ನವದೆಹಲಿ, ಜೂನ್ ೨೨,ಭಾರತ- ಚೀನಾ ಗಡಿಯಲ್ಲಿನ ಸಂಘರ್ಷ ಕುರಿತಂತೆ ಆಯೋಜಿಸಲಾಗಿದ್ದ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ಡಾ|| ಮನಮೋಹನ್ ಸಿಂಗ್, ಪ್ರಧಾನಿ ಮೋದಿ ತಾವು ಬಳಸುವ ಪದಗಳ ಪರಿಣಾಮಗಳ ಆಲೋಚಿಸಬೇಕು ರಾಷ್ಟ್ರೀಯ ಭದ್ರತೆ, ಕಾರ್ಯತಂತ್ರ ಹಾಗೂ ಪ್ರಾದೇಶಿಕ ಹಿತಾಸಕ್ತಿಗಳಿಗೆ ಅವರ ಹೇಳಿಕೆಯಿಂದ ದಕ್ಕೆಯಾಗಬಾರದು ಎಂದು ಸೋಮವಾರ ಸಲಹೆ ನೀಡಿದ್ದಾರೆ.ಪ್ರಧಾನ ಮಂತ್ರಿ ಮೋದಿ ಅವರ ಹೇಳಿಕೆಗಳು, ಚೀನಾ ತನ್ನ ನಿಲುವು ಸಮರ್ಥಿಸಿಕೊಳ್ಳಲು ಆಸ್ಪದ ಕಲ್ಪಿಸಬಾರದು ಎಂದು ಡಾ|| ಮನ್ ಮೋಹನ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪ್ರಸಕ್ತ ಸಂದರ್ಭದಲ್ಲಿ ನಾವು ಐತಿಹಾಸಿಕ ಕವಲು ದಾರಿಯಲ್ಲಿದ್ದೇವೆ.
ನಮ್ಮ ಸರ್ಕಾರದ ನಿರ್ಧಾರಗಳು ಹಾಗೂ ಕ್ರಮಗಳು. ಭವಿಷ್ಯದ ಪೀಳಿಗೆಗಳು ನಮ್ಮನ್ನು ಪರಿಶೀಲಿಸಲಿದೆ ಹಾಗಾಗಿ, ಆಡಳಿತ ನಡೆಸುವವರು ಗಂಭೀರ ಕರ್ತವ್ಯದ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಹೊಣೆಗಾರಿಕೆಯನ್ನು ಪ್ರಧಾನಿ ಮಂತ್ರಿ ಕಚೇರಿ ಹೊಂದಿದೆ. ಹಾಗಾಗಿ ಪ್ರಧಾನಿ ಮಾತನಾಡುವಾಗ ಬಳಸುವ ಪದಗಳ ಪರಿಣಾಮವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಪದಗಳು ರಾಷ್ಟ್ರೀಯ ಭದ್ರತೆ ಹಾಗೂ ಕಾರ್ಯತಂತ್ರ ಹಾಗೂ ಪ್ರಾದೇಶಿಕ ಹಿತಾಸಕ್ತಿಗಳಿಗೆ ದಕ್ಕೆ ತರಬಾರದು ಎಂದು ಹೇಳಿದ್ದಾರೆ.ಭಾರತ - ಚೈನಾ ಗಡಿಯಲ್ಲಿ ದೇಶದ ಭೌಗೋಳಿಕ ಸಮಗ್ರತೆ ರಕ್ಷಣೆಗಾಗಿ ಬಲಿದಾನ ಗೈದ ಕರ್ನಲ್ ಸಂತೋಷ್ ಬಾಬು ಸೇರಿಂತೆ ಎಲ್ಲ ನಮ್ಮ ಹುತಾತ್ಮ ಯೋಧರಿಗೆ ನ್ಯಾಯ ಖಾತರಿ ಪಡಿಸಬೇಕು ಎಂದು ಡಾ||ಮನಮೋಹನ್ ಸಿಂಗ್ ಮನವಿ ಮಾಡಿದ್ದಾರೆ.