ಪಿ ಎನ್ ಬಿ, ಒಬಿಸಿ ವಿಲೀನ ಬ್ಯಾಂಕ್ ಗೆ ಸದ್ಯದಲ್ಲಿಯೇ ಹೊಸ ಹೆಸರು, ಲೋಗೋ

ಕೋಲ್ಕತಾ, ಫೆ ೮:   ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿ  ಎನ್ ಬಿ), ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯು  ಬಿ ಐ) ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒ ಬಿ ಸಿ)   ಬ್ಯಾಂಕ್ ಗಳನ್ನು  ವಿಲೀನಗೊಳಿಸಲಾಗುತ್ತಿದೆ.  ಮೂರೂ  ಬ್ಯಾಂಕ್ ಗಳ  ವಿಲೀನದಿಂದ  ರೂಪುಗೊಳ್ಳುವ  ಹೊಸ ಬ್ಯಾಂಕ್ ನ   ಹೆಸರು,   ಹಾಗೂ  ಅದರ ಅಧಿಕೃತ  ಲೋಗೋ ವನ್ನು  ಸದ್ಯದಲ್ಲೇ  ಕೇಂದ್ರ  ಸರ್ಕಾರ   ಅನಾವರಣಗೊಳಿಸಲಿದೆ ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ  ಬ್ಯಾಂಕ್ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿ ಅವಿರ್ಭವಿಸಲಿದೆ.  ಬ್ಯಾಂಕಿನ  ವಹಿವಾಟು  ಪ್ರಮಾಣ ೧೮ ಲಕ್ಷ ಕೋಟಿಗಳಾಗಲಿದೆ.  ಹೊಸ ಬ್ಯಾಂಕ್ ೨೦೨೦ ರ ಏಪ್ರಿಲ್ ೧ ರಿಂದ ಕಾರ್ಯಾರಂಭಮಾಡಲಿದೆ.