ನವದೆಹಲಿ: ತಮ್ಮ ಸ್ಮಾರ್ಟ್ ನೆಸ್ ಹಿಂದಿರುವ ರಹಸ್ಯ ಬಹಿರಂಗಪಡಿಸಿದ ಪ್ರಧಾನಿ ಮೋದಿ

ನವದೆಹಲಿ 24: ನರೇಂದ್ರ  ಮೋದಿ   ತಮ್ಮ  ಸ್ಮಾರ್ಟ್ ನೆಸ್  ಹಿಂದಿನ  ರಹಸ್ಯ   ಬಹಿರಂಗಪಡಿಸಿದ್ದಾರೆ. ಸದಾ  ತಮ್ಮ ಮುಖ ಪ್ರಕಾಶ ಮಾನವಾಗಿ  ಹೊಳೆಯಲು ಹಿಂದಿರುವ  ಹಲವು ಕಾರಣಗಳನ್ನು  ವಿದ್ಯಾರ್ಥಿಗಳೊಂದಿಗೆ  ಹಂಚಿಕೊಂಡಿದ್ದಾರೆ.  

ಗಣತಂತ್ರ ದಿನೋತ್ಸವ ಅಂಗವಾಗಿ  “ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ೨೦೨೦”   ಪ್ರಧಾನ  ಸಂದರ್ಭದಲ್ಲಿ   ಮಕ್ಕಳೊಂದಿಗೆ ಸಂವಾದ ನಡೆಸಿದರು.  ಬಹಳ  ಹೊತ್ತು ಅವರೊಂದಿಗೆ ಸಮಯ ಕಳೆದು,   ಕೆಲ ವಿಷಯಗಳನ್ನು ಹಂಚಿಕೊಂಡರು.   ಈ ಸಂದರ್ಭದಲ್ಲಿ ಪ್ರಧಾನಿ ಮಾತನಾಡುತ್ತಾ..  ತಮ್ಮ ಮುಖ ಸದಾ ಪ್ರಕಾಶ ಮಾನವಾಗಿ ಹೊಳೆಯಲು  ಕಾರಣವೇನು ಎಂದು  ಒಬ್ಬರು    ಪ್ರಶ್ನಿಸಿದ್ದರು  ಎಂಬುದನ್ನು ಹೇಳಿಕೊಂಡಿದ್ದಾರೆ.

 ನಾನು  ಸದಾ  ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಬೆವರು    ಹರಿಸುತ್ತೇನೆ. ಇದು ತನ್ನ ಚರ್ಮದ ಹೊಳಪಿಗೆ ಕಾರಣ ಎಂದು  ನಾನು ಅವರಿಗೆ  ಉತ್ತರಿಸಿದ್ದೆ  ಎಂದು   ಪ್ರಧಾನಿ ಹೇಳಿದ್ದಾರೆ.

ವಿದ್ಯಾರ್ಥಿಗಳು ಸದಾ   ಕಷ್ಟಪಟ್ಟು ಕೆಲಸ ಮಾಡಬೇಕು. ದಿನಕ್ಕೆ ನಾಲ್ಕು ಬಾರಿ ಬೆವರು ಹರಿಸುವ ಕೆಲಸ ಮಾಡಬೇಕು  ಎಂದು   ವಿದ್ಯಾರ್ಥಿಗಳಿಗೆ ಮೋದಿ ಸಲಹೆ ನೀಡಿದರು. 

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ  ಕಠಿಣ ಪರಿಶ್ರಮದ ತತ್ವವನ್ನು ಜೀವನದಲ್ಲಿ   ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಮಾನ್ಯತೆ ಮತ್ತು ಪ್ರಶಸ್ತಿಗಳು ಬಂದಾಗ ಕೆಲವರು  ಅಹಂಕಾರದಿಂದ ಶ್ರಮ ಪಡುವುದನ್ನು ನಿಲ್ಲಿಸುತ್ತಾರೆ, ಆದರೆ   ಕೆಲವರಿಗೆ    ಪ್ರಶಸ್ತಿ,  ಮಾನ್ಯತೆ ಇನ್ನಷ್ಟು ಕಠಿಣವಾಗಿ  ದುಡಿಯಲು ಪ್ರೇರೇಪಣೆ   ನೀಡುತ್ತದೆ  ಎಂದು ಅವರು ಹೇಳಿದ್ದಾರೆ.   ಪ್ರಶಸ್ತಿಗಳು   ನಮ್ಮ ಪರಿಶ್ರಮಕ್ಕೆ ಅಂತ್ಯವಿಲ್ಲ,   ಬದುಕಿಗೆ ನಾಂದಿ   ಎಂದು ಮೋದಿ ವಿದ್ಯಾರ್ಥಿಗಳಿಗೆ ಸೂಚಿಸಿದರು.