ಕಂಪನಿಗಳಿಗೆ ಸಾಲ ನೀಡಲಾಗಿದ್ದು, ಇವೆಲ್ಲವೂ ಆಮೆರಿಕದಲ್ಲಿ ನೋಂದಣಿಯಾಗಿರುವ ಸಂಸ್ಥೆಗಳಾಗಿವೆ. ಇವು ರಿನವೆಬಲ್ ಎನಜರ್ಿ(ನವೀಕರಿಸಬಹುದಾದ ಇಂಧನ) ಮೂಲದ ವಿದ್ಯುತ್ ಕಂಪನಿಗಳಾಗಿದ್ದು, ನೀತಿ ನಿಯಮಗಳನ್ನು ಉಲ್ಲಂಘಿಸಿ ಸಾಲ ಎತ್ತುವಳಿ ಮಾಡಿ ಉದ್ದೇಶಪೂರ್ವಕ ಸುಸ್ತಿದಾರ ಸಂಸ್ಥೆಗಳಾಗಿವೆ ಎಂದು ಬ್ಯಾಂಕ್ ದೂರಿದೆ. 

ಸೌತ್ ಈಸ್ಟನರ್್ ಪೆಟ್ರೋಲಿಯಂ ಎಲ್ಎಲ್ಸಿ, ಪೆಸ್ಕೋ ಬೀಮ್ ಯುಎಸ್ಎ, ತ್ರಿಶ್ ವಿಂಡ್ ಮತ್ತು ತ್ರಿಶ್ ರಿಸೋಸರ್್ ಈ ಸಂಸ್ಥೆಗಳಿಗೆ ಸಾಲ ನೀಡಲಾಗಿದೆ. ಇವುಗಳಲ್ಲಿ ಸೌತ್ ಈಸ್ಟನರ್್ ಪೆಟ್ರೋಲಿಯಂ ಈಗಾಗಲೇ 17 ದಶಲಕ್ಷ ಡಾಲರ್ ಸುಸ್ತಿ ಬಾಕಿ ಉಳಿಸಿಕೊಂಡಿದ್ದು, ಸಂಸ್ಥೆ ಬಹುತೇಕ ದಿವಾಳಿಯತ್ತ ತಲುಪಿದೆ ಎಂದು ಆರೋಪಿಸಲಾಗಿದೆ.